newsfirstkannada.com

‘ಗೃಹಲಕ್ಷ್ಮೀ’ಗೆ ಕಂಡೀಷನ್ ವಿಧಿಸಿದ ಸರ್ಕಾರ; 2000 ರೂ. ಹಣ ಸಿಗ್ಬೇಕು ಅಂದ್ರೆ ಏನ್ಮಾಡ್ಬೇಕು..?​​​

Share :

07-06-2023

  ಗೃಹಲಕ್ಷ್ಮೀಗೆ ಬಿಪಿಎಲ್, ಅಂತ್ಯೋದಯ ಕಾರ್ಡ್ ಕಡ್ಡಾಯ

  ಮಹಿಳೆ ಪತಿ ಆದಾಯ ತೆರಿಗೆ ಪಾವತಿದಾರರು ಆಗಿರಬಾರದು

  ಜಿಎಸ್​​ಟಿ ರಿಟರ್ನ್ ಸಲ್ಲಿಸುವ ಕುಟುಂಬಕ್ಕೂ ಯೋಜನೆ ಇಲ್ಲ

ಗೃಹಜ್ಯೋತಿ ಹಾಗೂ ಬಸ್​ಗಳಲ್ಲಿ ಉಚಿತ ಪ್ರಯಾಣ ಜಾರಿಗೊಳಿಸಿದ ಸರ್ಕಾರ ಅದಕ್ಕೆ ಮಾರ್ಗಸೂಚಿಗಳನ್ನು ರಿಲೀಸ್​ ಮಾಡಿತ್ತು. ಈ ಬೆನ್ನಲ್ಲೇ ಮತ್ತೊಂದು ಗ್ಯಾರಂಟಿ ಗೃಹಲಕ್ಷ್ಮೀಗೂ ಸರ್ಕಾರ ಗೈಡ್​ಲೈನ್ಸ್​ ಬಿಡುಗಡೆ ಮಾಡಿದೆ. ಹಾಗಿದ್ರೆ ಮನೆಯೊಡತಿಯರು 2 ಸಾವಿರ ರೂಪಾಯಿ ಪಡೆಯಬೇಕಾದ್ರೆ ಏನು ಮಾಡಬೇಕು ಅನ್ನೋದರ ವಿವರ ಇಲ್ಲಿದೆ.

ಪಂಚ ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಕ್ರಮೇಣವಾಗಿ ಒಂದೊಂದು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗ್ತಿದೆ. ಗ್ಯಾರಂಟಿಗಳಿಗಾಗಿ ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡ್ತಿದೆ. ಮೊನ್ನೆ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಂತ ಶಕ್ತಿ ಹಾಗೂ 200 ಯುನಿಟ್ ಉಚಿತ ವಿದ್ಯುತ್​ನಂತಹ ಗೃಹ ಜ್ಯೋತಿ ಬಗ್ಗೆ ಗೈಡ್​ಲೈನ್ಸ್​ ಬಿಟ್ಟಿದ್ದ ಸರ್ಕಾರ ಕಳೆದ ರಾತ್ರಿ ಇದ್ದಕ್ಕಿದ್ದಂತೆ ಮತ್ತೊಂದು ಮಾರ್ಗಸೂಚಿ ಬಹಿರಂಗಪಡಿಸಿದೆ.

ಗೃಹಲಕ್ಷ್ಮೀ ಯೋಜನೆಗೆ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಗೃಹಲಕ್ಷ್ಮೀ ಯೋಜನೆಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಚುನಾವಣೆಗೂ ಮುನ್ನ ಸರ್ಕಾರ ಬಂದು 24 ಗಂಟೆಗಳಲ್ಲೇ ಗ್ಯಾರಂಟಿ ಈಡೇರಿಸುತ್ತೇವೆ ಅಂದಿದ್ದ ಸಿದ್ದರಾಮಯ್ಯ ಈಗ ಸಿಎಂ ಆಗಿ 20ಕ್ಕೂ ಹೆಚ್ಚಿನ ದಿನಗಳ ಬಳಿಕ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಅದು ಕೂಡ ಮೊದಲಿಲ್ಲದ ಕಂಡೀಶನ್​ಗಳನ್ನು ಈಗ​ ಹಾಕೋ ಮೂಲಕ ಸರ್ಕಾರ ಇಬ್ಬಗೆಯ ನೀತಿಯನ್ನು ಅನುಸರಿಸಿದೆ. ಮನೆ ಒಡತಿಗೆ 2 ಸಾವಿರ ಕೊಡುವ ಗೃಹಲಕ್ಷ್ಮೀ ಯೋಜನೆಗೆ ಷರತ್ತು ಹಾಕಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಗೃಹ‘ಲಕ್ಷ್ಮೀ’ಗೆ ಕಂಡೀಷನ್ಸ್​​!

