ಪ್ರತಿ ತಿಂಗಳ ಖರ್ಚಿಗೆ ₹6,16,300 ಯಾಕೆ ಬೇಕು ಗೊತ್ತಾ?
ಮೇಕಪ್, ಮೆಡಿಕಲ್‌ಗೆ & ಇತರೆ ವಸ್ತುಗಳ ಖರೀದಿಗೆ ಎಷ್ಟು?
ತಿಂಗಳಲ್ಲಿ ಊಟಕ್ಕೆ ₹40,000, ಬಟ್ಟೆಗೆ ₹50,000 ನೀಡಲು ಮನವಿ
ಬೆಂಗಳೂರು: ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದ ಒಂದು ವಿಚಿತ್ರ ಕೇಸ್ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಗಂಡನಿಂದ ತಿಂಗಳಿಗೆ 6 ಲಕ್ಷ ಜೀವನಾಂಶ ಕೋರಿ ಪತ್ನಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ತಿಂಗಳಿಗೆ 6 ಲಕ್ಷ ಕೇಳಿ ಅರ್ಜಿ ಹಾಕಿದ್ದ ಪತ್ನಿಗೆ ಹೈಕೋರ್ಟ್ ಜಸ್ಟೀಸ್ ಲಲಿತಾ ಕನ್ನೆಘಂಟಿ ಅವರು ತರಾಟೆ ತೆಗೆದುಕೊಂಡಿದ್ದಾರೆ. ಜೀವನಾಂಶ ಕೋರಿದ ಪತ್ನಿಯ ನಡೆಗೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಏನಿದು ಪ್ರಕರಣ?
ವಿಚ್ಛೇದನ ಪ್ರಕರಣವೊಂದರಲ್ಲಿ ಮೊದಲು ಫ್ಯಾಮಿಲಿ ಕೋರ್ಟ್ 50 ಸಾವಿರ ಜೀವನಾಂಶಕ್ಕೆ ಆದೇಶಿಸಿತ್ತು. ಅದನ್ನ ಹೆಚ್ಚಿಸಲು ಕೋರಿ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಪರ ವಕೀಲರ ವಾದ ಕೇಳಿದ ನ್ಯಾಯಾಧೀಶರು, ಅಷ್ಟು ಖರ್ಚು ಮಾಡಬೇಕು ಅಂದ್ರೆ ಆಕೆಯೇ ಸಂಪಾದಿಸಲಿ. ಇಲ್ಲಿ ಬಂದು ಚೌಕಾಸಿ ಮಾಡಲು ಕೋರ್ಟ್ ಮಾರ್ಕೆಟ್ ಅಲ್ಲ ಎಂದು ಅರ್ಜಿ ಹಾಕಿದ್ದ ಪತ್ನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೋರ್ಟ್ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ: ಹೆಂಡತಿಗೆ ರೀಲ್ಸ್ ಹುಚ್ಚು.. ಉಡುಪಿಯಲ್ಲಿ ಗಂಡನ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಹೈಕೋರ್ಟ್ ಅಭಿಪ್ರಾಯ ಏನು?
ಅರ್ಜಿದಾರೆಯು ಪ್ರತಿ ತಿಂಗಳ ಖರ್ಚಿಗೆ ₹6,16,300 ಬೇಕೆ? ಪತಿ ಸಂಪಾದನೆ ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು? ಆಕೆಯ ಅಗತ್ಯವೇನು? ಪತಿ ₹10 ಕೋಟಿ ಸಂಪಾದಿಸಬಹುದು. ಹಾಗೆಂದು ಕೋರ್ಟ್ ಆಕೆಗೆ ₹5 ಕೋಟಿ ಕೊಡಲು ಆದೇಶಿಸಲಾಗುತ್ತದೆಯೇ? ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ. ಹಾಗಾದರೆ ಅವರು ಸಂಪಾದಿಸಲಿ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಪತ್ನಿಯ ಕೋರಿಕೆ ಏನಿದೆ?
ಫ್ಯಾಮಿಲಿ ಕೋರ್ಟ್ ತಿಂಗಳಿಗೆ 50 ಸಾವಿರ ಜೀವನಾಂಶ ನಿಗದಿಪಡಿಸಿದೆ. ತನ್ನ ತಿಂಗಳ ಖರ್ಚು 6 ಲಕ್ಷವಾಗುತ್ತಿದೆ ಕನಿಷ್ಠ 5 ಲಕ್ಷ ತಿಂಗಳಿಗೆ ಜೀವನಾಂಶ ಪಾವತಿಸಲು ಆದೇಶಿಸಿಬೇಕು.
