newsfirstkannada.com

ಕರಾವಳಿ ಜಿಲ್ಲೆಗಳಿಗೆ ಖಡಕ್ ಎಚ್ಚರಿಕೆ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಮಳೆಯ ಆರ್ಭಟ ಇವತ್ತು & ನಾಳೆ ಹೇಗಿರಲಿದೆ..?

Share :

06-07-2023

    ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

    ಜುಲೈ 7ರಿಂದ ಒಳನಾಡು ಭಾಗಗಳಲ್ಲಿ ಕ್ಷೀಣಿಸುವ ಲಕ್ಷಣ ಇದೆ

    ಕರಾವಳಿ, ಮಲೆನಾಡುಗಳಲ್ಲಿ ಇನ್ನೂ ಎಷ್ಟು ದಿನ ಮಳೆ ಜೋರು?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ದೊಡ್ದ ಅನಾಹುತ ಮಾಡುತ್ತಿದೆ. ಇದರ ಮಧ್ಯೆ ಹವಾಮಾನ ಇಲಾಖೆ ರಾಜ್ಯದ ಪ್ರಮುಖ ಭಾಗಗಳಿಗೆ ಎಚ್ಚರಿಕೆಯನ್ನು ನೀಡಿದೆ.

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಭಾರೀ ಮುಂದುವರಿಯಲಿದೆ. ಆದರೆ ತೀವ್ರತೆ ಸ್ವಲ್ಪ ಕಡಿಮೆ ಇರಬಹುದು ಎಂದು ತಿಳಿಸಿದೆ.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ತುಮಕೂರು, ಪಾವಗಡ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಲಿದೆ.

ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಹಾವೇರಿ, ಗದಗ, ಬಾಗಲಕೋಟೆ? ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಾಪುರ, ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಒಂದೆರಡು ಕಡೆ ಸಾಮಾನ್ಯ ಮಳೆಯ ಸಾಧ್ಯತೆಯೂ ಇದೆ. ಮುಂಗಾರು ಜುಲೈ 7ರಿಂದ ಒಳನಾಡು ಭಾಗಗಳಲ್ಲಿ ಕ್ಷೀಣಿಸುವ ಲಕ್ಷಣಗಳಿದ್ದು, ಜುಲೈ 10ರ ನಂತರ ದಕ್ಷಿಣ ಕರಾವಳಿ ಭಾಗಗಳಲ್ಲಿಯೂ ಮಳೆ ಕಡಿಮೆಯಾಗುವ ಲಕ್ಷಣಗಳಿವೆ ಎಂದು ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರಾವಳಿ ಜಿಲ್ಲೆಗಳಿಗೆ ಖಡಕ್ ಎಚ್ಚರಿಕೆ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಮಳೆಯ ಆರ್ಭಟ ಇವತ್ತು & ನಾಳೆ ಹೇಗಿರಲಿದೆ..?

https://newsfirstlive.com/wp-content/uploads/2023/07/KWR_RAIN-2.jpg

Load More