newsfirstkannada.com

ಕರುನಾಡಿನ ಕೆಲವೆಡೆ ಮಳೆಯ ಅಬ್ಬರ; 100ಕ್ಕೂ ಹೆಚ್ಚು ಮನೆಗಳು ಜಲಾವೃತ, ಈಜುಕೊಳದಂತಾದ ಪಂಪ್​ವೆಲ್​

Share :

04-07-2023

    ರಾಯಚೂರು ಜಿಲ್ಲೆಯ ಹಲವೆಡೆ ವರುಣಾಧಾರೆ

    ಚಿಕ್ಕಬಳ್ಳಾಪುರದಲ್ಲಿ ಮಳೆಯಿಂದ ಅವಾಂತರಗಳು ಸೃಷ್ಟಿ

    ಕೊಪ್ಪಳದಲ್ಲಿ ಧಾರಾಕಾರ ಮಳೆ.. ನಿಟ್ಟುಸಿರು ಬಿಟ್ಟ ರೈತರು

ಕರುನಾಡಿನ ಜನರ ಮೇಲೆ ಮಳೆರಾಯ ಕಳೆದೆರಡು ದಿನಗಳಿಂದ ಕರುಣೆ ತೋರಿಸ್ತಿದ್ದಾನೆ. ರಾಜ್ಯದ ವಿವಿಧೆಡೆ ಮಳೆ ಸುರಿಸುತ್ತಾ ನಿಧಾನವಾಗಿ ಬಿಸಿಲಿನ ವಾತಾವರಣದಿಂದ ತಂಪು ವಾತಾವರಣ ಸೃಷ್ಟಿ ಮಾಡ್ತಾ, ಆಗಸ ನೋಡ್ತಾ ಕಾದು ಕುಳಿತ್ತಿದ್ದ ರೈತರಿಗೆ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ. ಇನ್ನೂ 5 ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನೂ ಕೊಟ್ಟಿದ್ದಾನೆ.

ರಾಜ್ಯದಲ್ಲಿ ಮಳೆಗಾಗಿ ಕಾದು ಕೂತಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಆಗಮನವಾಗದೇ ಕಂಗಾಲಾಗಿದ್ದ ಜನರಿಗೆ ವರುಣ ಶುಭ ಸುದ್ದಿ ಕೊಟ್ಟಿದ್ದಾರೆ. ರಾಜ್ಯದ ಹಲವೆಡೆ ಮಳೆ ರಾಯ ತನ್ನ ಅಬ್ಬರ ಶುರು ಮಾಡ್ಕೊಂಡಿದ್ದಾನೆ. ಅದಕ್ಕೆ ಸಾಕ್ಷಿ ಅನ್ನೋ ಹಾಗೆ ಹಲವು ಜಿಲ್ಲೆಗಳಲ್ಲಿ ವರುಣದೇವ ಕೃಪೆ ತೋರಿದ್ದಾರೆ.

ಮಳೆಗೆ ಮಂಗಳೂರಿನ ಪಂಪ್ ವೆಲ್ ವೃತ್ತ ಜಲಾವೃತ 

ಇನ್ನು ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಅಡಿಭಾಗದಲ್ಲಿ ಮೂರ್ನಾಲ್ಕು ಅಡಿಗಳಷ್ಟು ಮಳೆ ನೀರು ನಿಂತಿದ್ದು. ಅದರಲ್ಲಿ ಗಾಡಿ ಹೆಂಗಪ್ಪಾ ಓಡುಸ್ಕೊಂಡು ಹೋಗೋದು ಅಂತ ಚಾಲಕರು ತಲೆ ಕೆರೆದುಕೊಂಡಿದ್ರು. ಕಾಲ್ನಡಿಗೆಯಲ್ಲಿ ಓಡಾಡುತ್ತಿದ್ದ ಜನಕ್ಕೆ ಮಾತ್ರ, ಟ್ರಾಫಿಕ್​ನಲ್ಲಿ ನಿಂತ ವಾಹನಗಳ ಹಾರ್ನ್ ಸೌಂಡಾ ಇಲ್ಲ ಮಳೆ ಸೌಂಡಾ ಅನ್ನೋ ಕನ್ಫ್ಯೂಷನ್​ನಲ್ಲಿದ್ರು.

