ಸಿದ್ದರಾಮಯ್ಯ ಬಜೆಟ್ ಮೇಲೆ ಜನರ ನಿರೀಕ್ಷೆಗಳೇನು?
ಬಿಜೆಪಿ ಸರ್ಕಾರದ ಯೋಜನೆಗಳಿಗೆ ಬೀಳಲಿದ್ಯಾ ಕೊಕ್..?
ಅನಗತ್ಯ ವೆಚ್ಚ ಕಡಿತ, ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ
ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರೆಕಾರ್ಡ್ ರಾಮಯ್ಯ ಆಗಲಿದ್ದಾರೆ. 14ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಿ ದಾಖಲೆ ಬರೆಯಲಿದ್ದಾರೆ. ಆದ್ರೆ ಒಂದು ಕಡೆ ಗ್ಯಾರಂಟಿ ಯೋಜನೆಗಳು. ಮತ್ತೊಂದೆಡೆ ಸಾಲದ ಹೊರೆ. ಇದರ ಮಧ್ಯೆ ಜನಪರ ಬಜೆಟ್ ಮಂಡಿಸಬೇಕಿದೆ. ಲೋಕಸಭೆ, ಬಿಬಿಎಂಪಿ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ‘ಭಾಗ್ಯ’ಗಳ ರಾಮಯ್ಯರ ಲೆಕ್ಕಾಚಾರದ ಬಗ್ಗೆ ಜನರಲ್ಲಿ ನೂರೆಂಟು ನಿರೀಕ್ಷೆಗಳು ಮೂಡಿವೆ.
ಕರುನಾಡ ಜನತೆಗೆ ಭಾಗ್ಯಗಳನ್ನು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇವತ್ತು 14ನೇ ಬಜೆಟ್ ಮಂಡಿಸುವ ಮೂಲಕ ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಅವರ ದಾಖಲೆ ಬ್ರೇಕ್ ಮಾಡಲಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿಯನ್ನ ಸಿದ್ದರಾಮಯ್ಯ ಮುಡಿಗೇರಿಸಿಕೊಳ್ಳಲಿದ್ದಾರೆ. ಡಿಸಿಎಂ ಆಗಿ 7 ಬಾರಿ ಹಾಗೂ ಸಿಎಂ ಆಗಿ 6 ಬಾರಿ ಈಗಾಗಲೇ ಬಜೆಟ್ ಮಂಡಿಸಿದ್ದಾರೆ. ಇವತ್ತು ಮತ್ತೊಮ್ಮೆ ಬಜೆಟ್ ಮಂಡಿಸಿ ರೆಕಾರ್ಡ್ ರಾಮಯ್ಯ ಆಗಿ ಹೊರಹೊಮ್ಮಲಿದ್ದಾರೆ. ಜೊತೆಗೆ ಇವತ್ತಿನ ಸಿದ್ದರಾಮಯ್ಯರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಇವತ್ತು ಸಿದ್ದರಾಮಯ್ಯ ಬಜೆಟ್.. ರಾಜ್ಯದ ಜನರಿಗೆ ಸಿಗುತ್ತಾ ಸಿಹಿ?
ಪ್ರಚಂಡ ಬಹುಮತಗಳ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್‌ನ ಇವತ್ತು ಮಂಡಿಸಲಿದ್ದಾರೆ. 16ನೇ ವಿಧಾನಸಭೆಯ ಮೊದಲ ಬಜೆಟ್ ಇದಾಗಿದ್ದು ಇವತ್ತು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡನೆ ಮಾಡಲಿದ್ದಾರೆ. ಇನ್ನು ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳದ್ದೆ ಪಾರುಪತ್ಯ ಸಾಧಿಸಲಿವೆ ಎನ್ನಲಾಗ್ತಿದೆ. ಬಜೆಟ್ ಮೂಲಕ ರೈತರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ನೇಕಾರರು, ಮೀನುಗಾರರು, ರೇಷ್ಮೆ ಬೆಳಗಾರರು ಸೇರಿದಂತೆ ಹಲವು ವರ್ಗಗಳಿಗೆ ಅನುಕೂಲ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಲೆಕ್ಕಾಚಾರ!
ಬಜೆಟ್ ನಿರೀಕ್ಷೆಗಳು!
