newsfirstkannada.com

ಮದುವೆ ಬಳಿಕ ಸಂಗಾತಿ ಜೊತೆ ಸೆಕ್ಸ್ ನಿರಾಕರಿಸೋದು ಕ್ರೌರ್ಯ -ಹೈಕೋರ್ಟ್​ನಿಂದ ಮಹತ್ವದ ತೀರ್ಪು

Share :

20-06-2023

    ನ್ಯಾ.ಎಂ.ನಾಗಪ್ರಸನ್ನ ಏಕಸದಸ್ಯ ಪೀಠದಿಂದ ತೀರ್ಪು

    ಯಾವ ಕಾಯ್ದೆ ಪ್ರಕಾರ ಸೆಕ್ಸ್ ನಿರಾಕರಿಸೋದು ಕ್ರೌರ್ಯ?

    ಪ್ರಕರಣದ ಹಿನ್ನಲೆ ಏನು ಗೊತ್ತಾ..?

ಬೆಂಗಳೂರು: ಮದುವೆ ಬಳಿಕ ಸಂಗಾತಿ ಜೊತೆ ಲೈಂಗಿಕ ಕ್ರಿಯೆಗೆ ನಿರಾಕರಿಸುವುದು ಹಿಂದೂ ವಿವಾಹ ಕಾಯ್ದೆ 1955ರ  ಸೆಕ್ಷನ್ 12(1)(ಎ)ರ ಪ್ರಕಾರ ಕ್ರೌರ್ಯ ಎಂದು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು ಈ ತೀರ್ಪು ನೀಡಿದೆ. ದಾಂಪತ್ಯಕ್ಕೆ ಕಾಲಿಟ್ಟ ಬಳಿಕ ದೈಹಿಕ ಸಂಪರ್ಕ ನಿರಾಕರಣೆ ಮಾಡುವುದು ಸರಿಯಲ್ಲ. ಆದರೆ ಭಾರತೀಯ ದಂಡ ಸಂಹಿತೆ ಅಡಿ ಇದು ಅಪರಾಧವಲ್ಲ. ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಇದು ಅಪರಾಧವಾಗಲ್ಲ. ಆದರೆ ಹಿಂದೂ ವಿವಾಹ ಕಾಯ್ದೆಯಡಿ ಕ್ರೌರ್ಯವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿರುವ ಕೋರ್ಟ್​, ಪತಿ ಹಾಗೂ ಪೋಷಕರ ವಿರುದ್ಧ ಸಲ್ಲಿಸಲಾಗಿರುವ ಕೇಸ್ ಅನ್ನು ರದ್ದುಗೊಳಿಸಿದೆ.

ಪ್ರಕರಣದ ಹಿನ್ನಲೆ:
ಬೆಂಗಳೂರಿನ ದಂಪತಿ 2019 ರ ಡಿಸೆಂಬರ್ 18 ರಂದು ಮದುವೆಯಾಗಿತ್ತು. ಆ ನಂತರ 28 ದಿನಗಳ ಕಾಲ ದಂಪತಿ ಮನೆಯಲ್ಲಿ ಜೊತೆಯಾಗಿದ್ದರು. ಆದ್ರೆ ವಿವಾದ ಬಳಿಕ ಪತಿ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ್ದರು. ಆಧ್ಯಾತ್ಮಿಕ ಸಾಧನೆಯತ್ತ ಒಲವು ಬೆಳೆಸಿಕೊಂಡಿದ್ದ ಪತಿ, ಪತ್ನಿಯ ದೈಹಿಕ ಪ್ರೀತಿಗಿಂತ ಆತ್ಮಗಳ ಪ್ರೀತಿ ಮುಖ್ಯ ಎನ್ನುತ್ತಿದ್ದರಂತೆ. ಮಾತ್ರವಲ್ಲ, ಆಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸಲು ಹೇಳ್ತಿದ್ದ ಎಂದು ಆರೋಪಿಸಲಾಗಿತ್ತು. ಇದೇ ಕಾರಣಕ್ಕೆ ಪತಿ ಮತ್ತು ಕುಟುಂಬದ ವಿರುದ್ಧ ಪತ್ನಿ ಪ್ರಕರಣಗಳನ್ನು ದಾಖಲಿಸಿದ್ದರು. ಪೊಲೀಸರು ಪತಿ ಕುಟುಂಬದ ವಿರುದ್ಧ IPC 498 ಅಡಿ ಕೇಸ್ ದಾಖಲಿಸಿದ್ದರು. ಮಾತ್ರವಲ್ಲ, ಕ್ರೌರ್ಯದ ಕಾರಣ ಹೇಳಿ ಡಿವೋರ್ಸ್ ಪಡೆದಿದ್ದಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಬಳಿಕ ಸಂಗಾತಿ ಜೊತೆ ಸೆಕ್ಸ್ ನಿರಾಕರಿಸೋದು ಕ್ರೌರ್ಯ -ಹೈಕೋರ್ಟ್​ನಿಂದ ಮಹತ್ವದ ತೀರ್ಪು

https://newsfirstlive.com/wp-content/uploads/2023/06/MARRIAGE-2.jpg

Load More