newsfirstkannada.com

ಒಂದು ಫೋಟೋ ಕೊಟ್ಟಿತು ನೂರೆಂಟು ಸಂದೇಶ.. ಜೊಡೆತ್ತುಗಳ ಹಳಸಿದ ಸ್ನೇಹಕ್ಕೆ ಮುಲಾಮು ಹಚ್ಚಿ ಹೀರೋ ಆದ್ರು ಖರ್ಗೆ..!

Share :

19-05-2023

  ‘ನಮ್ಮ ಕೈಗಳು ಸದಾ ಒಂದಾಗಿರಲಿದೆ’

  ಖರ್ಗೆ ‘ಕೈ’ ಹಿಡಿದ ಜೋಡೆತ್ತುಗಳಿಂದ ಸ್ನೇಹ ಸಂದೇಶ

  ಕಾಂಗ್ರೆಸ್‌ ಪಕ್ಷ ಒಂದು ಕುಟುಂಬ ಎಂದ ಸಿದ್ದು

ಚುನಾವಣೆಗೂ ಮುನ್ನ ಒಗ್ಗಟ್ಟಿನ ಮಂತ್ರ ಜಪಿಸಿದ್ದವರು ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌. ಕಾಂಗ್ರೆಸ್‌ನ ಜೋಡೆತ್ತುಗಳಂತೆ ಪಕ್ಷವನ್ನ ಅಧಿಕಾರಕ್ಕೆ ತಂದವರು. ಆದ್ರೆ ಸಿಎಂ ಪಟ್ಟದ ಪೈಪೋಟಿ ಮಧ್ಯೆ ಇಬ್ಬರ ಮಧ್ಯೆ ಬಿರುಕು ಮೂಡಿರೋದು ಮೇಲ್ನೋಟಕ್ಕೆ ಗೋಚರಿಸಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೆ ಇಬ್ಬರೂ ನಾಯಕರು ತೆರೆ ಎಳೆದಿದ್ದಾರೆ. ಸಿಎಂ ಆಯ್ಕೆಯ ಜೊತೆಗೆ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸಿದ್ದು-ಡಿ.ಕೆ.ಸ್ನೇಹದಲ್ಲಿ ವಿರಸ. ಸಿಎಂ ಪಟ್ಟಕ್ಕಾಗಿ ಪೈಪೋಟಿ ಜೊರಾಗಿ ಇತ್ತು.

ಈ ಜಿದ್ದಿನಲ್ಲಿ ಕಾಂಗ್ರೆಸ್‌ನ ಜೋಡೆತ್ತುಗಳು ಪಕ್ಷದ ಬಂಡಿಯನ್ನ ಬೇರೆ ಮಾಡ್ತಿವೆ ಎಂಬ ಸದ್ದು ಮೊಳಗಿತ್ತು. ಮುಖ್ಯಮಂತ್ರಿ ಗಾದಿಗಾಗಿ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಅಸಲಿ ಯುದ್ಧ ಶುರುವಾಗಿತ್ತು. ಇದು ಇಬ್ಬರ ನಾಯಕರ ಮಧ್ಯೆ ವೈಮನಸ್ಸು ಮೂಡಿಸಿದೆ ಎಂಬ ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಆದ್ರೀಗ ಉಭಯ ನಾಯಕರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಖರ್ಗೆ ‘ಕೈ’ ಹಿಡಿದು ಜೋಡೆತ್ತುಗಳಿಂದ ಸ್ನೇಹ ಸಂದೇಶ
ಮೂರು ದಿನಗಳಿಂದ ದೆಹಲಿಯಲ್ಲಿದ್ರೂ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಒಟ್ಟಿಗೆ ಕಾಣಿಸಿಕೊಂಡಿರ್ಲಿಲ್ಲ. ಹೈ ಕಮಾಂಡ್ ನಾಯಕರ ಒನ್‌ ಟು ಒನ್ ಭೇಟಿಗೆ ಒಬ್ಬೊಬ್ಬರಾಗೇ ಆಗಮಿಸ್ತಿದ್ರು. ಆಗಲೂ ಸಿದ್ದು-ಡಿಕೆ ಮುಖಾಮುಖಿಯಾಗಿರಲಿಲ್ಲ. ಇಬ್ಬರ ಮಧ್ಯೆ ಪ್ರತ್ಯೇಕ ಸಭೆಯ ಪರಿಣಾಮವೋ? ಹುದ್ದೆಯ ಪೈಪೋಟಿಯೂ ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಅಂತಲೇ ಭಾವಿಸಲಾಗಿತ್ತು. ಅದರಲ್ಲೂ ನಿನ್ನೆ ರಾತ್ರಿ ದೆಹಲಿಯಲ್ಲಿರೋ ಕೆ.ಸಿ ವೇಣುಗೋಪಾಲ್ ಮನೆ ಬಳಿ ನಡೆದ ಪ್ರಸಂಗ ಇದಕ್ಕೆ ಮತ್ತಷ್ಟು ಮಸಾಲೆ ಸವರಿತ್ತು. ಅದೇನಂದ್ರೆ, ವೇಣುಗೋಪಾಲ್‌ರನ್ನ ಭೇಟಿ ಮಾಡಿ ಸಿದ್ದು ಹೊರ ಹೋಗುವವರೆಗೂ ಡಿ.ಕೆ.ಶಿವಕುಮಾರ್ ಪಕ್ಕದ ರಸ್ತೆಯಲ್ಲೇ ನಿಂತಿದ್ದು, ಇಬ್ಬರೂ ದೂರ ದೂರ ಎಂಬ ಸಂದೇಶ ರವಾನಿಸಿತ್ತು.