ಇಂದಿರಾ ಕ್ಯಾಂಟೀನ್, ಪಶುಭಾಗ್ಯ, ಅನುಗ್ರಹ, ಕೃಷಿ ಹೊಂಡ, ಒಣ ಬೇಸಾಯಗಾರರಿಗೆ ಬಿತ್ತನೆ ಬೀಜ ಯೋಜನೆಗಳಿಗೆ ಕಾಯಕಲ್ಪ ನೀಡುವುದು. ಮಹಿಳೆಯರು, ಮಕ್ಕಳು, ಯುವಕರು, ವೃದ್ಧರಿಗಾಗಿ ಯೋಜನೆಗಳು. ಇಲಾಖೆಗಳ ಹೊಸ ಪ್ರಸ್ತಾವನೆಗೆ ಅವಕಾಶ ನೀಡದಿರುವ ಸಾಧ್ಯತೆ ಇದೆ. ಗ್ಯಾರಂಟಿಗಳ ಕಾರಣ ಹೊಸ ಯೋಜನೆಗಳಿಗೆ ಕೊಕ್ ಕೊಡುವ ಸಾಧ್ಯತೆಯು ಇದೆ ಎನ್ನಲಾಗಿದೆ.
ಇವತ್ತು 14ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಮುಂದೆ ಹಲವು ಸವಾಲುಗಳಿವೆ. ಕಳೆದ ಬಾರಿ ಬಿಜೆಟ್ ಗಾತ್ರ 3 ಲಕ್ಷದ 9 ಸಾವಿರ ಕೋಟಿಯಷ್ಟಿತ್ತು. ಬಟ್ ಈ ಬಾರಿ 3 ಲಕ್ಷದ 35 ಸಾವಿರ ಕೋಟಿಯಷ್ಟು ಮೊತ್ತದ ಬಜೆಟ್ ಮಂಡಿಸಲು ರೆಡಿಯಾಗಿರುವ ಸಿದ್ದರಾಮಯ್ಯರ ಮುಂದೆ ಈ ಬಾರಿ ಸವಾಲುಗಳ ಬೆಟ್ಟ ಇದೆ.
ಸಿಎಂ ಸಿದ್ದರಾಮಯ್ಯ ಮುಂದೆ ಸವಾಲು!
ಗ್ಯಾರಂಟಿ ಭರವಸೆಗಳನ್ನು ಈಡೇರಿಸುವುದೇ ದೊಡ್ಡ ಸವಾಲಾಗಿದ್ದು, ರಾಜ್ಯ ಸರ್ಕಾರದ ಮೇಲೆ ಹಿಂದಿನ ಸಾಲದ ಹೊರೆ ಬೆಟ್ಟದಷ್ಟಿದೆ. ಹೀಗಾಗಿ ಉಳಿತಾಯ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಅವಧಿಯಲ್ಲಿನ ಕೆಲ ಯೋಜನೆಗಳಿಗೆ ಬ್ರೇಕ್ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ: ಇಂದು ರಾಜ್ಯ ಬಜೆಟ್ ಮಂಡನೆ; ಸಿದ್ದು ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ; ಯಾರಿಗೆ ಬಂಪರ್..?
ಯಾವುದಕ್ಕೆ ಕೊಕ್?
ಜಿಲ್ಲೆಗಳಿಗೊಂದು ಗೋಶಾಲೆ, ಯಡಿಯೂರಪ್ಪ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ರಾಜ್ಯದ ಪಾಲು ಹಾಗೂ ರೈತರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಯೋಜನೆ ವಿದ್ಯಾನಿಧಿಗೆ ಬಜೆಟ್‌ನಲ್ಲಿ ಕೊಕ್ ನೀಡುವ ಸಾಧ್ಯತೆ ಇದೆ.
ಜೋಡೆತ್ತು ಸರ್ಕಾರದ ಮೊದಲ ಬಜೆಟ್ ನೂರೆಂಟು ನಿರೀಕ್ಷೆಗಳನ್ನು ಮೂಡಿಸಿದೆ. ಇವತ್ತಿನ ಬಜೆಟ್ ಸಿದ್ದರಾಮಯ್ಯ ರಾಜಕೀಯ ಜೀವನದ ಪ್ರಮುಖ ಮೈಲಿಗಲ್ಲಾಗಲಿದೆ. ಸಾವಿರ ಸವಾಲುಗಳ ಮಧ್ಯೆ ಸಿದ್ದರಾಮಯ್ಯ ಬಜೆಟ್ ಮಂಡಿಸಿ ಚರಿತ್ರೆ ಸೃಷ್ಟಿಸಲಿದ್ದಾರೆ. ಅದೇನೆ ಇರಲಿ, ರಾಜ್ಯದ ಜನರಿಗೆ ಬಜೆಟ್‌ನಲ್ಲಿ ಭಾಗ್ಯದ ಬಾಗಿಲು ತೆರೆಯುತ್ತಾ ಅಥವಾ ಬರೆ ಬೀಳುತ್ತಾ, ಯಾಱರಿಗೆ ಶುಭ ಶುಕ್ರವಾರ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