newsfirstkannada.com

ತ್ರಿಶತಕ ವೀರ ಕರುಣ್​ ನಾಯರ್​ಗೆ KSCAದಿಂದ ಅನ್ಯಾಯ? ಕರ್ನಾಟಕ ತಂಡ ತೊರೆಯಲು ಮುಂದಾದ ಕನ್ನಡಿಗ

Share :

27-06-2023

  ಸೆಹ್ವಾಗ್​ ನಂತರ ಟೆಸ್ಟ್​ನಲ್ಲಿ ತ್ರಿ ಶತಕ ಸಿಡಿಸಿದ್ದ ಕರುಣ್ ನಾಯರ್​

  ತ್ರಿಬಲ್​ ಸೆಂಚುರಿ ನಂತರ ಕರುಣ್​ ಆಡಿರುವುದು ಕೇವಲ 4 ಇನ್ನಿಂಗ್ಸ್

  ಇಂಗ್ಲೆಂಡ್​ನಲ್ಲಿ ಮೈನರ್ ಕೌಂಟಿ ಕ್ರಿಕೆಟ್ ಟೂರ್ನಿ ಆಡ್ತಿರುವ ನಾಯರ್

ಕರುಣ್ ನಾಯರ್ ಈತ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಾಗ ಎಲ್ಲರು ಉಘೇ ಉಘೇ ಅಂದಿದ್ರು. ಒಂದೇ ಒಂದು ಸ್ಟನ್ನಿಂಗ್ ಇನ್ನಿಂಗ್ಸ್​ನಿಂದ ಇಡೀ ದೇಶ ನಿಬ್ಬರೆಗಾಗಿಸಿದ್ದ ಕ್ರಿಕೆಟರ್. ಆಡಿದ 3ನೇ ಟೆಸ್ಟ್ ಪಂದ್ಯದಲ್ಲೇ ಯಶಸ್ಸಿನ ಉತ್ತುಂಗಕ್ಕೇರಿದ್ದ ಕರುಣ್, ಅಷ್ಟೇ ವೇಗವಾಗಿ ಕಣ್ಮರೆಯಾಗಿ ಬಿಟ್ಟರು. ಇದೀಗ KSCAನಿಂದಲೂ ಅನ್ಯಾಯಕ್ಕೆ ಒಳಗಾಗಿರೋ ಕರುಣ್ ನಾಯರ್​ ಕರ್ನಾಟಕವನ್ನೇ ತೊರೆಯಲು ಮುಂದಾಗಿದ್ದಾರೆ.

ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗೋಕೆ ಟ್ಯಾಲೆಂಟ್ ಇದ್ರೆ ಸಾಲಲ್ಲ. ಅದೃಷ್ಟವೂ ಇರಬೇಕು. ಇವರೆಡೂ ಇದ್ದು ಸ್ಥಾನ ಸೇಫ್ ಮಾಡಿಕೊಳ್ಳಬೇಕು ಅಂತಾದ್ರೆ ಸರ್ಕಸ್ ಮಾಡಬೇಕು. ಬ್ಯಾಟ್ ಹಿಡಿದು ಮೈದಾನದಲ್ಲಿ ಅಬ್ಬರಿಸಿದ ಮಾತ್ರಕ್ಕೆ ಸ್ಥಾನ ಸೇಫ್ ಆಗಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ನಮ್ಮ ಕನ್ನಡಿಗ ಕರುಣ್ ನಾಯರ್.

ದಾಖಲೆಯ ತ್ರಿಶತಕ ವೀರ, ತಂಡದಿಂದ ದೂರ.!

2015-16ರ ಡೊಮೆಸ್ಟಿಕ್ ಸೀಸನ್ನಲ್ಲಿ ದೂಳೆಬ್ಬಿಸಿದ ಕರುಣ್ ನಾಯರ್​ಗೆ ಟೀಮ್ ಇಂಡಿಯಾ ಡೋರ್ ಬಹುಬೇಗನೇ ಓಪನ್ ಆಗಿತ್ತು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನವೂ ಸಿಗ್ತು. ಸಿಕ್ಕ ಅವಕಾಶವನ್ನ ಸಖತ್ ಆಗೇ ಯೂಸ್ ಮಾಡಿಕೊಂಡ ಕರುಣ್ ನಾಯರ್, 3ನೇ ಪಂದ್ಯದಲ್ಲೇ ದಾಖಲೆಯ ತ್ರಿಶತಕ ಸಿಡಿಸಿ ಮಿಂಚಿದ್ರು.

