/newsfirstlive-kannada/media/post_attachments/wp-content/uploads/2024/08/rain.jpg)
ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಜಲಾಶಯಗಳ ಭರ್ತಿಯಾಗಿದ್ದು ನದಿಗಳಿಗೆ ನೀರು ಹರಿಸಲಾಗ್ತಿದೆ. ನದಿ ಪಾತ್ರದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ನದಿಗಳ ಅಬ್ಬರಕ್ಕೆ ಮನೆಗಳು ಜಲಾವೃತವಾಗಿದೆ. ಜಮೀನು ನೀರುಪಾಲಾಗಿವೆ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದ್ದು ಆತಂಕ ಹೆಚ್ಚಿಸಿದೆ.
ಕರ್ನಾಟಕದಲ್ಲೂ ಮಳೆರಾಯ ಸೃಷ್ಟಿಸಿರುವ ಅವಾಂತರಗಳು ಒಂದೆರಡಲ್ಲ. ಧಾರಾಕಾರ ಮಳೆಯಿಂದ ನದಿಗಳು ಉಕ್ಕಿ ಉರಿಯುತ್ತಿವೆ. ಇದರಿಂದ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜನರು ಆತಂದಲ್ಲೇ ಬದುಕುವಂತಾಗಿದೆ.
ನದಿಗೆ ಬಿದ್ದ ಬೈಕ್.. ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ
ಮಹಾರಾಷ್ಟ್ರ ಭಾಗದಲ್ಲಿ ಮಹಾ ಮಳೆ ಮುಂದುವರಿದಿದ್ದು ಬೆಳಗಾವಿ ಭಾಗದಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಬೆಳಗಾವಿ ತಾಲೂಕಿನ ಅಲತ್ತಗಾ ಗ್ರಾಮದ ಬಳಿ ಮಾರ್ಕಂಡೇಯ ನದಿ ಅಬ್ಬರಕ್ಕೆ ಬೈಕ್ ಸಮೇತ ಇಬ್ಬರು ನದಿಗೆ ಬಿದ್ದಿದ್ದಾರೆ. ಓರ್ವನನ್ನ ರಕ್ಷಣೆ ಮಾಡಿದ್ದು ಮತ್ತೋರ್ವ ನಾಪತ್ತೆಯಾಗಿದ್ದಾನೆ. ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಬೆಳಗಾವಿ ಡಿಸಿಪಿ ಸ್ನೇಹಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/08/State-Rain.jpg)
ಕೊಚ್ಚಿ ಹೋಗಿದ್ದ ಬಾಲಕಿ ಕುಟುಂಬಕ್ಕೆ ಸಚಿವರ ಸಾಂತ್ವನ
ಬಾಗಲಕೋಟೆಯ ಕಡಕೋಳದಲ್ಲಿ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಮನೆಗೆ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
/newsfirstlive-kannada/media/post_attachments/wp-content/uploads/2024/08/BGK.jpg)
ಗದಗದಲ್ಲಿ ಮಲಪ್ರಭೆಯಿಂದ ಪ್ರವಾಹ.. ಬೆಳೆ ಹಾನಿ
ಗದಗ ಜಿಲ್ಲೆಯ ರೋಣ, ನರಗುಂದ, ರೋಣಾ ತಾಲೂಕಿನ ಹಲವೆಡೆ ಮಲಪ್ರಭೆ ಪ್ರವಾಹ ಸೃಷ್ಟಿಸಿದ್ದಾಳೆ. ನವಿಲುತೀರ್ಥ ಜಲಾಶಯದಿಂದ ನೀರು ಬಿಡಲಾಗಿದ್ದು ನದಿ ತೀರದ ಗ್ರಾಮಗಳು, ಜಮೀನು ಮುಳುಗಡೆಯಾಗಿದೆ. ಇನ್ನು ಲಖಮಾಪೂರ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿದ್ದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ.
ಇದನ್ನೂ ಓದಿ: ಭಾರೀ ಮಳೆ.. ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿತ್ತು ಅಣ್ಣ-ತಮ್ಮರಿದ್ದ ಬೈಕ್..
/newsfirstlive-kannada/media/post_attachments/wp-content/uploads/2024/08/GDG.jpg)
ಶಿರೂರು ಗುಡ್ಡಕುಸಿತಕ್ಕೆ ಸ್ಥಳಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ
ಇತ್ತ ಅಂಕೋಲಾದ ಶಿರೂರು ಗುಡ್ಡಕುಸಿತದಲ್ಲಿ ಮೃತಪಟ್ಟ ಜಗನ್ನಾಥ ನಾಯ್ಕ್ ಮನೆಗೆ ಭೇಟಿ ನೀಡಿದ್ದ ಸಚಿವ ಮಧುಬಂಗಾರಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ವೈಯಕ್ತಿವಾಗಿ 1.5 ಲಕ್ಷ ನೆರವು ನೀಡಿದ್ದಾರೆ. ಇನ್ನು ಹೊಸನಗರದಲ್ಲಿ ಧಾರಾಕಾರ ಮಳೆಗೆ ಸೇತುವೆ ಮುಳುಗಿದೆ. ಹರಿಯುವ ನೀರಲ್ಲೇ ಜನ ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ.
ಇದನ್ನೂ ಓದಿ: ಅವನತಿಯತ್ತ ಸಾಗಿದ ಅಪ್ಪು ನೆನಪಿನ ಸ್ಕೂಲ್​.. ‘ಬೆಟ್ಟದ ಹೂವು’ ಖ್ಯಾತಿಯ ಶಾಲೆಗೆ ಇದೆಂಥಾ ಸ್ಥಿತಿ..?
/newsfirstlive-kannada/media/post_attachments/wp-content/uploads/2024/08/Shirur.jpg)
ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ಮಳೆ ರಗಳೆ ಮುದುವರಿದಿದೆ. ಹಲವೆಡೆ ಭೂಕುಸಿತ ಸಂಭವಿಸುತ್ತಿದ್ದು ಈ ಮಧ್ಯೆ ಪರ್ಪಲೆ ಕುಂಟಲ್ಪಾಡಿ ಗುಡ್ಡ ಕುಸಿದಿದ್ದು ರಾಜ್ಯ ಹೆದ್ದಾರಿ ಬಿರುಕು ಬಿದ್ದಿದೆ. ಹಲವೆಡೆ ಗುಡ್ಡ ಕುಸಿಯುತ್ತಿದ್ದು ಅಪಾರ ನಷ್ಟ ಸಂಭವಿಸಿದೆ.
ಇದನ್ನೂ ಓದಿ: ಮೂರು ತಿಂಗಳಲ್ಲಿ ಮದುವೆ; ಅದಕ್ಕಾಗಿ ಹಣ ಸಂಪಾದಿಸಲು ಕೇರಳಕ್ಕೆ ಬಂದಿದ್ದ.. ಆದರೆ..
/newsfirstlive-kannada/media/post_attachments/wp-content/uploads/2024/08/Gudde.jpg)
ಒಟ್ಟಾರೆ ಕರ್ನಾಟಕದಲ್ಲಿ ಮಳೆ ಕಡಿಮೆಯಾದ್ರೂ ಅದರ ಎಫೆಕ್ಟ್​ ಮಾತ್ರ ಇನ್ನೂ ಹಾಗೇ ಇದೆ. ನೆರೆ ಮಹಾರಾಷ್ಟ್ರದ ಮಳೆಯಿಂದಲೂ ರಾಜ್ಯದಲ್ಲಿ ಅವಾಂತರ ಸೃಷ್ಟಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us