ಕೋಲಾಹಲ ಎಬ್ಬಿಸಿದ ಲಡ್ಡುನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ವಿಚಾರ
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಪೊಲೀಸರಿಗೆ ದೂರು
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಿಗೂ ಸೂಚನೆ
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ವಿಚಾರ ದೊಡ್ಡ ಸುನಾಮಿಯನ್ನೇ ಎಬ್ಬಿಸಿದೆ. ಕೋಟ್ಯಂತರ ಭಕ್ತರನ್ನು ಆತಂಕಕ್ಕೆ ತಳ್ಳಿದೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಮತ್ತೆ ನಂದಿನಿ ತುಪ್ಪವನ್ನು ಬಾಲಾಜಿಯ ಲಡ್ಡು ತಯಾರಿಕೆಯಲ್ಲಿ ಬಳಕೆಯಾಗ್ತಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ವಿರುದ್ಧ ಕೇಸ್ ದಾಖವಾಗಿದೆ. ಅತ್ತ ತಿಮ್ಮಪ್ಪನ ಪ್ರಸಾದವನ್ನ ಅಪವಿತ್ರಗೊಳಿಸಿದ ಆರೋಪದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ.
ಇದನ್ನೂ ಓದಿ: Tirupati Laddu: ಭಕ್ತರಿಗೆ ನೀಡುವ ಲಡ್ಡುಗಳ ಇತಿಹಾಸವೇನು? ವಿಶಿಷ್ಟ ರುಚಿ ಕೊಡೋದಕ್ಕೆ ಇದೇ ಮುಖ್ಯ ಕಾರಣ!
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೇಳಿ ಬಂದಿರೋದು ಅಂತಿಂತ ಆರೋಪವಲ್ಲ. ತಿರುಪತಿ ತಿಮ್ಮಪ್ಪನ ಆರಾಧಿಸೋ ಕೋಟ್ಯಂತರ ಭಕ್ತರ ನಂಬಿಕೆಗೆ ಚ್ಯುತಿ ತಂದಿರೋ ಗುರುತರ ಆರೋಪ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರೋ ಕಳಂಕ. ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ತಿನ್ನೋ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಬಳಸಿರೋದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ದೂರು ದಾಖಲಾಗಿದೆ. ಮದ್ರಾಸ್ ಹೈಕೋರ್ಟ್‌ನ ವಕೀಲರು ಜಗನ್ ವಿರುದ್ಧ ತಮಿಳುನಾಡು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಮಿಳನಾಡು ಡಿಜಿಪಿ ಮತ್ತು ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ವಿವಾದ ತಾರಕಕ್ಕೇರುತ್ತಿದ್ದಂತೆ ಕರ್ನಾಟಕ ಸರ್ಕಾರ ಅಲರ್ಟ್ ಆಗಿದೆ. ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಕ್ರಮಕೈಗೊಳ್ಳಲು ಮುಂದಾಗಿದೆ. ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಸಿದ್ದರಾಮಯ್ಯ ಸರ್ಕಾರ ಖಡಕ್ ಸೂಚನೆಯೊಂದನ್ನ ನೀಡಿದ್ದಾರೆ. ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದ ಪರೀಕ್ಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದೇಗುಲಗಳ ಸೇವೆಗಳಿಗೆ, ಪ್ರಸಾದಕ್ಕೆ ನಂದಿನಿ ತುಪ್ಪ ಬಳಕೆಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಟ್ಯಾಂಕ್ನಲ್ಲಿ ಮೀನು ಬಿಡಿ ಎಂದಿದ್ದೇ ತಪ್ಪಾಯ್ತು; ಸಿಎಂ ಹೋದ ನಂತರ ನಡೆದಿದ್ದು ಅಕ್ಷರಶಃ ಲೂಟಿ
ದಾಸೋಹದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ರಾಜ್ಯ ಸರ್ಕಾರ ಸೂಚನೆ ಕೊಟ್ಟಿದೆ. ದೇವಸ್ಥಾನದ ಪ್ರಸಾದ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಿಗೂ ಸರ್ಕಾರ ಈ ಸೂಚನೆ ರವಾನಿಸಿದೆ. ಒಟ್ಟಾರೆ, ತಿರುಪತಿ ತಿಮ್ಮಪ್ಪನ ಪ್ರಸಾದ ಅಂದ್ರೆ ಕೋಟಿ ಕೋಟಿ ಭಕ್ತರಿಗೆ ಪ್ರಸಾದ ಮಾತ್ರವಲ್ಲ ಅದೊಂದು ಭಕ್ತಿ. ತನು-ಮನದಲ್ಲಿ ಆ ವೆಂಕಟೇಶನನ್ನು ನೆನೆಸಿಕೊಂಡು ಸ್ವೀಕರಿಸುವ ಪ್ರಸಾದ. ಸಾಕ್ಷಾತ್ ವೈಕುಂಠದಿಂದಲೇ ಸ್ವಾಮಿಯ ಪ್ರಸಾದ ಭಕ್ತರಿಗೆ ಸೇರುತ್ತದೆ ಅನ್ನೋ ನಂಬಿಕೆ. ಆದ್ರೆ ಈ ಎಲ್ಲಾ ನಂಬಿಕೆಗೆ ಧಕ್ಕೆಯಾಗಿರೋದು ನಿಜಕ್ಕೂ ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