ಮಳೆರಾಯನ ಆರ್ಭಟಕ್ಕೆ ಕರಾವಳಿ ಭಾಗ ತತ್ತರ, ಆತಂಕದಲ್ಲಿ ಜನ
ನದಿಗಳು ಉಗ್ರನ ರೂಪ ತಾಳುತ್ತಿದ್ದು, ಜನಜೀವನ ಅಸ್ತವ್ಯಸ್ತ ಆಗ್ತಿದೆ
ಮಳೆಯಿಂದ ಭದ್ರಾ ನದಿಯ ಪಕ್ಕದಲ್ಲಿನ 77 ಗ್ರಾಮಗಳಿಗೆ ಅಪಾಯ
ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿರುವ ವರುಣ ರಾಜ್ಯದಲ್ಲಿ ಅಬ್ಬರಿಸ್ತಿದ್ದಾನೆ. ಕರುನಾಡಿನ ಮೇಲೆ ಕೃಪೆ ತೋರಿ ಸುರಿಯುತ್ತಿದ್ದಾನೆ. ಮಳೆರಾಯನ ಆರ್ಭಟಕ್ಕೆ ಕರಾವಳಿ ಭಾಗ ತತ್ತರಿಸಿ ಹೋಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುತ್ತಾ ಜನರಿಗೆ ಖುಷಿ ನೀಡೋದ್ರ ಜೊತೆಗೆ ಅವಾಂತರಗಳನ್ನು ಸಹ ಸೃಷ್ಟಿಸಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿ ರಜೆ
ಕರಾವಳಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಸಿಂಚನವಾಗುತ್ತಿದೆ. ಮೇಘರಾಜನ ಅಬ್ಬರಕ್ಕೆ ಅವಾಂತರಗಳೇ ಸೃಷ್ಟಿಯಾಗ್ತಿವೆ. ಮುಲ್ಕಿಯಲ್ಲಿ ಭಾರಿ ಮಳೆಯಿಂದ ಶಾಂಭವಿ ನದಿ ಭೋರ್ಗರೆಯುತ್ತಾ ಹರಿಯುತ್ತಿದೆ. ಪರಿಣಾಮ ಅತಿಕಾರಿಬೆಟ್ಟು ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇಡೀ ಊರಿಗೇ ಊರೇ ಜಲಾವೃತವಾಗಿದ್ದು ಜನ ಮನೆಗಳಿಂದ ಹೊರಬರಲಾಗದ ಸ್ಥಿತಿ ಏರ್ಪಟ್ಟಿದೆ.
ಜಿಲ್ಲೆಯಲ್ಲ ಕಳೆದ ಮೂರು ದಿನಗಳಿಂದ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇವತ್ತೂ ಕೂಡಾ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ 4ನೇ ದಿನವಾದ ಇವತ್ತೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾದಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಉಡುಪಿಯಲ್ಲಿ ಭಾರೀ ಮಳೆ.. ಶಾಲಾ ಕಾಲೇಜುಗಳಿಗೆ ರಜೆ
ಉಡುಪಿ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಕಳೆದ 1 ವಾರದಿಂದ ಸುರಿಯುತ್ತಿರೋ ಮಳೆಗೆ ಕೃಷ್ಣನೂರು ತೊಯ್ದು ತೊಪ್ಪೆಯಾಗಿದೆ. ನದಿಗಳು ಉಗ್ರನ ರೂಪ ತಾಳುತ್ತಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಇವತ್ತೂ ಕೂಡಾ ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸೂಚನೆ ಹಿನ್ನೆಲೆ ಇವತ್ತೂ ಕೂಡಾ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಚುರುಕುಗೊಂಡಿದ್ದು ನಿನ್ನೆಯಿಡೀ ಮಳೆರಾಯ ಅಬ್ಬರಿಸಿದ್ದಾನೆ. ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗಿದ್ರಿಂದ ಭದ್ರಾ ನದಿಯ ಹರಿವು ಹೆಚ್ಚಾಗಿದ್ದು, ಹೆಬ್ಬಾಳ ಸೇತುವೆಯಲ್ಲಿ ಭದ್ರೆ ಆಪಾಯ ಮಟ್ಟದಲ್ಲಿ ಹರಿಯುತ್ತಿದೆ. ಭದ್ರಾ ನದಿಯ ಅಕ್ಕಪಕ್ಕದಲ್ಲಿರೋ 77 ಗ್ರಾಮಗಳನ್ನು ಡೆಂಜರ್ ಅಂತಾ ಗುರುತಿಸಿ ಜಿಲ್ಲಾಡಳಿಯಿಂದ ಎಚ್ಚರಿಕೆ ರವಾನಿಸಿದೆ. ಇದಲ್ಲದೆ ಇಷ್ಟು ದಿನ ಖಾಲಿ ಖಾಲಿಯಾಗಿದ್ದ ಹೇಮಾವತಿ ನದಿಯಲ್ಲಿ ಹರಿವಿನ ಮಟ್ಟ ಗಣನೀಯ ಏರಿಕೆ ಕಂಡಿದೆ.