ತ್ರಿಶತಕ ವೀರನ ಆಟವನ್ನ ಇಡೀ ದೇಶ ಕೊಂಡಾಡಿತ್ತು. ಭಾರತದಲ್ಲಿ ಸ್ಥಾನ ಫಿಕ್ಸ್ ಅನ್ನೋ ಟಾಕ್ ಶುರುವಾಯ್ತು. ಆದ್ರೆ, ಸೀನ್ ಕಟ್ ಮಾಡಿದ್ರೆ, ಆಗಿದ್ದೇ ಬೇರೆ. ತ್ರಿಬಲ್ ಸೆಂಚುರಿ ಸಿಡಿಸಿದ ಬಳಿಕ ಕರುಣ್ ಆಡಿದ್ದು ಕೇವಲ 4 ಇನ್ನಿಂಗ್ಸ್​ ಮಾತ್ರ. ಆಮೇಲೆ ತಂಡದಿಂದಲೇ ದೂರಾದ್ರು. ಟ್ಯಾಲೆಂಟೆಡ್ ಕ್ರಿಕೆಟರ್​ ಅಂದಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೆಚ್ಚು ನಂಬಲೇ ಇಲ್ಲ. ಅಂದಿನ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಬ್ಯಾಕ್ ಮಾಡಲಿಲ್ಲ.

KSCAನಿಂದಲೂ ಕನ್ನಡಿಗನಿಗೆ ಅನ್ಯಾಯ.!

ಟೀಮ್ ಇಂಡಿಯಾದಲ್ಲಿ ಸ್ಥಾನ ವಂಚಿತನಾದ ಕರುಣ್ ನಾಯರ್ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಕರ್ನಾಟದ ಪರ ಆಡೋಕೆ ಶುರು ಮಾಡಿದ್ರು. ದೇಶಿ ಕ್ರಿಕೆಟ್​ನಲ್ಲಿ ಉತ್ತಮವಾಗೆ ಪ್ರದರ್ಶನ ನೀಡ್ತಾ ಇದ್ರು. ಆದ್ರೀಗ ಕರುಣ್ ನಾಯರ್ ಕಡೆಗಣನೆಗೆ ಒಳಗಾಗಿದ್ದಾರೆ. ಸೀನಿಯರ್ ಆಟಗಾರನನ್ನ ಮ್ಯಾನೇಜ್​ಮೆಂಟ್​​ ಸರಿಯಾಗಿ ನಡೆಸಿಕೊಳ್ಳುತ್ತಾ ಇಲ್ಲ ಅನ್ನೋ ದೂರು ಕೇಳಿ ಬಂದಿದೆ. 2021-2022 ರಣಜಿ ಸೀಸನ್​ನಲ್ಲಿ 5 ಇನ್ನಿಂಗ್ಸ್​ನಲ್ಲಿ 291 ರನ್​ಗಳಿಸಿ ಡಿಸೆಂಟ್ ಆಟವಾಡಿದ್ರೂ, ಮುಂದಿನ ಸೀಸನ್​ನಲ್ಲಿ ಸ್ಥಾನವೇ ಸಿಗಲಿಲ್ಲ.

ಐಪಿಎಲ್ ಆಡೋ ಅವಕಾಶಕ್ಕೂ ಕೊಕ್ಕೆ..!

ರಣಜಿ ತಂಡದಿಂದ ಹೊರ ಬಿದ್ದ ಕರುಣ್ ನಾಯರ್​ಗೆ ಡೊಮೆಸ್ಟಿಕ್ ಟಿ20 ಪಂದ್ಯಗಳಲ್ಲಿ ಕೆಎಸ್ಸಿಎ ಆಡೋ ಅವಕಾಶ ನೀಡಲಿಲ್ಲ. ಕ್ರಿಕೆಟ್​ನಿಂದ ದೂರ ಉಳಿದ ಪರಿಣಾಮ ಐಪಿಎಲ್ ಆಡೋ ಚಾನ್ಸ್ ಕೂಡ ಮಿಸ್ ಆಯಿತು. ಇದಕ್ಕೆಲ್ಲ ಬದಲಾದ ಮ್ಯಾನೇಜ್​ಮೆಂಟ್​​ ಕಾರಣ ಅನ್ನೋ ಮಾತು ಸದ್ಯ ಚರ್ಚೆಯಾಗ್ತಿದೆ.

ಕರ್ನಾಟಕ ತಂಡ ತೊರೆಯಲು ಕರುಣ್ ತಯಾರಿ.!

ಅವಕಾಶವಿಲ್ಲದೇ ಅಸಮಾಧಾನಗೊಂಡಿರುವ ಕರುಣ್ ನಾಯರ್ ಸದ್ಯ ಕರ್ನಾಟಕವನ್ನ ತೊರೆಯಲು ಮುಂದಾಗಿದ್ದಾರಂತೆ. ಮುಂಬರುವ ಡೊಮೆಸ್ಟಿಕ್ ಸೀಸನ್​ನಲ್ಲಿ ಕರ್ನಾಟಕವನ್ನ ತೊರೆದು ಬೇರೊಂದು ರಾಜ್ಯವನ್ನ ಪ್ರತಿನಿಧಿಸಲು ಕರುಣ್ ಮುಂದಾಗಿದ್ದಾರೆ. ಈ ಬಗ್ಗೆ ನಿರ್ಧಾರವೂ ಅಂತಿಮಗೊಂಡಿದೆ ಅನ್ನೋದು ಮೂಲಗಳ ಮಾಹಿತಿಯಾಗಿದೆ.

