newsfirstkannada.com

ಸರ್ಕಾರಿ ಹಣ ದುಂದು ವೆಚ್ಚ; ದುಬಾರಿ ಟೇಬಲ್​​, ಕಾರ್ಪೆಟ್, ಕುರ್ಚಿಯೇ ಬೇಕು ಎಂದು ಪಟ್ಟು ಹಿಡಿದ ಮಿನಿಸ್ಟರ್ಸ್​​!

Share :

22-06-2023

    ಸಚಿವರ ಕೊಠಡಿಗೆ ಕುರ್ಚಿ, ಟೇಬಲ್, ಬೆಲೆ ಬಾಳುವ ಮರಗಳದ್ದೇ ಆಗಬೇಕು

    ವಿಕಾಸಸೌಧದಲ್ಲಿರುವ ಸಚಿವರುಗಳ ಪತ್ನಿಯರಿಂದಲೂ ಭರ್ಜರಿ ಡಿಮ್ಯಾಂಡ್‌!

    ಗ್ಯಾರಂಟಿ ಯೋಜನೆಗಳಿಗೆ ದುಡ್ಡು ಇಲ್ಲದಿರುವಾಗ ಈ ದುಂದು ವೆಚ್ಚ ಬೇಕಾ?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಜಸ್ಟ್‌ ಒಂದು ತಿಂಗಳಷ್ಟೇ ಕಳೆದಿದೆ. ಈ 30 ದಿನಗಳಲ್ಲಿ ಸರ್ಕಾರ, ರಾಜ್ಯದ ಜನರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸೋ ಹರಸಾಹಸದಲ್ಲಿದೆ. ರಿಯಾಯಿತಿ ದರದಲ್ಲಿ ಅಕ್ಕಿ ಕೊಂಡುಕೊಂಡು ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರದ ಜೊತೆ ಅಕ್ಷರಶಃ ಯುದ್ಧವನ್ನೇ ಸಾರಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೇ ಸರ್ಕಾರಿ ಹಣವನ್ನ ದುಂದು ವೆಚ್ಚ ಮಾಡಲಾಗ್ತಿರೋ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಕುರ್ಚಿ, ಟೇಬಲ್, ಬೆಲೆ ಬಾಳುವ ಮರಗಳದ್ದೇ ಆಗಬೇಕು. ಕಿಟಕಿಯ ಕರ್ಟನ್ಸ್‌ ಅಂತೂ ದುಬಾರಿಯದ್ದೇ ಹಾಕಬೇಕು. ಎಲ್ಲವೂ ದುಬಾರಿ ಬೆಲೆಯ, ಗುಣಮಟ್ಟದ ಪರಿಕರಗಳೇ ಆಗಬೇಕು. ಅಬ್ಬಬ್ಬಾ.. ಇದು ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆಯಾಗಿರುವ ಸಚಿವರುಗಳ ನೂತನ ಡಿಮ್ಯಾಂಡ್‌ ಪಟ್ಟಿ. ಇನ್ನೂ ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ನೂತನ ಸಚಿವರ ಪತ್ನಿಯರಿಂದಲೂ ಅಧಿಕಾರಿಗಳಿಗೆ ಹೀಗೇ ಇರಬೇಕೆಂದು ಒತ್ತಡ ಹಾಕಲಾಗುತ್ತಿದೆಯಂತೆ.

ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆಯಾಗಿರುವ ಸಚಿವರುಗಳ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ತಮ್ಮ ಕೊಠಡಿಗಳ ನವೀಕರಣ ಹೀಗೆಯೇ ಆಗಬೇಕು. ಕೊಠಡಿಗೆ ಗುಣಮಟ್ಟದ, ದುಬಾರಿ ಕಾರ್ಪೆಟೇ ಹಾಕಬೇಕು ಎಂದು ಬೇಡಿಕೆಗಳ ಪಟ್ಟಿಯೊಂದಿಗೆ ಸಚಿವರು ಪಟ್ಟು ಹಿಡಿದಿದ್ದಾರೆ. ನೂತನ ಸಚಿವರುಗಳ ಈ ವರಸೆಗೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಸಚಿವರುಗಳ ಈ ಬೇಡಿಕೆ ಜೊತೆಗೆ ಇನ್ನೂ ಇಂಟರೆಸ್ಟಿಂಗ್ ಆಂದ್ರೆ ಸಚಿವರ ಪತ್ನಿಯರಿಂದಲೇ ಅಧಿಕಾರಿಗಳಿಗೆ ಹೀಗೇ ಇರಬೇಕೆಂದು ಒತ್ತಡ ಹಾಕಲಾಗ್ತಿದೆಯಂತೆ. ಬೆಂಗಳೂರಿನ ಪ್ರಮುಖ ಸಚಿವರೊಬ್ಬರ ಪತ್ನಿಯಿಂದ ಅಧಿಕಾರಿಗಳ‌ ಮೇಲೆ ಹೆಚ್ಚಿನ ಒತ್ತಡ ಹಾಕಲಾಗ್ತಿದೆ ಎನ್ನಲಾಗಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಹಣವೇ ಇಲ್ಲ!?
ವಿಕಾಸಸೌಧದಲ್ಲಿ ಒಂದೆರಡು ವರ್ಷಗಳ ಹಿಂದಷ್ಟೇ ಹೊಸದಾಗಿ ಕಾರ್ಪೆಟ್, ಕುರ್ಚಿ, ಟೇಬಲ್‌ಗಳನ್ನ ಅಧಿಕಾರಿಗಳು ಹಾಕಿಸಿದ್ದಾರೆ. ಈಗ ಮತ್ತೆ ಕೊಠಡಿಗಳಲ್ಲಿ ಎಲ್ಲವನ್ನೂ ಬದಲಿಸುವಂತೆ ಸಚಿವರು ಪಟ್ಟು ಹಿಡಿದಿದ್ದಾರೆ. ಸಚಿವರ ಈ ಮಾತಿನಿಂದ ಲೋಕೋಪಯೋಗಿ ಇಲಾಖಾಧಿಕಾರಿಗಳು ಅಡಕತ್ತರಿಗೆ ಸಿಲುಕಿದ್ದಾರೆ. ದುಬಾರಿ, ಗುಣಮಟ್ಟದ ಪರಿಕರಗಳನ್ನ ಹಾಕಿಸುವಂತೆ ಸಚಿವರು ಹೇಳಿದರೂ ಹಣದ ಕೊರತೆ ಎದುರಾಗಿದೆ. ಕೊಠಡಿ ನವೀಕರಣಕ್ಕೆ ಹಣವೇ ಇಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸಚಿವರ ಮಾತಿಗೆ ಏನೂ ಹೇಳಲಾಗದೆ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದು, ನೂತನ ಸಚಿವರ ಈ ವರಸೆಯಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಸಹಾಯಕರಾಗಿದ್ದಾರೆ.

