newsfirstkannada.com

ಹೆಸರಿಗೆ ಗೃಹಜ್ಯೋತಿ.. ಆದ್ರೆ ರಾಜ್ಯದ ಹಲವೆಡೆ ಕರೆಂಟ್ ಇಲ್ಲ.. ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳಿಂದ ಹೋರಾಟ

Share :

05-09-2023

  ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರಿಂದ ಪಂಪ್​ಸೆಟ್​ ಬಳಕೆ

  ವಿದ್ಯುತ್​ ನೀಡದೇ​ ಜನರನ್ನು ಕತ್ತಲಲ್ಲಿ ಮುಳುಗಿಸುತ್ತಿರುವ ಸರ್ಕಾರ..!

  ಕರ್ನಾಟಕದ ಹಲವು ಕಡೆ ಲೋಡ್​ ಶೆಡ್ಡಿಂಗ್​ಗೆ ಪ್ರಮುಖ ಕಾರಣಗಳೇನು?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಮನೆ ಮನೆಗೂ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಕಲ್ಪಿಸಿದೆ. ಫ್ರೀ ಕರೆಂಟ್​ ನೀಡಿ ನಾವು ನುಡಿದಂತೆ ನಡೆದಿದ್ದೇವೆ ಅಂತ ಸರ್ಕಾರ ಎಲ್ಲೆಂದರಲ್ಲಿ ಜಾಹೀರಾತನ್ನೂ ಹಾಕಿ ಶಹಬ್ಬಾಸ್​ಗಿರಿ ಪಡೆಯುತ್ತಿದೆ. ಆದರೆ ಉಚಿತ ವಿದ್ಯುತ್​ ಕೊಟ್ಟ ಸರ್ಕಾರವೇ ಜನರನ್ನು ಅಂಧಕಾರದಲ್ಲಿ ಮುಳುಗಿಸಿದೆ. ಕರ್ನಾಟಕ ಕತ್ತಲಲ್ಲಿ ಮುಳುಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸ್ವಿಚ್​ ಹಾಕಿ ಬಲ್ಬ್​ ಉರಿಸಿದ್ದೇ ಉರಿಸಿದ್ದು. ಇಡೀ ರಾಜ್ಯಕ್ಕೆ ಗೃಹಜ್ಯೋತಿ ಅಡಿ ಉಚಿತವಾಗಿ ಕರೆಂಟ್​ ಕೊಟ್ಟಿದ್ದೇವೆ, ನುಡಿದಂತೆ ನಡೆದಿದ್ದೇವೆ ಅಂತ ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡರು. ಜನರು ಕೂಡ ಆಹಾ ಇನ್ಮೇಲೆ 24 ಗಂಟೆ ಕರೆಂಟ್​ ಬರುತ್ತೆ ಅದು ಕೂಡ ಉಚಿತವಾಗಿ ಅಂತ ಮನಸಲ್ಲಿ ಮಂಟಪ ಕಟ್ಟಿದ್ರು. ಆದ್ರೆ ಕಾಂಗ್ರೆಸ್​ ಸರ್ಕಾರ ಕಟ್ಟಿಸಿದ್ದ ಈ ಗಾಳಿಯ ಗೋಪುರವೆಲ್ಲ ಗಾಳಿಯಲ್ಲೇ ಲೀನವಾಗಿದೆ. ಕರ್ನಾಟಕ ಭಾಗಶಃ ಕತ್ತಲೆಯಲ್ಲಿ ಮುಳುಗಿದೆ. ಮನೆ ಮನೆಯಲ್ಲೂ ಸರ್ಕಾರ ಹೇಳಿದ ಗೃಹಜ್ಯೋತಿ ಬೆಳಗದೇ ಅಂಧಕಾರ ಆವರಿಸಿದೆ. ಕಾರಣ, ರಾಜ್ಯದಲ್ಲಿ ವಿದ್ಯುತ್​ ಸಮಸ್ಯೆ ಶುರುವಾಗಿದೆ.

ಕರ್ನಾಟಕದ ಹಲವು ಕಡೆಗಳಲ್ಲಿ ಲೋಡ್​​ಶೆಡ್ಡಿಂಗ್

ಉಚಿತ ವಿದ್ಯುತ್​​ ನೀಡಿದ ರಾಜ್ಯದಲ್ಲೇ ವಿದ್ಯುತ್​ ಸಮಸ್ಯೆ ಶುರುವಾಗಿದೆ. ಕರ್ನಾಟಕದ ಹಲವು ಕಡೆಗಳಲ್ಲಿ ಲೋಡ್​​ ಶೆಡ್ಡಿಂಗ್ ಶುರುವಾಗಿದೆ. ಚಿಕ್ಕೋಡಿ ಟು ಚಿಕ್ಕಮಗಳೂರುವರೆಗೂ ಲೋಡ್​​ ಶೆಡ್ಡಿಂಗ್​ ಮಾಡಲಾಗ್ತಿದೆ. ದಿನಕ್ಕೆ ಕೇವಲ ಮೂರು ಗಂಟೆ ಮಾತ್ರ 3 ಫೇಸ್ ವಿದ್ಯುತ್ ಪೂರೈಕೆ ಮಾಡ್ತಿದ್ದು ಅನ್ನದಾತರು ಕಂಗಾಲಾಗಿದ್ದಾರೆ.

ಲೋಡ್ ​ಶೆಡ್ಡಿಂಗ್​​ನಿಂದ ಸಮಸ್ಯೆಗಳೇನು?