1. ಗೃಹಲಕ್ಷ್ಮೀಗೆ ಬಿಪಿಎಲ್, ಅಂತ್ಯೋದಯ ಕಾರ್ಡ್ ಕಡ್ಡಾಯ
2. ಕಾರ್ಡ್​ನಲ್ಲಿ ನಮೂದಾದ ಯಜಮಾನಿಗೆ ಮಾತ್ರ ₹2 ಸಾವಿರ
3. ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ ಯೋಜನೆ ಲಾಭ
4. ಮಹಿಳೆ ಪತಿ ಆದಾಯ ತೆರಿಗೆ ಪಾವತಿದಾರರು ಆಗಿರಬಾರದು
5. ಆದಾಯ ತೆರಿಗೆ ಪಾವತಿಸುವ ಕುಟುಂಬಕ್ಕಿಲ್ಲ ₹2 ಸಾವಿರ
6. ಜಿಎಸ್​​ಟಿ ರಿಟರ್ನ್ ಸಲ್ಲಿಸುವ ಕುಟುಂಬಕ್ಕೂ ಯೋಜನೆ ಇಲ್ಲ

ಕಂಡೀಶನ್ಸ್​ ಕತೆಯಾದ್ರೆ ಯಜಮಾನಿಯರು ಹಣವನ್ನು ಹೇಗೆ ಪಡೆಯಬೇಕೆನ್ನುವ ಬಗ್ಗೆ ಮಾರ್ಗವನ್ನು ಸರ್ಕಾರ ತಿಳಿಸಿದೆ.

ಗೃಹಲಕ್ಷ್ಮೀಗೆ ಗೈಡ್​ಲೈನ್ಸ್​

 • ಜೂನ್ 15 ರಿಂದ ಜುಲೈ 15ರವರೆಗೆ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಕೆ
 • ಸೇವಾಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು
 • ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ
 • ಜುಲೈ 15 ರಿಂದ ಆಗಸ್ಟ್ 15 ಅರ್ಜಿ ಪರಿಶೀಲನೆ, 15ರಂದು ಜಾರಿ
 • ಯೋಜನೆಗೆ ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಕಡ್ಡಾಯ
 • ತಪ್ಪು ಮಾಹಿತಿ ನೀಡಿದ್ರೆ ಸರ್ಕಾರದಿಂದ ಸೂಕ್ತ ಕ್ರಮದ ಎಚ್ಚರಿಕೆ

ಕೃಷಿ ಸಚಿವ ಚೆಲುವರಾಯಸ್ವಾಮಿ ಕಾಂಗ್ರೆಸ್​ ಘೋಷಿಸಿದ ಪಂಚ ಗ್ಯಾರಂಟಿಗಳು ಚುನಾವಣಾ ಗಿಮಿಕ್ ಅಂತ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಗ್ಯಾರಂಟಿಗಳು ಅನುಷ್ಠಾನ ಹಂತದಲ್ಲಿರುವಾಗಲೇ ಚೆಲುವರಾಯಸ್ವಾಮಿ ನೀಡಿದ ಹೇಳಿಕೆ ಹಲ್​ಚಲ್​ ಸೃಷ್ಟಿಸಿದೆ. ಉಚಿತ ಭರವಸೆಗಳೆಲ್ಲ ಕೇವಲ ಚುನಾವಣಾ ಗಿಮಿಕ್. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಇಂಥ ಗಿಮಿಕ್​ಗಳನ್ನು ಮಾಡಲಾಗಿದೆ ಅಂತ ಸಚಿವರು ಹೇಳಿರೋ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡ್ತಿದೆ.

ಒಟ್ಟಾರೆ ಮೂರನೇ ಗ್ಯಾರಂಟಿ ಜಾರಿಗೆ ಸರ್ಕಾರ ಗೈಡ್​ಲೈನ್ಸ್​ ಬಿಡುಗಡೆ ಮಾಡಿದೆ. ಚುನಾವಣೆಗೂ ಮೊದಲು ಯಾವುದೇ ಕಂಡಿಷನ್ ಹಾಕದ ಸರ್ಕಾರ ಈಗ ಒಂದೊಂದು ಷರತ್ತುಗಳನ್ನು ಹಾಕ್ತಿರೋದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗ್ತಿದೆ. ನುಡಿದಂತೆ ನಡೀತಿವಿ ಅಂತ ಹೇಳ್ತಿರೋ ಸರ್ಕಾರ ಮೊದಲು ಹಾಕದ ಷರತ್ತುಗಳನ್ನು ಈಗ ಹಾಕ್ತಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗೃಹಲಕ್ಷ್ಮೀ’ಗೆ ಕಂಡೀಷನ್ ವಿಧಿಸಿದ ಸರ್ಕಾರ; 2000 ರೂ. ಹಣ ಸಿಗ್ಬೇಕು ಅಂದ್ರೆ ಏನ್ಮಾಡ್ಬೇಕು..?​​​

https://newsfirstlive.com/wp-content/uploads/2023/06/SIDDARAMIAH.jpg

Load More