newsfirstkannada.com

ಹಣ, ಆಸ್ತಿ, ಕೌಟುಂಬಿಕ ಸಮಸ್ಯೆ; ರಾಷ್ಟ್ರೀಯ ಲೋಕ ಅದಾಲತ್​​ನಲ್ಲಿ ಬರೋಬ್ಬರಿ 25 ಲಕ್ಷ ಕೇಸ್​ ಇತ್ಯರ್ಥ

Share :

Published December 12, 2023 at 7:55pm

    ಈ ಬಾರಿ 4,031 ಮೋಟಾರು ವಾಹನಗಳ ಪ್ರಕರಣಗಳು ಇತ್ಯರ್ಥ

    ಭಾರೀ ಪ್ರಮಾಣದಲ್ಲಿ ಕೇಸ್​ಗಳನ್ನು ಇತ್ಯರ್ಥ ಮಾಡಿದ ಅದಾಲತ್

    ಲೋಕಾ ಅದಾಲತ್ ಕಾರ್ಯಕ್ಕೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ

ಬೆಂಗಳೂರು: ಡಿಸೆಂಬರ್ 9 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿದ್ದು, ಒಟ್ಟು 25.1 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ ಎಂದು KSLSA ಅಧ್ಯಕ್ಷ ನ್ಯಾ. PS ದಿನೇಶ್ ಕುಮಾರ್ ಅವರು ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ KSLSA ಅಧ್ಯಕ್ಷ ನ್ಯಾ. PS ದಿನೇಶ್ ಕುಮಾರ್ ಅವರು ಮಾತನಾಡಿ, ಈ ಬಾರಿ ರಾಷ್ಟ್ರೀಯ ಲೋಕ ಅದಾಲತ್​​ಗೆ ಬರೋಬ್ಬರಿ 30 ಲಕ್ಷ ಪ್ರಕರಣಗಳು ಬಂದಿದ್ದವು. ಇವುಗಳಲ್ಲಿ 25.1 ಲಕ್ಷ ಕೇಸ್​ಗಳನ್ನ ಪರಿಹರಿಸಲಾಗಿದೆ. ನ್ಯಾಯಾಲಯದಲ್ಲಿದ್ದ 2.2 ಲಕ್ಷ ಪ್ರಕರಣಗಳು, ವ್ಯಾಜ್ಯ ಪೂರ್ವ 22.9 ಲಕ್ಷ ಕೇಸ್​ಗಳೆಲ್ಲ ಇತ್ಯರ್ಥ ಕಂಡಿವೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಲೋಕ ಅದಾಲತ್​​ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಅವರು ತಿಳಿಸಿದರು.

ಲೋಕ ಅದಾಲತ್​ 1,022 ಪೀಠಗಳಲ್ಲಿ ನಡೆಯಿತು. 30 ಲಕ್ಷ ಕೇಸ್​ಗಳಲ್ಲಿ 25.1 ಲಕ್ಷ ಪ್ರಕರಣಗಳು ಪರಿಹಾರ ಕಂಡಿವೆ. 1,358 ವೈವಾಹಿಕ ಪ್ರಕರಣಗಳು, 4,031 ಮೋಟಾರು ವಾಹನ ಕೇಸ್​ಗಳು ಹಾಗೂ ಪ್ರಕರಣಗಳಲ್ಲಿ 1,569 ಕೋಟಿ ಮೊತ್ತದ ಪ್ರಕರಣಗಳು ಸೇರಿದಂತೆ ಈ ಬಾರಿ 262 ದಂಪತಿಗಳನ್ನು ಪುನರ್ಮಿಲನ ಮಾಡಿರುವುದು ಲೋಕಾ ಆದಾಲತ್​ನ ಇನ್ನೊಂದು ವಿಶೇಷ ಕಾರ್ಯ ಎನಿಸಿತು ಎಂದು ಹೇಳಿದರು. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣ, ಆಸ್ತಿ, ಕೌಟುಂಬಿಕ ಸಮಸ್ಯೆ; ರಾಷ್ಟ್ರೀಯ ಲೋಕ ಅದಾಲತ್​​ನಲ್ಲಿ ಬರೋಬ್ಬರಿ 25 ಲಕ್ಷ ಕೇಸ್​ ಇತ್ಯರ್ಥ

https://newsfirstlive.com/wp-content/uploads/2023/12/LOKA_ADALATH.jpg

Load More