ಅವಕಾಶ ವಂಚಿತ ಕರುಣ್​ಗೆ ದ್ರಾವಿಡ್ ಟಿಪ್ಸ್.!

ಅಂಡರ್-19 ದಿನಗಳಲ್ಲಿ ಕರುಣ್ ಕೋಚ್ ಆಗಿದ್ದ, ಹಾಲಿ ಟೀಮ್ ಇಂಡಿಯಾ ಕೋಚ್ ಆಗಿರೋ ದಿಗ್ಗಜ ರಾಹುಲ್ ದ್ರಾವಿಡ್ ಕರುಣ್​ಗೆ ಮಹತ್ವದ ಸಲಹೆ ನೀಡಿದ್ದಾರೆ. ಅವಕಾಶ ಸಿಗದ ಬಗ್ಗೆ ಕರುಣ್, ದ್ರಾವಿಡ್ ಬಳಿ ಹೇಳಿಕೊಂಡಾಗ ತಂಡವನ್ನ ಬದಲಿಸುವ ಸಲಹೆಯನ್ನ ದ್ರಾವಿಡ್ ನೀಡಿದ್ದಾರಂತೆ. ಸರಿಯಾಗಿ ನಿನ್ನ ನಡೆಸಿಕೊಳ್ಳುತ್ತಿಲ್ಲ ಅಂದ್ರೆ, ಕರ್ನಾಟಕ ತೊರೆಯುವ ಬಗ್ಗೆ ನಿರ್ಧರಿಸು ಎಂದು ದಿ ವಾಲ್ ಸಲಹೆ ನೀಡಿದ್ದಾರಂತೆ. ಹೀಗಾಗಿಯೇ ಬೇರೆ ರಾಜ್ಯದ ಪರ ಆಡಲು ಕರುಣ್ ಮುಂದಾಗಿದ್ದಾರೆ.

ಇಂಗ್ಲೆಂಡ್​ನಲ್ಲಿ ಮೈನರ್ ಕೌಂಟಿ ಆಡ್ತಿದ್ದಾರೆ ಕರುಣ್.!

ಇಲ್ಲೆಲ್ಲೂ ಅವಕಾಶ ಸಿಗದೇ ತಂಡದಿಂದ ಹೊರಗುಳಿದಿರೋ ಕರುಣ್ ನಾಯರ್, ಸದ್ಯ ಇಂಗ್ಲೆಂಡ್​ನಲ್ಲಿ ಮೈನರ್ ಕೌಂಟಿ ಕ್ರಿಕೆಟ್ ಟೂರ್ನಿ ಆಡ್ತಿದ್ದಾರೆ. 4 ತಿಂಗಳು ಕಾಲ ಒಪ್ಪಂದಕ್ಕೆ ಕರುಣ್ ಸಹಿ ಹಾಕಿದ್ದಾರೆ. ಈ ಕಾಂಟ್ರಾಕ್ಟ್, ಸಪ್ಟೆಂಬರ್​ನಲ್ಲಿ ಮುಗಿಯಲಿದೆ. ಆ ಬಳಿಕ ಬೇರೊಂದು ರಾಜ್ಯದ ಪರ ಡೊಮೆಸ್ಟಿಕ್ ಸೀಸನ್ ಸ್ಟಾರ್ಟ್ ಮಾಡೋ ಲೆಕ್ಕಾಚಾರದಲ್ಲಿ ಕರುಣ್ ನಾಯರ್ ಇದ್ದಾರೆ.

ಮೊದಲು ಟೀಮ್ ಇಂಡಿಯಾ, ಈಗ ಕರ್ನಾಟಕ. ಸೆಹ್ವಾಗ್ ಬಳಿಕ ತ್ರಿಶತಕದ ಸಾಧನೆ ಮಾಡಿದ ಭಾರತೀಯ ಅನ್ನೋ ಸಾಧನೆ ಮಾಡಿದ ಆಟಗಾರ ಈಗ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಸ್ಥಾನಕ್ಕೆ ಪರದಾಡುವಂತಾಗಿದೆ. ಇದ್ರಿಂದ ಬೇಸತ್ತು ಬೇರೊಂದು ರಾಜ್ಯದ ಪರ ಆಡೋಕೆ ಮುಂದಾಗಿರುವ ಕರುಣ್​ಗೆ ಅಲ್ಲಾದರು ಸರಿಯಾದ ಅವಕಾಶಗಳು ಸಿಗಲಿ ಅನ್ನೋದೆ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ತ್ರಿಶತಕ ವೀರ ಕರುಣ್​ ನಾಯರ್​ಗೆ KSCAದಿಂದ ಅನ್ಯಾಯ? ಕರ್ನಾಟಕ ತಂಡ ತೊರೆಯಲು ಮುಂದಾದ ಕನ್ನಡಿಗ

https://newsfirstlive.com/wp-content/uploads/2023/06/KARUN_NAYAR.jpg

Load More