ಇನ್ನು ಇದೇ ಮಳೆ ನೀರಿನಲ್ಲಿ ಖಾಸಗಿ ಬಸ್​ ಕೂಡ ಕೆಟ್ಟು ನಿಂತ್ತಿದ್ದು, ಸಾರ್ವಜನಿಕರೆಲ್ಲಾ ಸೇರಿ ಸುರಿಯುತ್ತಿದ್ದ ಮಳೆಯಲ್ಲೇ ಬಸ್​ ಅನ್ನ ತಳ್ಳಿ ರಸ್ತೆ ದಾಟಿಸಿದ ಪ್ರಸಂಗ ಕೂಡ ನಡೆದಿದೆ.

ಅಷ್ಟೇ ಅಲ್ಲದೆ, ಇದೇ ಪಂಪ್ ವೆಲ್ ಫ್ಲೈ ಓವರ್ ಅಂಡರ್​ ಪಾಸ್​ನಲ್ಲಿ ನಿಂತ ಮಳೆ ನೀರಲ್ಲಿ ಓರ್ವ ವ್ಯಕ್ತಿ ಸ್ವಿಮಿಂಗ್​ ಕೂಡ ಮಾಡಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆರಾಯನ ಅಬ್ಬರ

ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಏರಿಯಾದಲ್ಲಿ ವರುಣನ ಅಬ್ಬರ ಜೋರಾಗಿತ್ತು.. ಮಲ್ಲತಹಳ್ಳಿ, ಬೆಂಗಳೂರು ವಿಶ್ವ ವಿದ್ಯಾಲಯ, ಮೈಸೂರು ರಸ್ತೆ, ಕೊರಮಂಗಲ, ಕಾರ್ಪೊರೇಷನ್, ಬಸವನಗುಡಿ ಸುತ್ತಮುತ್ತ ಮಳೆಯಾಗಿದೆ.

ಹೊಸಪೇಟೆಯಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತ

ನೀರು ಹೊರ ಹೋಗೋದಕ್ಕೆ ಸಣ್ಣ ಕಾಲುವೆ ಮಾಡಲು ಜಾಗ ಹುಡುಕ್ತಿರೋ ತಂದೆ.. ಅಪ್ಪ ಬೇಗ ಬನ್ನಿ ಮನೆಯಲ್ಲಿ ನೀರು ನುಗ್ಗುತ್ತಿದೆ.. ಅಂತ ಮನೆಗೆ ನುಗ್ಗಿದ ನೀರನ್ನ ಮನೆಯಲ್ಲಿದ್ದ ಬಕೆಟ್​ಗಳನ್ನ ಬಳಸಿ.. ನೀರು ಎತ್ತಾಕುತ್ತಿರೋ ಮನೆ ಮಂದಿ.. ಈ ದೃಶ್ಯಗಳೆಲ್ಲಾ ಕಂಡು ಬಂದಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ. ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದ ಹೊಸಪೇಟೆ ಭಾಗದ ರೈತರು ಪುಲ್ ಖುಷ್ ಆಗಿದ್ರೆ.. ಹೊಸಪೇಟೆಯ ಚಪ್ಪರದಳ್ಳಿ, SR ನಗರ, ಬಸವೇಶ್ವರ ಬಡಾವಣೆ , ಇಂದಿಯಾ ನಗರ‌, MJ ನಗರ ಸೇರಿ ತಗುಪ್ರದೇಶದ 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗದೆ.

