newsfirstkannada.com

ರಾಜ್ಯದ ಕರಾವಳಿ ಭಾಗದಲ್ಲಿ ಅವಾಂತರ ಸೃಷ್ಟಿದ ವರುಣ.. ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

Share :

06-07-2023

    ಭಾರೀ ಮಳೆಯಿಂದ ಕರಾವಳಿ ಭಾಗದ ಜನ ಜೀವನ ಅಸ್ತವ್ಯಸ್ತ

    ಧರೆಗೆ ಉರುಳಿದ ಮರ, ಕೂದಲೆಳೆ ಅಂತರದಲ್ಲಿ ಪಾರಾದ ಸವಾರ

    ಎತ್ತ ನೋಡಿದ್ರೂ ನೀರೋ.. ನೀರು.. ಇನ್ನು 4 ದಿನ ಮಳೆ ಆರ್ಭಟ

ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕರಾವಳಿ ಕರ್ನಾಟಕದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಕೊಂಚ ಲೇಟ್ ಆಗಿ ರಾಜ್ಯಕ್ಕೆ ಎಂಟ್ರಿ ಕೊಟ್ಟ ಮಳೆರಾಯನನ್ನ ಕರುನಾಡಿನ ಜನ ಅದೆಷ್ಟೋ ಭಾರಿ ನೆನಪಿಸಿಕೊಂಡಿದ್ರು. ಆದ್ರೆ ಮುಂಗಾರು ಶುರುವಾದ ಮೂರ್ನಾಲ್ಕು ದಿನಕ್ಕೇ ಶರವೇಗದಲ್ಲಿ ಮಳೆರಾಯ ಅವಾಂತರಗಳನ್ನ ಸೃಷ್ಟಿಸ್ತಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ

ಪಶ್ಚಿಮ ಘಟ್ಟ ಪ್ರದೇಶದಲ್ಲೂ ಸುರಿಯುತ್ತಿರುವ ಭಾರೀ ಮಳೆಯಿಂದ ಜೀವನದಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ 4 ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರವೂ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸತತ ಮೂರು ದಿನಗಳಿಂದ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹವಾಮಾನ ಇಲಾಖೆ ಮಳೆ ಮುಂದುವರಿಯುವ ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಉಡುಪಿಯಲ್ಲಿ ಮಳೆ ಅಬ್ಬರ.. ಇವತ್ತು ಶಾಲಾ-ಕಾಲೇಜು ರಜೆ

ಉಡುಪಿಯಾದ್ಯಂತ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆಯ ಅಭಾವ ಮುಂದುವರಿಯುವ ಮುನ್ಸೂಚನೆಯನ್ನ ಹವಮಾನ ಇಲಾಖೆ ನೀಡಿದೆ. ವಿಪತ್ತು ಪರಿಸ್ಥಿತಿಯನ್ನು ಅದರಿಸಿ ಅವಶ್ಯವಿರುವ ಕಡೆಗಳಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಕಾರಣ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್​ ಎಚ್ಚರಿಕೆ ನೀಡಿದ್ದು, ನಾಳೆನೂ ಸಹ ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ರಜೆ ವಿಸ್ತರಣ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾಹಿತಿ ನೀಡಿದ್ದಾರೆ.

ಉಡುಪಿಯಲ್ಲಿ ಕಳೆದ 2 ದಿನಗಳಿಂದ ಭಾರಿ ಮಳೆ ಆಗುತ್ತಿದ್ದು, ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಬಾರಿ ಮಳೆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿದ್ದು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿದೆ. ಬ್ರಹ್ಮಾವರ ತಾಲೂಕು ಕೋಡಿ ಬೇಂಗ್ರೆ ಲೈಟ್ ಹೌಸ್ ಬಳಿ ಬಾರಿ ಕಡಲ ಕೊರೆತ ಉಂಟಾಗಿದ್ದು, ಸಮುದ್ರದ ಪಕ್ಕದಲ್ಲಿ ಸಂಪರ್ಕಗಾಗಿ ನಿರ್ಮಿಸಲಾಗಿದ್ದ ರಸ್ತೆ ಬಹುತೇಕ ಸಮುದ್ರ ಪಾಲಾಗಿದೆ. ಇನ್ ಎರಡು ದಿನಗಳ ಕಾಲ ಮಳೆ ಅಬ್ಬರ ಹೀಗೆ ಮುಂದುವರಿದಲ್ಲಿ ಸಂಪರ್ಕ ರಸ್ತೆ ಜೊತೆಗೆ ಸಮುದ್ರದಲ್ಲಿ ದೋಣಿಗಳ ಮಾರ್ಗಸೂಚಿಗಾಗಿ ತೀರದಲ್ಲಿ ಹಾಕಲಾಗಿರುವ ಕಿರು ಲೈಟ್ ಹೌಸ್ ಕೂಡ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಮಳೆ ಮುನ್ಸೂಚನೆ.. ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ವರುಣ ಅಬ್ಬರಿಸುತ್ತಿದ್ದು, ಹೊನ್ನಾವರ ವ್ಯಾಪ್ತಿಯ ಭಾಸ್ಕೇರಿ ಭಾಗದಲ್ಲಿ ಮನೆಗಳಿಗೆ, ತೋಟಕ್ಕೆ ಮಳೆ ನೀರು ನುಗ್ಗಿದೆ. ಗುಂಡಬಾಳ ನದಿ ಪ್ರವಾಕ್ಕೆ ತೋಟ, ಮನೆಗಳು ಜಲಾವೃತಗೊಂಡಿದೆ. ಇನ್ನು ಮುಂಜಾಗ್ರತ ಕ್ರಮವಾಗಿ ತಗ್ಗು ಪ್ರದೇಶದಲ್ಲಿ ಇರುವ ಹಾಗೂ ನದಿ ಭಾಗದಲ್ಲಿರುವ ಜನರನ್ನು ಸ್ಥಳಾಂತರ ಗೊಳ್ಳಲು ಸೂಚನೆ ನೀಡಲಾಗಿದೆ. ಹೆಚ್ಚಿನ ಹಾನಿ ಸಂಭವಿಸಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತದಿಂದ ಸೂಚಿಸಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೊನ್ನಾವರ, ಭಟ್ಕಳಕ್ಕೆ ತೆರಳಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳನ್ನು ವೀಕ್ಷಿಸಿದ್ದಾರೆ.