ಕೊಠಡಿಗಳ ನವೀಕರಣಕ್ಕೆ ಅನಗತ್ಯ ದುಂದುವೆಚ್ಚ!
ವಿಕಾಸಸೌಧದ ಅಧಿಕಾರಿಗಳೇ ಹೇಳುವಂತೆ ಒಂದೂವರೆ ವರ್ಷದ ಹಿಂದಷ್ಟೇ ಹೊಸ ಕಾರ್ಪೆಟ್, ಕುರ್ಚಿ, ಟೇಬಲ್‌ಗಳನ್ನ ಖರೀದಿ ಮಾಡಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರ ಸೂಚನೆ‌ ಹಿನ್ನೆಲೆಯಲ್ಲಿ ಅಧಿಕಾರಿಗಳು ನವೀಕರಣ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಕೊಠಡಿಗಳ ನವೀಕರಣ ಮಾಡುವುದು ಅನಗತ್ಯ ದುಂದುವೆಚ್ಚ ಅಲ್ಲದೇ ಮತ್ತೇನು ಅನ್ನೋ ಪ್ರಶ್ನೆ ಎದುರಾಗಿದೆ. ಇಲಾಖೆಯಲ್ಲಿ ಹಣವೇ ಇಲ್ಲವೆಂದರೂ ಖರ್ಚು ಮಾಡುವಂತೆ ಸಚಿವರು ಸೂಚನೆ ನೀಡಿದ್ದಾರೆ. ಸಚಿವರ ಕೊಠಡಿಗಳ ನವೀಕರಣಕ್ಕೆ ಅನಗತ್ಯ ದುಂದುವೆಚ್ಚ ಮಾಡಬೇಕಾಗುತ್ತದೆ. ಇದರ ಜೊತೆಗೆ ಇತ್ತೀಚೆಗೆ ರಾಜ್ಯ ಸರ್ಕಾರ ಹಲವರಿಗೆ ಸಂಪುಟ ದರ್ಜೆ ಸ್ಥಾನಮಾನವನ್ನು ನೀಡಿದೆ. ಈ ಮೂಲಕ ಅನಗತ್ಯ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.

ಮಾದರಿಯಾದ ಸಚಿವ ಸತೀಶ್ ಜಾರಕಿಹೊಳಿ!
ವಿಕಾಸಸೌಧದ ಕೊಠಡಿಗಳ ನವೀಕರಣ, ಅನಗತ್ಯ ಖರ್ಚಿಗೆ ಪಟ್ಟು ಹಿಡಿದಿರುವ ಬೆನ್ನಲ್ಲೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾದರಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ದುಂದುವೆಚ್ಚ ಮಾಡುವುದು ಬೇಡ. ನೆಲಹಾಸು, ಕುರ್ಚಿ, ಟೇಬಲ್ ಯಾವುದೂ ಬೇಡ. ಈಗ ಕೊಠಡಿ ಹೇಗಿದೆಯೋ ಹಾಗೆಯೇ ಇರಲಿ. ತಮ್ಮ ಕೊಠಡಿಯ ನವೀಕರಣ ಬೇಡ ಎಂದು ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜೊತೆಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಭಾವಚಿತ್ರಗಳನ್ನ ಮಾತ್ರ ಇಡುವಂತೆ ಹೇಳಿರುವ ಸತೀಶ್ ಜಾರಕಿಹೊಳಿ ಅವರು ಹೊಸ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಹಣವಿಲ್ಲವೆಂದು ಅಡಕತ್ತರಿಗೆ ಸಿಲುಕಿರುವಾಗ ಖುದ್ದು ಲೋಕೋಪಯೋಗಿ ಸಚಿವರು ಮಾತ್ರ ಮಾದರಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸರ್ಕಾರಿ ಹಣ ದುಂದು ವೆಚ್ಚ; ದುಬಾರಿ ಟೇಬಲ್​​, ಕಾರ್ಪೆಟ್, ಕುರ್ಚಿಯೇ ಬೇಕು ಎಂದು ಪಟ್ಟು ಹಿಡಿದ ಮಿನಿಸ್ಟರ್ಸ್​​!

https://newsfirstlive.com/wp-content/uploads/2023/06/Vikasasoudha-2.jpg

Load More