ರಾಯಚೂರು ಜಿಲ್ಲೆಯ ಹಲವೆಡೆ ವರುಣಾಧಾರೆ

ಇತ್ತ ರಾಯಚೂರು ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ದೇವದುರ್ಗ ಪಟ್ಟಣದಲ್ಲಿ ವಾಹನಗಳು ಅರ್ಧಕ್ಕೆ ಅರ್ಧ ಮುಳುಗಿದೆ. ರಸ್ತೆ ಬದಿ ಚರಂಡಿ ಬ್ಲಾಕ್ ಆಗಿದ್ದರಿಂದ ರಾಜ್ಯ ಹೆದ್ದಾರಿ ಮೇಲೆ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡಿದ್ದು, ರಸ್ತೆ ಬದಿ ಚರಂಡಿ ಸ್ವಚ್ಛಗೊಳಿಸದ ದೇವದುರ್ಗ ಪುರಸಭೆ ಸಿಬ್ಬಂದಿ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಧಾರಾಕಾರ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯ ತೀವ್ರತೆಯಿಂದ ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ರಸ್ತೆಗಳು ಜಲಾವೃತವಾಗಿದೆ. ಬಜಾರ್ ರಸ್ತೆ. ಎಂಜಿ ರಸ್ತೆ ಸೇರಿದಂತೆ ಹಲವು ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರ ಪರದಾಡಿದ್ದಾರೆ.

ರಾಮನಗರದಲ್ಲಿ ತುಸು ತಂಪೆರೆದ ವರುಣದೇವ

ಭಾರೀ ಬಿಸಿಲಿನ ದಗೆಯಿಂದ ಕಾದ ಕಾವಲಿಯಾಗಿದ್ದ ರಾಮನಗರದಲ್ಲಿ ಸಾಧಾರಣ ಮಳೆಯಾದ ಪರಿಣಾಮ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸತತ ಅರ್ಧಗಂಟೆಗೂ ಅಧಿಕ ಕಾಲ ಸುರಿದ ವರುಣ ದೇವ ಸುಡು ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ರಾಮನಗರ ಜನರಿಗೆ ತಂಪೆರೆದಿದ್ದಾನೆ. ಮಳೆಗಾಲದಲ್ಲಿ ಆಕಾಶದ ಕಡೆ ಮುಖ ಮಾಡಿದ್ದ ಜನರಿಗೆ ಈ ಬಾರಿ ವರುಣ ದೇವ ಕೃಪೆ ತೋರದೆ ಬಿಸಿಲಿನ ಶಾಕ ನೀಡಿದ್ದ. ಆದ್ರೆ ನಿನ್ನೆ ಬಂದ ಮಳೆಗೆ ಜನರು ಖುಷಿ ಪಟ್ಟಿದ್ದು, ಬೆಳೆಗಳಿಗೆ ಉತ್ತಮ ಮಳೆ ಎನ್ನುತ್ತಿದ್ದಾರೆ ರೈತರು.

