newsfirstkannada.com

ಹಿಂದೂ ಧರ್ಮ ಯಾವಾಗ ಹುಟ್ಟಿತು? ಹುಟ್ಟಿಸಿದ್ಯಾರು?; ಗೃಹ ಸಚಿವ ಪರಮೇಶ್ವರ್ ವಿವಾದಾತ್ಮಕ ಪ್ರಶ್ನೆ

Share :

06-09-2023

    ಹಿಂದೂ ಧರ್ಮವನ್ನ ಯಾರು ಹುಟ್ಟಿಸಿದ್ದರು?

    ಗೃಹ ಸಚಿವ ಪರಂ ಪ್ರಶ್ನೆಗೆ ಕಮಲ ಕೆಂಡಾಮಂಡಲ!

    ಪರಂ ಹೇಳಿಕೆಗೆ ಕೇಸರಿ ಪಡೆ ಫುಲ್​ ಗರಂ

ಇಂಡಿಯಾ ಬದಲು ಭಾರತ ಆಗ್ತಿದೆ. ಇಲ್ಲೂ ಧರ್ಮದ ಬೇರುಗಳಿವೆ. ಇತ್ತ, ದಕ್ಷಿಣದ ತಮಿಳುನಾಡಲ್ಲಿ ಉದಯನಿಧಿ ಎತ್ತಿದ ಪ್ರಶ್ನೆಯಲ್ಲೂ ಧರ್ಮದ ಬೇರು ಕೀಳುವ ಹೇಳಿಕೆ ಇದೆ. ಇಡೀ ದೇಶದ ರಾಜಕೀಯವೇ ಧರ್ಮಾಸ್ತ್ರವಾಗಿ ಶಸ್ತ್ರ ಕೋಟೆ ಸೇರ್ತಿದೆ. ಈ ನಡುವೆ ಗೃಹ ಸಚಿವ ಪರಮೇಶ್ವರ್​ ಮತ್ತು ಬಹುಭಾಷಾ ನಟ ಪ್ರಕಾಶ್​ ರಾಜ್​ ಎತ್ತಿದ ಪ್ರಶ್ನೆಗಳು ಸಮರವನ್ನ ಮತ್ತೊಂದು ಹೆಜ್ಜೆ ಮುಂದೊಕ್ಕೆ ಕೊಂಡೊಯ್ದಿದೆ.

ಸನಾತನ ಹೇಳಿಕೆ ದೇಶದಲ್ಲಿ ಕದನಕ್ಕೆ ನಾಂದಿ ಹಾಡಿದೆ. ತಮಿಳುನಾಡಿನಿಂದ ಸಿಡಿದ ಹೇಳಿಕೆ ದೇಶದ ಉದ್ದಗಲಕ್ಕೂ ಸದ್ದು ಮಾಡ್ತಿದೆ. ಉದಯನಿಧಿ ಮಾತಿಗೆ ಪರ-ವಿರೋಧದ ಹೇಳಿಕೆಗಳು ಪ್ರತಿಧ್ವನಿಸ್ತಿವೆ. ಇತ್ತ, ಕರ್ನಾಟಕದಲ್ಲೂ ಸನಾತನ ಬಗ್ಗೆ ದಲಿತ ಮಿನಿಸ್ಟರ್​​​​ ಫೋರಂ ಸೆಡ್ಡು ಹೊಡೆದಿದೆ. ಪ್ರಿಯಾಂಕ್​​​ ಖರ್ಗೆ, ಮಹದೇವಪ್ಪ ಬಳಿಕ ಗೃಹ ಸಚಿವ ಪರಮೇಶ್ವರ್​​ ಎತ್ತಿದ ಹೊಸ ಪ್ರಶ್ನೆ ಧರ್ಮ ಸಮರಕ್ಕೆ ಚಾಲನೆ ಕೊಟ್ಟಿದೆ.

‘ಸನಾತನ’ ಸದನದ ಕದನಕ್ಕೆ ಪರಮೇಶ್ವರ್​​ ಎಂಟ್ರಿ!

ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಗೃಹ ಸಚಿವ ಪರಮೇಶ್ವರ್​​ ಭಾಗಿ ಆಗಿದ್ರು. ಈ ವೇಳೆ, ಪರಂ ಎತ್ತಿದ ಪ್ರಶ್ನೆಗಳು ಸಂಘ ಪರಿವಾರವನ್ನ ಕೆರಳಿಸುವಂತೆ ಮಾಡಿದೆ. ಸನಾತನ ನಿರ್ಮೂಲನೆಯಾಗಬೇಕು ಎಂಬ ಉದಯನಿಧಿ ಸ್ಟಾಲಿನ್‌ ಹೇಳಿಕೆ ನೀಡಿರುವ ಬೆನ್ನಲ್ಲೇ ಪರಮೇಶ್ವರ್‌ ನೀಡಿರುವ ಹೇಳಿಕೆಯಿಂದ ಸಹಜವಾಗಿ ವಿವಾದವನ್ನ ಸೃಷ್ಟಿಸಿದೆ.

ಗೃಹ ಸಚಿವ ಪರಮೇಶ್ವರ್ ವಿವಾದದ ಪ್ರಶ್ನೆ!

ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಆದರೆ ಹಿಂದೂ ಧರ್ಮದ ಬಗ್ಗೆ ಕ್ವಶ್ಚನ್ ಮಾರ್ಕ್ ಹಾಗೆಯೇ ಇದೆ. ಅಷ್ಟಕ್ಕೂ ಹಿಂದೂ ಧರ್ಮ ಯಾವಾಗ ಹುಟ್ಟಿತು? ಹಿಂದೂ ಧರ್ಮವನ್ನ ಹುಟ್ಟಿಸಿದ್ಯಾರು? ಇದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯೇ ಬಿದ್ದಿದೆ, ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ ಅಂತ ವ್ಯಂಗ್ಯವಾಡಿದ್ದಾರೆ. ಬೌದ್ಧ, ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತು. ಹೊರಗಡೆಯಿಂದ ಇಸ್ಲಾಂ, ಕ್ರೈಸ್ತ ಧರ್ಮ ಬಂದಿದೆ ಅಂತ ಹೇಳಿದ್ರು.

ನಿರ್ದಿಷ್ಟ ಸಮುದಾಯ ಓಲೈಕೆ ಎಂದು ಕಿಡಿ

ಇನ್ನು, ಪರಮೇಶ್ವರ್‌ ಹೇಳಿಕೆಗೆ ಕೇಸರಿ ಪಡೆ ನಿಗಿನಿಗಿ ಕೆಂಡ ಕಾರಿದೆ. ಬಿಜೆಪಿ ಎಂಎಲ್ಸಿ ಕೋಟಾ ಶ್ರೀನಿವಾಸ್​ ಪೂಜಾರಿ, ಇದು ಅಸಹ್ಯಕರ ಹೇಳಿಕೆ. ಹಿಂದೂ ಧರ್ಮಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳುವುದು ನಿಜವಾಗಿಯೂ ಅನಗತ್ಯ. ನಿರ್ದಿಷ್ಟ ಸಮುದಾಯವನ್ನ ಓಲೈಸಲು ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಅಂತ ಕಿಡಿಕಾರಿದ್ದಾರೆ.

‘ಸನಾತನ ಧರ್ಮಕ್ಕೆ ಹುಟ್ಟಿಲ್ಲ.. ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ’

ಇತ್ತ, ಬೆಂಗಳೂರಿನ ಟೌನ್​ಹಾಲ್​ನಲ್ಲಿ ನಡೆದ ಗೌರಿನೆನಪು ಕಾರ್ಯಕ್ರಮದಲ್ಲಿ ನಟ ಪ್ರಕಾಶ್​​ ರಾಜ್​​​ ಹೇಳಿಕೆ ಕೇಸರಿ ಸೇನೆಯನ್ನ ಕೆರಳಿಸಿದೆ. ಟ್ವಿಟರ್​ನಲ್ಲಿ ಸನಾತನಿ ಸಂಸತ್ ಎಂದು ಪೋಸ್ಟ್​ ಮಾಡಿದ್ದೆ. ಅದಕ್ಕೆ, ನೀನು ಸನಾತನ ಧರ್ಮ ಅಲ್ವಾ ಎಂದು ಒಬ್ಬ ಪ್ರಶ್ನೆ ಕೇಳಿದ್ದ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಅಂತ ಹೇಳಿದ್ದಾಗಿ ಪ್ರಕಾಶ್​ ರಾಜ್​​​ ಹೇಳಿದ ಮಾತು ವಿವಾದ ಸೃಷ್ಟಿಸಿದೆ.

‘ಸನಾತನ ಧರ್ಮ’ ಹೇಳಿಕೆಗೆ 262 ಗಣ್ಯರ ಪತ್ರ!

ಇನ್ನು, ಉದಯನಿಧಿ ದ್ವೇಷದ ಭಾಷಣ ವಿರುದ್ಧ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಅಧಿಕಾರಿಗಳು ಸೇರಿ 262 ಗಣ್ಯರು ಆಕ್ರೋಶ ಹೊರಹಾಕಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ಗೆ ಪತ್ರ ಬರೆದಿದ್ದಾರೆ. ಔಪಚಾರಿಕ ದೂರುಗಳ ದಾಖಲಾತಿಗೆ ಕಾಯದೆ ದ್ವೇಷ ಭಾಷಣ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಅಂತ ಒತ್ತಾಯಿಸಿದ್ದಾರೆ.

ಒಟ್ಟಾರೆ, ಉದಯನಿಧಿ ಹೇಳಿಕೆ ಬಳಿಕ ದೇಶದಲ್ಲಿ ಮತ್ತೊಮ್ಮೆ ಧರ್ಮ ಸಂಘರ್ಷದ ಜನ್ಮಕ್ಕೆ ನಾಂದಿ ಹಾಡಿದೆ. ಕರುಣಾನಿಧಿ ಉತ್ತರಾಧಿಕಾರಿ ಮತ್ತು ದ್ರಾವಿಡ ಚಳುವಳಿಯ ಉಸ್ತುವಾರಿ ರೀತಿ ಉದಯನಿಧಿಯನ್ನ ಡಿಎಂಕೆ ಬಿಂಬಿಸಲು ಯತ್ನಿಸ್ತಿದೆ. ಇತ್ತ, ಸಂಪ್ರದಾಯಿಕ ವಿರೋಧಿಯನ್ನ ಮಣಿಸಲು ಬಿಜೆಪಿ ಕೂಡ ಧರ್ಮ ಶಸ್ತ್ರವನ್ನ ಎತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂದೂ ಧರ್ಮ ಯಾವಾಗ ಹುಟ್ಟಿತು? ಹುಟ್ಟಿಸಿದ್ಯಾರು?; ಗೃಹ ಸಚಿವ ಪರಮೇಶ್ವರ್ ವಿವಾದಾತ್ಮಕ ಪ್ರಶ್ನೆ

https://newsfirstlive.com/wp-content/uploads/2023/09/parameshwar.jpg

Load More