ರಾತ್ರೋ ರಾತ್ರಿ ಖರ್ಗೆ ಜೊತೆಗಿನ ಸಿದ್ದು-ಡಿಕೆ ಕೈ ಹಿಡಿದು ಮೇಲೆತ್ತಿದ ಫೋಟೋ ಎಲ್ಲೆಡೆ ಹಲ್‌ಚಲ್ ಎಬ್ಬಿಸಿತ್ತು. ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಸಂದೇಶವನ್ನ ಸಾರಿತ್ತು. ಕತ್ತಲಾಗಿ ಬೆಳಗಾಗುವುದರೊಳಗೆ ಸಿದ್ದು-ಡಿಕೆ ಒಟ್ಟಿಗೆ ಕಾಣಿಸಿಕೊಂಡ್ರು. ಕಾಂಗ್ರೆಸ್ ಜೋಡೆತ್ತುಗಳು ಒಂದೇ ಕಾರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮನೆಗೆ ಆಗಮಿಸಿದ್ರು. ಕೆಸಿವಿ ಮನೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಎಲ್ಲಾ ಅನುಮಾನಗಳಿಗೂ ತೆರೆ ಎಳೆದ್ರು. ಒಂದೇ ಟೇಬಲ್‌ನಲ್ಲಿ ಕೂತು ಉಪಹಾರ ಸೇವಿಸಿದ್ರು.

ಕಾಂಗ್ರೆಸ್‌ ಪಕ್ಷ ಒಂದು ಕುಟುಂಬ ಎಂದ ಸಿದ್ದು
ರಾಜ್ಯದ ಹಿತಕ್ಕಾಗಿ ಒಗ್ಗಟ್ಟಾಗಿದ್ದೇವೆ ಎಂದ ಡಿಕೆಶಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಜೊತೆಗಿನ ಫೋಟೋವನ್ನ ಹಂಚಿಕೊಂಡಿದ್ದ ಸಿದ್ದರಾಮಯ್ಯ ಕನ್ನಡತನ ಅಸ್ಮಿತೆ ಜೊತೆಗೆ ಕಾಂಗ್ರೆಸ್ ಯುನಿಟಿಯ ಬಗ್ಗೆ ಟ್ವೀಟ್ ಮಾಡಿದ್ರು.

‘ನಮ್ಮ ಕೈಗಳು ಸದಾ ಒಂದಾಗಿರಲಿದೆ’

ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ.

-ಸಿದ್ದರಾಮಯ್ಯ, ನಿಯೋಜಿತ ಸಿಎಂ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡಾ ಟ್ವೀಟ್‌ ಮಾಡುವ ಮೂಲಕ ನಾವೆಲ್ಲಾ ಒಂದು ಎಂಬ ಮೆಸೇಜ್ ಪಾಸ್ ಮಾಡಿದ್ರು.
‘ನಾವು ಒಗ್ಗಟ್ಟಿನಿಂದ ಇದ್ದೇವೆ’

ಕರ್ನಾಟಕದ ಸುಭದ್ರ ಭವಿಷ್ಯ ಮತ್ತು ನಮ್ಮ ಜನರ ಕಲ್ಯಾಣವೇ ನಮ್ಮ ಪ್ರಮುಖ ಆದ್ಯತೆ. ಅದನ್ನ ಈಡೇರಿಸುವುದಕ್ಕಾಗಿ ನಾವು ಒಗ್ಗಟ್ಟಿನಿಂದ ಇದ್ದೇವೆ.

-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ದೆಹಲಿಯಿಂದ ಬೆಂಗಳೂರಿಗೆ ಇಬ್ಬರೂ ನಾಯಕರು ಒಂದೇ ವಿಮಾನದಲ್ಲಿ ಆಗಮಿಸಿದ್ರು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೆಚ್ಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದ್ರು. ನಿಯೋಜಿತ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ಗೆ ಕಲಾತಂಡಗಳಿಂದ ಭರ್ಜರಿ ಸ್ವಾಗತವನ್ನ ಕೋರಿದವು. ಈ ಮೂಲಕ ಇಬ್ಬರ ಮಧ್ಯೆ ಏರ್ಪಟ್ಟಿದ್ದ ಸಿಎಂ ಗಾದಿಯ ಜಿದ್ದು ದೂರವಾಗಿದೆ. ಕರುನಾಡಲ್ಲಿ ಕಾಂಗ್ರೆಸ್ ಸರ್ಕಾರದ ಬಂಡಿಗೆ ಮತ್ತೆ ಇಬ್ಬರೂ ನಾಯಕರು ನೊಗ ಹೊತ್ತು ಸಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಒಂದು ಫೋಟೋ ಕೊಟ್ಟಿತು ನೂರೆಂಟು ಸಂದೇಶ.. ಜೊಡೆತ್ತುಗಳ ಹಳಸಿದ ಸ್ನೇಹಕ್ಕೆ ಮುಲಾಮು ಹಚ್ಚಿ ಹೀರೋ ಆದ್ರು ಖರ್ಗೆ..!

https://newsfirstlive.com/wp-content/uploads/2023/05/Congress-9.jpg

Load More