ಅರ್ಜಿದಾರೆ ವಾದವೇನು?
ಅರ್ಜಿದಾರೆ ಪತ್ನಿಗೆ ಪೌಷ್ಠಿಕಾಂಶಯುಕ್ತ ಆಹಾರಬೇಕಿದೆ. ಈಗ ಅವರು ಹೊರಗಡೆ ಊಟ ಮಾಡುವಂತಾಗಿದೆ. ಪತ್ನಿಗೆ ಊಟಕ್ಕೆ ತಿಂಗಳಿಗೆ ₹40,000 ಬೇಕಿದೆ. ಆಕೆಯ ಡಿವೋರ್ಸ್ ಪತಿ ಪ್ರತಿದಿನ ಬ್ರಾಂಡೆಡ್ ಬಟ್ಟೆಗಳ ಧರಿಸುತ್ತಿದ್ದಾರೆ. ಪತಿ ಧರಿಸುವ ಒಂದು ಶರ್ಟಿನ ಬೆಲೆ ₹10,000 ಇದೆ. ಪತ್ನಿ ಹಳೆಯ ಬಟ್ಟೆ ಧರಿಸಬೇಕಾದ ಪರಿಸ್ಥಿತಿ ಇದೆ. ಬಟ್ಟೆ ಬರೆಗಾಗಿ ರೂ.50,000 ರೂಪಾಯಿ ಬೇಕಾಗಿದೆ. ಮೇಕಪ್, ಮೆಡಿಕಲ್‌ಗೆ & ಇತರೆ ವಸ್ತುಗಳ ಖರೀದಿಗೆ 60,000 ಬೇಕಿದೆ.
ಈ ವಾದವನ್ನು ಕೇಳುತ್ತಲೇ ಗರಂ ಆದ ನ್ಯಾಯಮೂರ್ತಿಗಳು, ನಿಮ್ಮ ಕಕ್ಷಿದಾರರಿಗೆ ಏನು ಅರ್ಥವಾಗುತ್ತಿಲ್ಲ ಅನ್ಸುತ್ತೆ. ಆದರೆ ನೀವು ಅರ್ಥ ಮಾಡಿಕೊಂಡು ಆಕೆಗೆ ಸಲಹೆ ನೀಡಬೇಕು. ಆಕೆಯ ವಾಸ್ತವಿಕ ಖರ್ಚು ವೆಚ್ಚಗಳನ್ನು ಕೋರ್ಟ್‌ಗೆ ತಿಳಿಸಬೇಕು. ನ್ಯಾಯಯುತವಾಗಿ ನಡೆದುಕೊಳ್ಳಲು ನಿಮಗೆ ಕೊನೆಯ ಅವಕಾಶ ನೀಡುತ್ತೇನೆ ಎಂದು ಖಡಕ್ ವಾರ್ನಿಂಗ್ ಕೊಟ್ಟರು.
ಇದನ್ನೂ ಓದಿ: ಅಬ್ಬಬ್ಬಾ! 25kg ಚಿನ್ನಾಭರಣ ಧರಿಸಿ ತಿಮ್ಮಪ್ಪನ ದರ್ಶನ.. ಈ ರಾಯಲ್ ಫ್ಯಾಮಿಲಿ ಯಾವುದು?
ಕೋರ್ಟ್ ಕೊನೆಯ ಅವಕಾಶ
ನಿರೀಕ್ಷಾತ್ಮಕ ವೆಚ್ಚಗಳ ಆಧರಿಸಿ ಜೀವನಾಂಶಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಪತ್ನಿ ತನ್ನ ಮಾಸಿಕ ಖರ್ಚು ವೆಚ್ಚ ಎಂದು ವೈಯಕ್ತಿಕ ಖರ್ಚಿನ ವಿವರ ನೀಡಿದ್ದಾರೆ. ಇದರಲ್ಲಿ ಮಕ್ಕಳು & ಇತರೆ ಹೊಣೆಗಾರಿಕೆ ವಿಚಾರ ಪ್ರಸ್ತಾಪಿಸಿಲ್ಲ. ವಾಸ್ತವಿಕ ವೆಚ್ಚಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಲಾಗಿದೆ. ಇದು ಪತ್ನಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿಕೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