 1. ಕೇವಲ ಮೂರು ಗಂಟೆ ಮಾತ್ರ 3 ಫೇಸ್ ವಿದ್ಯುತ್ ಪೂರೈಕೆ
 2. 6 ಗಂಟೆ ಪೂರೈಕೆಯಾಗುತ್ತಿದ್ದ ವಿದ್ಯುತ್​ 3 ಗಂಟೆ ಮಾತ್ರ ಪೂರೈಕೆ
 3. ವಣಗುತ್ತಿರುವ ಬೆಳೆಗೆ ನೀರು ಹರಿಸಲು ರೈತರಿಗೆ ಸಮಸ್ಯೆ
 4. ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ಬೆಳೆಗಳ ನಷ್ಟ
 5. ಕುರಿ, ದನಕರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ
 6.  ರೈತರು ಪಂಪ್ ಸೆಟ್​​ಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ
 7. ಮಧ್ಯರಾತ್ರಿ ವಿದ್ಯುತ್ ಕಡಿತದಿಂದ ವೃದ್ಧರು, ಮಕ್ಕಳ ಪರದಾಟ
 8. ಲೋಡ್​​ಶೆಡ್ಡಿಂಗ್​ನಿಂದ ಬೇಸತ್ತ ಅನ್ನದಾತರಿಂದ ಹೋರಾಟ

ಇನ್ನು, ಲೋಡ್ ​​ಶೆಡ್ಡಿಂಗ್​ನಿಂದ ಕರುನಾಡಿನ ಅನ್ನದಾತರು ಬೇಸತ್ತಿದ್ದಾರೆ. ಬೆಳಗಾವಿಯ ಚಿಕ್ಕೋಡಿಯಲ್ಲಿ ಪೂರಕ ವಿದ್ಯುತ್ ಪೂರೈಕೆಗಾಗಿ ಬೀದಿಗಿಳಿದ ರೈತರು ಹೋರಾಟ ನಡೆಸಿದ್ದಾರೆ. ಹುಕ್ಕೇರಿಯಲ್ಲಿ ವಿವಿಧ ರೈತಪರ ಸಂಘಟನೆಗಳಿಂದ ಬೃಹತ್ ಧರಣಿ, ಪಾದಯಾತ್ರೆ ನಡೆಸಲಾಗಿದೆ. ಇತ್ತ ವಿದ್ಯುತ್ ಕಡಿತದಿಂದಾಗಿ ಹುಬ್ಬಳ್ಳಿಯಲ್ಲಿ ಹೆಸ್ಕಾಂ‌ಂ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಬೆಳಗಾವಿ‌ ಸೇರಿದಂತೆ 7 ಜಿಲ್ಲೆಗಳ ರೈತರು ಹುಬ್ಬಳ್ಳಿಯ ನವನಗರದ ಹೆಸ್ಕಾಂ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಲೋಡ್ ಶೆಡ್ಡಿಂಗ್​ನಿಂದ ದಾವಣಗೆರೆ ಜನತೆ ಬೇಸತ್ತು ಹೋಗಿದೆ. ಸಮರ್ಪಕ ವಿದ್ಯುತ್ ಸಿಗದೇ ತೋಟಗಳಿಗೆ ಸರಿಯಾಗಿ ನೀರು ಹಾಯಿಸಲು ಆಗುತ್ತಿಲ್ಲ ಅಂತ ರೈತರು ಸಂಸದ ಜಿಎಂ ಸಿದ್ದೇಶ್ವರಗೆ ಕರೆ ಮಾಡಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.

ನಗರದಲ್ಲೂ ಪ್ರತಿ ದಿನ ರಾತ್ರಿ ಒಂದು ಗಂಟೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೂ ಅನಾನುಕೂಲವಾಗ್ತಿದೆ. ಇನ್ನು ಚಿಕ್ಕಮಗಳೂರಲ್ಲೂ ಲೋಡ್​ಶೆಡ್ಡಿಂಗ್​ನಿಂದ ರೈತರು ಕಂಗೆಟ್ಟಿದ್ದಾರೆ. ಬೆಳೆಗೆ ನೀರು ಹರಿಸಲು ವಿದ್ಯುತ್ ಇಲ್ಲದೇ ಬೇಸತ್ತಿದ್ದಾರೆ. ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್​ ನಿಂಗೂ ಫ್ರೀ ಅಂತ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರಿಗೆ ಉಚಿತ ವಿದ್ಯುತ್ ಕೊಟ್ಟಿದ್ದೇವೆಂದು ಬೀಗಿದ್ರು. ಆದ್ರೆ ಎಲ್ಲಿಯ ಉಚಿತ.. ಕರೆಂಟೇ ಇಲ್ಲದಿದ್ರೆ ಅದು ಉಚಿತ ಸಿಕ್ರೆ ಏನು ಸಿಗದಿದ್ರೆ ಏನು? ಸದ್ಯ ರೈತರ ಹಿತದೃಷ್ಟಿಯಿಂದ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಸರಿಗೆ ಗೃಹಜ್ಯೋತಿ.. ಆದ್ರೆ ರಾಜ್ಯದ ಹಲವೆಡೆ ಕರೆಂಟ್ ಇಲ್ಲ.. ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳಿಂದ ಹೋರಾಟ

https://newsfirstlive.com/wp-content/uploads/2023/09/load.jpg

Load More