ಅಂತಿಮ ಹಂತಕ್ಕೆ ಬಂದ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣ
ಸದ್ಯದಲ್ಲಿಯೇ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್ಶೀಟ್ ಸಲ್ಲಿಕೆ
ಆ ಎರಡು ವರದಿಗಾಗಿ ಪೊಲೀಸರು ವೇಟಿಂಗ್, ಯಾವುವು ಆ ವರದಿ?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ತನಿಖೆಯ ಎಲ್ಲಾ ಆಯಾಮಗಳನ್ನು ಮುಗಿಸಿರುವ ಪೊಲೀಸರು ಸದ್ಯ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನ FSL ಎಲ್ಲಾ ವರದಿಗಳು ಈಗಾಗಲೇ ಪೊಲೀಸ್ ಇಲಾಖೆಯ ಕೈ ಸೇರಿವೆ. ಪೂರಕವಾದ ಇನ್ನೂ ಕೆಲವು ಮಾಹಿತಿಗಳನ್ನು ಕಲೆ ಹಾಕ್ತಿದ್ದೇವೆ. ಹೈದ್ರಾಬಾದ್ಗೆ ಕಳಿಸಿರೋ ವಸ್ತುಗಳ ಮಾಹಿತಿ ಬರಬೇಕಿದೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:‘ಗಂಡನಿಂದ ತಿಂಗಳಿಗೆ 6 ಲಕ್ಷ ಕೊಡಿಸಿ’- ಮಹಿಳೆಯ ಬಟ್ಟೆ, ಊಟದ ಲೆಕ್ಕ ಕೇಳಿ ಶಾಕ್ ಆದ ಹೈಕೋರ್ಟ್!
ಈಗಾಗಲೇ ಹತ್ಯೆ ನಡೆದ ಜಾಗ ಪಟ್ಟಣಗೆರೆ ಶೆಡ್ ನಕ್ಷೆ ರಿಪೋರ್ಟ್ ತನಿಖಾಧಿಕಾರಿಗಳ ಕೈ ಸೇರಿದೆ. ರೇಣುಕಾಸ್ವಾಮಿ ಕೊಲೆ ನಡೆಸಿದ ಜಾಗದ ನಕ್ಷೆಯ ವರದಿ ಲಭ್ಯವಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಪೊಲೀಸರು ವರದಿ ಪಡೆದಿದ್ದಾರೆ. ಶೆಡ್ ಬಗ್ಗೆ ಹಲವು ಮಾಹಿತಿಯನ್ನು ವರದಿ ಒಳಗೊಂಡಿದ್ದು, ಚಾರ್ಜ್ಶೀಟ್ ಸಲ್ಲಿಸುವ ಪ್ರಕ್ರಿಯೆ ಈಗ ಅಂತಿಮಘಟ್ಟಕ್ಕೆ ಬಂದು ತಲುಪಿದೆ. ಇಡೀ ಶೆಡ್ ಅಳತೆ ಸೇರಿದಂತೆ ಹಲವು ಮಾಹಿತಿಯನ್ನು ಪೊಲೀಸರು ಲೋಕೋಪಯೋಗಿ ಇಲಾಖೆಯನ್ನು ಕೇಳಿದ್ದರು. ಎಲ್ಲೆಲ್ಲಿ ಹಲ್ಲೆ ಆಗಿದೆ. ಶೆಡ್ನ ಸಂಪೂರ್ಣ ವರದಿ ಸೇರಿದಂತೆ ಹಲವು ಪ್ರಶ್ನೆಗಳಿಗೆ ವರದಿ ನೀಡಲು ಕೋರಿದ್ದರು ಅದರಂತೆ ಈಗ ಲೊಕೋಪಯೋಗಿ ಇಲಾಖೆ ಪೊಲೀಸರಿಗೆ ವರದಿ ನೀಡಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದ ಮೇಲೂ ಕರೆಂಟ್ ಶಾಕ್? FSL ರಿಪೋರ್ಟ್‌ನಲ್ಲಿ ಸ್ಫೋಟಕ ಅಂಶಗಳು; ಏನದು?
ಇನ್ನು ಶೆಡ್ ನಕ್ಷೆಯಲ್ಲಿ ಏನಿದೆ ಅನ್ನೋದನ್ನ ನೋಡುವುದಾದ್ರೆ, ಎಲ್ಲಿ ಹಲ್ಲೆ ನಡೆಸಲಾಗಿತ್ತು. ಯಾವ ಜಾಗದಲ್ಲಿ ಹತ್ಯೆಯಾಗಿತ್ತು. ಯಾವ ಯಾವ ದಿಕ್ಕಿನಲ್ಲಿ ಏನೇನಿತ್ತು. ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ದಿಕ್ಕಿನ ಸಮೇತ ವರದಿ ಪೊಲೀಸರ ಕೈ ಸೇರಿದೆ.
ಆ ಎರಡು ವರದಿಗಾಗಿ ಕಾಯುತ್ತಿರುವ ತನಿಖಾಧಿಕಾರಿಗಳು
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೈದ್ರಾಬಾದ್ನ CFSL ತಂಡದಿಂದ ಇನ್ನೂ ವರದಿ ಬಂದಿಲ್ಲ. ಫಿಸಿಕಲ್ ಮತ್ತು ಆಡಿಯೋ ಅನಾಲಿಸಿಸ್ ರಿಪೋರ್ಟ್ ಬರೋದು ಬಾಕಿ ಇದೆ. ಈ ಎರಡು ವರದಿ ತಮ್ಮ ಕೈಸೇರುವ ದಿನವನ್ನು ಪೊಲೀಸರು ಕಾಯುತ್ತಿದ್ದಾರೆ. ಚಾರ್ಜ್ಶೀಟ್ ರೆಡಿ ಮಾಡಿ, ಹೈದ್ರಾಬಾದ್ CFSL ನ ವರದಿಗಾಗಿ ಕಾಯುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಅದು ಕೂಡ ಪೊಲೀಸರ ಕೈಸೇರಲಿದೆ. ಅಲ್ಲದೇ ಬೆಂಗಳೂರು ಎಫ್ಎಸ್ಎಲ್ನಿಂದ ಇನ್ನೂ ಎರಡು ವರದಿಗಳು ಬರೋದು ಬಾಕಿ ಇದೆ. ಆ ಎರಡು ವರದಿಗಾಗಿ ಸದ್ಯ ಪೊಲೀಸರು ವೇಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