ಕೊಡಗಿನಲ್ಲಿ ಮಳೆ.. ಜಿಲ್ಲಾ ನದಿಗಳ ನೀರಿನ ಮಟ್ಟ ಏರಿಕೆ

ಕಳೆದ 2 ದಿನಗಳಿಂದ ಕೊಡಗಿನಲ್ಲಿ ಭಾರೀ ಗಾಳಿ ಸಹಿತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಕಾವೇರಿ ನದಿ ಮೆಲ್ಲನೆ ಮೈದುಂಬಿಕೊಳ್ಳುತ್ತಿದ್ದು, ಜಿಲ್ಲೆಯ ಜೀವ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಬ್ರಹ್ಮಗಿರಿ ತಪ್ಪಲ್ಲಿನ ತಲಕಾವೇರಿ ಭಾಗಮಂಡಲದಲದಲ್ಲೂ ಉತ್ತಮ ಮಳೆಯಾಗಿದೆ. ನಿರಂತರ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಇನ್ನೂ ಜಿಲ್ಲೆಯಲ್ಲಿ ವಿಪರೀತ ಗಾಳಿ ಮಳೆಯಿಂದ ಜಿಲ್ಲೆಯ ಅಲ್ಲಲ್ಲಿ ಮರಗಳು ಧರೆಗುರುಳುತ್ತಿದ್ದು, ರಸ್ತೆ ಬಿದ್ದ ಮರಗಳನ್ನ ತೆರವು ಗೊಳಿಸುವ ಕಾರ್ಯಚರಣೆ ಕೂಡ ನಡೆಯುತ್ತಿದೆ.

ಧರೆಗುರುಳಿದ ಮರ.. ಕೂದಲೆಳೆ ಅಂತರದಲ್ಲಿ ಸವಾರ ಪಾರು

ಚಲಿಸುತ್ತಿದ್ದ ಬೈಕ್ ಮೇಲೆ ಬೃಹದಾಕಾರದ ಮರ ಬಿದ್ದು, ಸವಾರ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಐಗೂರಿನಲ್ಲಿ ಸಂಭವಿಸಿದೆ. ಸೋಮವಾರಪೇಟೆ ಕಡೆಯಿಂದ ಮಾದಾಪುರ ಕಡೆ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದಿದೆ. ಬೈಕ್ ಸವಾರ ಸನೋಕ್ ಎಂಬವರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಬೈಕ್ ಜಖಂಗೊಂಡಿದೆ. ಬಳಿಕ ಸ್ಥಳೀಯರ ನೆರವಿನಿಂದ ಮರ ತೆರವು ಮಾಡಲಾಯಿತು. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳಿಂದ ಅನಾಹುತ ಸಂಭವಿಸುತ್ತಿದ್ದು, ರಸ್ತೆ ಬದಿ ಬೆಂಡಾಗಿರುವ ಮರಗಳನ್ನ ಕಡಿದು ಮುಂದಾಗುವ ಅನಾಹುತವನ್ನ ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಾಗೇಪಲ್ಲಿ ಪಟ್ಟಣದಲ್ಲಿ ಸಣ್ಣ ಮಳೆಗೆ ಅವಾಂತರ ಸೃಷ್ಟಿ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಅವೈಜ್ಞಾನಿಕ ರಸ್ತೆ ಹಾಗೂ ಚರಂಡಿ ಕಾಮಗಾರಿಯಿಂದಾಗಿ ಸಣ್ಣ ಮಳೆಗೂ ರಸ್ತೆಯಲ್ಲಿ ನೀರು ತುಂಬಿಕೊಂಡು ಅವಾಂತರ ಸೃಷ್ಟಿಯಾದ ಘಟನೆ ನಡೆದಿದೆ. ಇದರಿಂದ ರಸ್ತೆ ಮಧ್ಯೆ ಕೆರೆಯಂತಾಗಿ. ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ. ಅವಾಂತರ ಉಂಟಾಗಿದೆ. ಪುರಸಭೆ ಅಧಿಕಾರಿಗಳು ಕೂಡಲೇ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿ. ಅಗುತ್ತಿರುವ ಅನಾಹುತ ತಪ್ಪಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಹುಯ್ಯಪ್ಪ.. ಹುಯ್ಯೋ ಅಂತ ಜನ ಮಳೆಗಾಗಿ ಪೂಜೆಗಳ ಮೇಲೆ ಪೂಜೆಗಳನ್ನ ಮಾಡಿದ ಪರಿಣಾಮ ರಾಜ್ಯದಲ್ಲಿ ಮಳೆರಾಯ ಅಬ್ಬರಿಸ್ತಿದ್ದಾನೆ. ಅದರಲ್ಲೂ ಕರಾವಳಿಯಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಕರಾವಳಿ ಭಾಗದಲ್ಲಿ ಅವಾಂತರ ಸೃಷ್ಟಿದ ವರುಣ.. ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

https://newsfirstlive.com/wp-content/uploads/2023/07/UDUPI_RAIN.jpg

Load More