ಉಡುಪಿಯಲ್ಲಿ ಮಳೆ.. ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚನೆ

ಕೆಲ ದಿನಗಳಿಂದ ತನ್ನ ಹಾವಳಿಯನ್ನ ಕೊಂಚ ಕಡಿಮೆ ಮಾಡಿಕ್ಕೊಂಡಿದ್ದ ಮಳೆರಾಯ.. ಉಡುಪಿ ಜಿಲ್ಲೆಯಲ್ಲಿ ಅಬ್ಬರಿಸ ತೊಡಗಿದ್ದಾನೆ. ಉಡುಪಿ ನಗರ ಮಾತ್ರವಲ್ಲದೇ, ಬೈಂದೂರು ಕುಂದಾಪುರ ಕಾಪು ಕಾರ್ಕಳ ಭಾಗದಲ್ಲೂ ನಿರಂತರ ಮಳೆಯಾಗುತ್ತಿದೆ. ಸಮುದ್ರದ ಅಬ್ಬರವೂ ಜೋರಾಗಿದ್ದು, ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇನ್ನೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಅಪಾಯವಿದ್ದು, ನದಿ ಹಾಗೂ ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕೊಪ್ಪಳದಲ್ಲಿ ಧಾರಾಕಾರ ಮಳೆಯಾಗಿದೆ. ಬರೋಬ್ಬರಿ ಒಂದೂವರೆ ತಾಸು ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಬರಗಾಲದ ಆತಂಕದಲ್ಲಿದ್ದ ಕೊಪ್ಪಳ ಜನತೆಗೆ ವರುಣ ಕರುಣೆ ತೋರಿದ್ದಾನೆ. ಗುಡುಗು ಮಿಂಚು ಸಮೇತ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಇನ್ನು ಜಮೀನು ಉಳಿಮೆ ಮಾಡಿ ಬಿತ್ತನೆ ಮಾಡಿದ ರೈತರು ಸುರಿದ ಮಳೆಗಾಗಿ ಆಕಾಶದತ್ತ ನೋಡಿ ಕೈಮುಗಿದಿದ್ದಾರೆ. ಮಳೆಗಾಗಿ ಕಳೆದ ಒಂದೂವರೆ ತಿಂಗಳಿಂದ ರೈತರು ದೇವರಿಗೆ ಮೊರೆಹೋಗಿದ್ದರು, ಮಳೆಗಾಗಿ ಪೂಜೆಗಳು ಮಾಡುತ್ತಿದ್ದರು. ಇದೀಗ ಮಳೆಯ ಅಬ್ಬರಕ್ಕೆ ತಗ್ಗುಪ್ರದೇಶಗಳಲ್ಲಿ ಮಳೆ ನೀರು ನಿಂತಿವೆ. ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆಗಾಗಿ ಭಜನಾ‌ ಮೊರೆ ಹೋದ ಬೆಳಗಾವಿ ರೈತರು

ಅತ್ತ ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಭಾವದಿಂದಾಗಿ ಜನರು ದೇವರ ಮೊರೆ ಹೋಗಿದ್ದಾರೆ. ಮಳೆಗಾಗಿ ಪ್ರಾರ್ಥಿಸಿ ಜಿಲ್ಲೆಯ ಹುಕ್ಕೇರಿ ನಗರದ ಅಡವಿಸಿದ್ದೇಶ್ವರ ಮಠದಲ್ಲಿ ನಿರಂತರ 24 ಗಂಟೆಗಳ ಕಾಲ ಭಜನೆ ಮಾಡಲಾಗಿದೆ. ಜೂನ್ ಕಳೆದು ಜುಲೈ ತಿಂಗಳು ಬಂದರೂ ಸಹ ಇನ್ನೂ ಮಳೆಯಾಗಿಲ್ಲ. ದನ ಕರುಗಳಿಗೆ ಮೇವು, ನೀರಿಲ್ಲ.. ರೈತರು ಉಳಿಮೆ ಮಾಡದೆ ಮಳೆ ದಾರಿ ಕಾಯುತ್ತಿದ್ದಾರೆ. ಹಾಗಾಗಿ ಹಳ್ಳಕೇರಿಯ ಎಲ್ಲಾ ರೈತರು ನಿರಂತರ ಭಜನೆ ಮಾಡುವ ಮೂಲಕ ಪ್ರಾರ್ಥಿಸಿದ್ದಾರೆ.

ಒಟ್ಟಾರೆ, ಕರುನಾಡಿದ ಮೇಲೆ ಮಳೆರಾಯನಿಗೆ ಕೊಂಚ ಕೋಪ ಕಮ್ಮಿಯಾದದಂತೆ ಕಾಣಿಸ್ತಾ ಇದೆ. ಸದ್ಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಂಪು ತಂಪು.. ಕೂಲ್ ಕೂಲ್..​ ವಾತಾವರಣ ಇದೆ. ರೈತನ ಮುಖದಲ್ಲಿ ಮಂದಹಾಸ ಮೂಡಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರುನಾಡಿನ ಕೆಲವೆಡೆ ಮಳೆಯ ಅಬ್ಬರ; 100ಕ್ಕೂ ಹೆಚ್ಚು ಮನೆಗಳು ಜಲಾವೃತ, ಈಜುಕೊಳದಂತಾದ ಪಂಪ್​ವೆಲ್​

https://newsfirstlive.com/wp-content/uploads/2023/07/Pampwell.jpg

Load More