ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸುವ ಅಗತ್ಯವೇ ಇಲ್ಲ
ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಹೆಚ್ಚಿದ ರಶ್
ವಾಟ್ಸ್ಆ್ಯಪ್ನಲ್ಲೂ ‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಕೆ ಮಾಡುವುದಾದರೂ ಹೇಗೆ?
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಇನ್ನೇನು ಮನೆ ಒಡತಿಯರ ಕೈ ಸೇರುವ ಹಂತದಲ್ಲಿದೆ ಈ ಯೋಜನೆ. ಇದಕ್ಕಾಗಿ ಲಕ್ಷ್ಮಿಯರು ಈಗಾಗಲೇ ನಾ ಮುಂದು ತಾ ಮುಂದು ಅಂತ ಸರತಿ ಸಾಲಿನಲ್ಲಿ, ರಾತ್ರಿ ಹಗಲು ಅನ್ನದೇ ನಿಂತು, ಕೂತು ಅಪ್ಲಿಕೇಶನ್ ಕೂಡ ಹಾಕುತ್ತಿದ್ದಾರೆ. ಆದರೆ ಇನ್ನು ಮುಂದೆ ಇಷ್ಟು ರಿಸ್ಕ್ ಬೇಡ. ಗೃಹಲಕ್ಷ್ಮಿ ಯೋಜನೆಗೆ ವಾಟ್ಸ್ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ರಶ್ ಹೆಚ್ಚಿದೆ. ಈ ದಟ್ಟಣೆ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ಇ-ಆಡಳಿತಕ್ಕಾಗಿ ಕೇಂದ್ರವು ಅಭಿವೃದ್ಧಿಪಡಿಸಿದ ವಾಟ್ಸ್ಆ್ಯಪ್ ಚಾಟ್‌ಬಾಟ್ ಸಹಾಯದಿಂದ ಜನರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯವಾಗಿ ಕಂಪನಿಗಳು ಗ್ರಾಹಕರ ಜೊತೆ ಸಂವಹನ ಮಾಡಲು ಚಾಟ್‌ಬಾಟ್ ಬಳಸ್ತಾರೆ. ಇದನ್ನೇ ಈಗ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಬಳಸಬಹುದಾಗಿದೆ.
ವಾಟ್ಸ್ಆ್ಯಪ್ ನಂಬರ್ 8147500500ಗೆ ನಿಮ್ಮ ವಿವರ ಕಳಿಸಬೇಕು. ಚಾಟ್‌ಬಾಟ್ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇ-ಆಡಳಿತಕ್ಕಾಗಿ ಅಭಿವೃದ್ಧಿಪಡಿಸಿದ ಚಾಟ್‌ಬಾಟ್ ಅರ್ಜಿ ಸಲ್ಲಿಸುವವರ ಜೊತೆ ಸಂವಹನ ನಡೆಸುತ್ತದೆ. ಎಲ್ಲಾ ದಾಖಲೆ ಸಿದ್ಧಪಡಿಸಿ ಇಟ್ಟುಕೊಂಡಿದ್ದರೆ, ಮೂರೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದು. ಚಾಟ್‌ಬಾಟ್ ಪಡೆದ ಎಲ್ಲಾ ಮಾಹಿತಿಯನ್ನ ಅಥವಾ ಅರ್ಜಿಯನ್ನ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ದಾಖಲೆಗಳ ಪರಿಶೀಲಿಸಿದ ನಂತರ ಅರ್ಜಿ ಸ್ವೀಕಾರ ಮಾಡಲಾಗುತ್ತೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಿಸುವ ಕೆಲಸ ಮಾಡ್ತಾಯಿದೆ. ನಾರಿ ಮಣಿಯರಿಗೆ ಶಕ್ತಿ ನಂತರ ಲಕ್ಷ್ಮಿ ಕೈ ಹಿಡಿಯಲು ವಾಟ್ಸ್ಆ್ಯಪ್ ಮೊರೆ ಹೋಗಲು ಈಗ ಅವಕಾಶ ಇದೆ. ಆದ್ರೆ ಸದ್ಯ ಇದನ್ನು ಬಳಕೆಗೆ ಯೋಗ್ಯವಾಗಿಲ್ಲ. ಇನ್ನೇರಡು ದಿನದಲ್ಲಿ ಸರ್ಕಾರ ಇದನ್ನ ಡೆವಲಪ್ ಮಾಡಲಿದೆ. ಆ ನಂತರ ಗ್ರಾಹಕರು ಚಾಟ್‌ಬಾಟ್ ಅನ್ನ ಬಳಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