ಇನ್ನೂ ಶೃಂಗೇರಿ ಮಗಲು ಬೈಲ್‌ನ ಉತ್ತಮೇಶ್ಚರ ಭೂ ಕುಸಿತವಾಗಿದ್ದು, ಸ್ಥಳೀಯ ಜನರಲ್ಲಿ ಅತಂಕ ಹುಟ್ಟಿಸಿದೆ. ಕಳಸ ಕುದುರೆಮುಖ ರಸ್ತೆಯಲ್ಲಿ ಈ ಹಿಂದೆ ಕಾಮಗಾರಿ ಮಾಡಿದ್ದ ರಸ್ತೆ ಬಿರುಕು ಕಾಣಿಸಿದೆ. ಇದಲ್ಲದೆ ಶೃಂಗೇರಿ ಕೋಗಾರ್ ಮಸಿಗೆಯಲ್ಲಿ ಭಾರೀ ಗಾಳಿ ಮಳೆಗೆ 70 ಅಡಿಕೆ ಮರಗಳು ಧರೆಗುರುಳಿವೆ. ಇವತ್ತೂ ಕೂಡಾ ಚಿಕ್ಕಮಗಳೂರು ತಾಲೂಕಿನಲ್ಲಿ ಮಳೆರಾಯ ಭೋರ್ಗರೆಯೋ ಮುನ್ಸೂಚನೆ ಇದೆ. ಹೀಗಾಗಿ ತಾಲೂಕಿನ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು, ಆವತಿ ಹೋಬಳಿ ತಾಲೂಕಿನ ಆಯ್ದ ಶಾಲೆಗಳಿಗೆ ಇವತ್ತು ರಜೆ ಘೋಷಣೆ ಮಾಡಲಾಗಿದೆ.
ಇದನ್ನು ಓದಿ: ಇಂದು ರಾಜ್ಯ ಬಜೆಟ್ ಮಂಡನೆ; ಸಿದ್ದು ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ; ಯಾರಿಗೆ ಬಂಪರ್..?
ಮಂಜಿನ ನಗರಿಯಲ್ಲಿ ಮಳೆ ಸಿಂಚನ.. ಶಾಲಾ-ಕಾಲೇಜಿಗೆ ಮಳೆ ರಜೆ
ಕಾವೇರಿ ಉಗಮ ಸ್ಥಾನದ ಮೇಲೆ ಕೃಪೆತೋರಿರೋ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆರಾಯನ ಅಬ್ಬರಕ್ಕೆ ತಲಕಾವೇರಿ, ಭಾಗಮಂಡಲದಲ್ಲಿ ಕಾವೇರಿ ತಾಯಿ ಉಕ್ಕಿ ಹರಿಯುತ್ತಿದ್ದಾಳೆ. ಭಾರೀ ಮಳೆಗೆ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಮತ್ತೊಂದ್ಕಡೆ ಮಳೆರಾಯನ ಆಗಮನದಿಂದ ಕೆಲ ಅವಾಂತರಗಳು ಸೃಷ್ಟಿಯಾಗಿವೆ. ಇವತ್ತೂ ಕೂಡಾ ಕೊಡಗಿನಲ್ಲಿ ಮಳೆಯ ಸಿಂಚನವಾಗಲಿದೆ. ಹೀಗಾಗಿ ಜಿಲ್ಲೆಯ ಶಾಲೆಗಳಿಗೆ ಇವತ್ತು ಮಳೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟರಾಜು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೊನೆಗೂ ಮಳೆರಾಯ ಕೃಪೆ ತೋರಿದ್ದಾನೆ. ಮುಂಗಾರು ಮಳೆಯಾಗಿ ಬೇಗ ಬಾರದೇ ಇದ್ರೂ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದ್ದಾನೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಇನ್ನೂ ಎಂಟ್ರಿ ಕೊಡದೇ ಸತಾಯಿಸುತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