newsfirstkannada.com

VIDEO: ‘ಗೃಹಲಕ್ಷ್ಮಿ’ಯರಿಗೆ ತಲೆನೋವಾದ ತಾಂತ್ರಿಕ ದೋಷ; ಸರ್ವರ್ ಡೌನ್‌ ಎಂದ ಸಿಬ್ಬಂದಿ ಮೇಲೆ ಹಿಗ್ಗಾಮುಗ್ಗ ಹಲ್ಲೆ

Share :

23-07-2023

  ಗೃಹಲಕ್ಷ್ಮಿ ಫಲಾನುಭವಿಗಳಿಗೆ ತಲೆನೋವು ತಂದ ಸರ್ವರ್ ಡೌನ್

  ರಾಜ್ಯಾದ್ಯಂತ ಗೃಹಲಕ್ಷ್ಮಿಯರಿಗೆ ಕಂಟಕವಾದ ತಾಂತ್ರಿಕ ದೋಷ

  ಗ್ಯಾರಂಟಿ ಫಲಾನುಭವಿಗಳಿಗೆ ಅಡ್ಡಿಯಾದ ಸರ್ವರ್ ಸಮಸ್ಯೆ

ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಗ್ಯಾರಂಟಿಗಳು ಈಗಾಗಲೇ ಚಾಲ್ತಿಯಲ್ಲಿವೆ. ಇದೀಗ ನಾಲ್ಕನೇ ಯೋಜನೆ ಗೃಹಲಕ್ಷ್ಮಿ ಫಲಾನುಭವಿಗಳಾಗಲು ಮಹಿಳೆಯರು ಮುಗಿಬಿದ್ದಿದ್ದಾರೆ. ಅರ್ಜಿ ಸಲ್ಲಿಕೆ ಮಾಡಲು ಮಹಿಳೆಯರು ನೋಂದಾಣಿ ಕಚೇರಿಗಳತ್ತ ದೌಡಾಯಿಸುತ್ತಿದ್ದಾರೆ. ಆದರೆ ಗೃಹಲಕ್ಷ್ಮಿ ಜಾರಿಗೆ ಬಂದ ಮೊದಲ ದಿನದಿಂದ ಇಲ್ಲಿಯವರೆಗೂ ಸರ್ವರ್ ಸಮಸ್ಯೆ ಎದುರಾಗುತ್ತಲೇ ಇದೆ. ಇದರ ಮಧ್ಯೆ ಗೃಹಲಕ್ಷ್ಮಿ ಅರ್ಜಿ ಆಪರೇಟರ್ ಹಾಗೂ ಸಿಬ್ಬಂದಿ ಮೇಲೆ ಸಾರ್ವಜನಿಕರಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ವೀರಪುರ ಓಣಿಯಲ್ಲಿನ ಕರ್ನಾಟಕ ಒನ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ತಾಂತ್ರಿಕ ದೋಷದಿಂದ ಇಂದು ಸಹ ಗೃಹಲಕ್ಷ್ಮಿ ಸರ್ವರ್ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸರ್ಕಾರ ನಿನ್ನೆ ರಾತ್ರಿ ಸರ್ಕುಲೇಷನ್ ಪಾಸ್ ಮಾಡಿದೆ. ಬೇಕು ಬೇಕು ಅಂತಾನೇ ನೀವು ಕೇಂದ್ರವನ್ನು ಬಂದ್ ಮಾಡಿದ್ದೀರಿ ಎಂದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳಾ ಸಿಬ್ಬಂದಿ ಪ್ರಿಯಾಂಕಾ ವಾಂಕರ್ ಹಾಗೂ ಸೆಕ್ಯೂರಿಟಿಗಾರ್ಡ್ ಕಿರಣ್ ಹಲ್ಲೆಗೊಳಗಾದವರು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಂಡಿಗೇರಿ ಪಿಎಸ್ಐ ಶರಣು ದೇಸಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರದ ಹೊರಗೆ ನೋಟಿಸ್ ಹಾಕಿದರು ಅದನ್ನು ಗಮನಿಸದ ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಬೆಳಗಿನ ಜಾವ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಸುಮಾರು 300ಕ್ಕೂ ಹೆಚ್ಚಿನ ಜನರು ಆಗಮಿಸಿದ್ದರು. ಆಮೇಲೆ ಸರ್ವರ್ ಸಮಸ್ಯೆ ಎಂದಾಗ ಸಿಟ್ಟಿಗೆದ್ದ ಜನರು ಹಲ್ಲೆಗೆ ಮುಂದಾಗಿದ್ದಾರೆ. ಇದೀಗ ಕರ್ನಾಟಕ ಒನ್ ಕೇಂದ್ರದ ಎದುರು ಬೆಂಡಿಗೇರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಗೃಹಲಕ್ಷ್ಮಿ’ಯರಿಗೆ ತಲೆನೋವಾದ ತಾಂತ್ರಿಕ ದೋಷ; ಸರ್ವರ್ ಡೌನ್‌ ಎಂದ ಸಿಬ್ಬಂದಿ ಮೇಲೆ ಹಿಗ್ಗಾಮುಗ್ಗ ಹಲ್ಲೆ

https://newsfirstlive.com/wp-content/uploads/2023/07/gruha-2.jpg

Load More