newsfirstkannada.com

ಮಲೆನಾಡು, ಕರಾವಳಿ ಸೇರಿ ಹಲವೆಡೆ ಮಳೆ, ಮಳೆ.. ನದಿಗಳ ಒಳ ಹರಿವು ಹೆಚ್ಚಳ; ಡ್ಯಾಂಗಳಲ್ಲಿ ನೀರಿನ ಪ್ರಮಾಣ ಹೇಗಿದೆ..?

Share :

08-07-2023

    ಕಾವೇರಿ ಕಣಿವೆಯ ಎಷ್ಟು ಜಲಾಶಯಗಳಿಗೆ ಒಳ ಹರಿವು ಹೆಚ್ಚಳ?

    ಮಳೆಯಿಂದ ಒಳ ಹರಿವಿನ ಪ್ರಮಾಣ ಹೆಚ್ಚಳ ಕಂಡ KRS ಡ್ಯಾಮ್​

    ಕೃಷ್ಣಾ ಕಣಿವೆ ಈ ಮೂರು ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳ

ಬೆಂಗಳೂರು: ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು ರಾಜ್ಯದ ನದಿಗಳ ನೀರಿನ ಮಟ್ಟ ಕೂಡ ಅಧಿಕವಾಗುತ್ತಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಕಣಿವೆಯ 4 ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಕೃಷ್ಣಾ ಕಣಿವೆಯ ಡ್ಯಾಮ್​ಗಳಲ್ಲೂ ನೀರಿನ ಮಟ್ಟ ಕೊಂಚ ಏರಿಕೆ ಕಂಡಿದೆ.

ಕಾವೇರಿ ಕಣಿವೆಯ 4 ಡ್ಯಾಮ್​ಗಳ ಒಳಹರಿವಿನ ಪ್ರಮಾಣ

  • ಕಬಿನಿ ಡ್ಯಾಮ್​-16,580 ಕ್ಯೂಸೆಕ್ (ಒಳ ಹರಿವು)
  • KRS ಡ್ಯಾಮ್ -13,449 ಕ್ಯೂಸೆಕ್ (ಒಳ ಹರಿವು)
  • ಹೇಮಾವತಿ ಡ್ಯಾಮ್  -7080 ಕ್ಯೂಸೆಕ್ (ಒಳ ಹರಿವು)
  • ಹ್ಯಾರಂಗಿ ಜಲಾಶಯ -1,671 ಕ್ಯೂಸೆಕ್ (ಒಳ ಹರಿವು)

ಇದನ್ನು ಓದಿ: ಕರೆಂಟ್​​ ಹರಿಸಿ, ತುಂಡು ತುಂಡಾಗಿ ಕತ್ತರಿಸಿದ್ರಂತೆ ಹಂತಕರು.. ಜೈನ ಮುನಿಯ ಕೊಲೆ ಸತ್ಯ ಬಿಚ್ಚಿಟ್ಟ ಭಕ್ತರು

ಮಳೆಯಿಂದಾಗಿ ಕಾವೇರಿ ಕಣಿವೆಯಲ್ಲಿನ 4 ಜಲಾಶಯಗಳಲ್ಲಿ 38.83 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಿಂದ KRS ಡ್ಯಾಮ್​ನಲ್ಲಿ 11.69 ಟಿಎಂಸಿ ಅಡಿ ನೀರು ಹೆಚ್ಚಾಗಿದೆ. ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿ ಒಂದೇ ದಿನದಲ್ಲಿ 3 ಟಿಎಂಸಿ ನೀರು ಹರಿದು ಬಂದಿದೆ. ನಿನ್ನೆ 35.5 ಟಿಎಂಸಿ ಇದ್ದ ನೀರಿನ ಪ್ರಮಾಣ ಇಂದು 38.8 ಟಿಎಂಸಿಗೆ ಏರಿಕೆ ಕಂಡಿದೆ.

ಇನ್ನು ಕೃಷ್ಣಾ ಕಣಿವೆಯ 6 ಜಲಾಶಯಗಳಿಗೆ 6,555 ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಲಿಂಗನಮಕ್ಕಿ, ಸೂಪಾ, ವರಾಹಿ ಜಲಾಶಯಗಳಿಗೆ 36,497 ಕ್ಯೂಸೆಕ್ ಒಳ ಹರಿವು ಇದೆ.

ಜಲಾಶಯ ಹೆಸರು                                ಒಳ ಹರಿವು

  • ಲಿಂಗನಮಕ್ಕಿ ಡ್ಯಾಮ್ -22,157 ಕ್ಯೂಸೆಕ್ (ಒಳ ಹರಿವು)
  • ಸೂಪಾ ಜಲಾಶಯ-11,615 ಕ್ಯೂಸೆಕ್ (ಒಳ ಹರಿವು)
  • ವರಾಹಿ ಡ್ಯಾಮ್-2,725 ಕ್ಯೂಸೆಕ್ (ಒಳ ಹರಿವು)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಲೆನಾಡು, ಕರಾವಳಿ ಸೇರಿ ಹಲವೆಡೆ ಮಳೆ, ಮಳೆ.. ನದಿಗಳ ಒಳ ಹರಿವು ಹೆಚ್ಚಳ; ಡ್ಯಾಂಗಳಲ್ಲಿ ನೀರಿನ ಪ್ರಮಾಣ ಹೇಗಿದೆ..?

https://newsfirstlive.com/wp-content/uploads/2023/07/KABINI_JALASHAYA.jpg

Load More