newsfirstkannada.com

Accident: ಶನಿವಾರದಂದು ಕಾಡಿದ ಶನಿದೇವಾ.. ಒಂದೇ ದಿನ ರಾಜ್ಯದಲ್ಲಿ 38 ಮಂದಿ ಶಿವನ ಪಾದ ಸೇರಿದ್ರು

Share :

14-08-2023

  24 ಗಂಟೆ, 38 ಮಂದಿ ಆ್ಯಕ್ಸಿಂಡೆಂಟ್‌ನಲ್ಲಿ ಸಾವು

  ಕರಾಳ ಶನಿವಾರದಂದು ರಾಜ್ಯದಲ್ಲಿ ಸಾಲು ಸಾಲು ಅಪಘಾತ

   ವಾಹನ ಸವಾರರಿಗೆ ADGP ಅಲೋಕ್‌ ಕುಮಾರ್ ಮನವಿ

ಅತಿವೇಗ ತಿಥಿಬೇಗ. ಅವಸರವೇ ಅಪಘಾತಕ್ಕೆ ಕಾರಣ ಅನ್ನೋದು ರಸ್ತೆಯಲ್ಲಿ ಸಂಚರಿಸೋ ಎಲ್ಲಾ ವಾಹನ ಸವಾರರಿಗೆ ತಿಳಿದೇ ಇರುತ್ತೆ. ಆದ್ರೂ ರೂಲ್ಸ್‌ಗಳನ್ನ ಉಲ್ಲಂಘಿಸಿ ಜನರು ಅಪಘಾತಗಳಿಗೆ ಆಹ್ವಾನ ನೀಡ್ತಿದ್ದಾರೆ. ಅಜಾಗರೂಕತೆಯ ಚಾಲನೆ ಮಾಡುತ್ತಾ ಯಮನ ಪಾದ ಸೇರೋರ ಸಂಖ್ಯೆ ಹೆಚ್ಚಾಗ್ತಿದೆ.

ಒಂದೇ ದಿನ, 24 ಗಂಟೆ, 38 ಮಂದಿ ಆ್ಯಕ್ಸಿಂಡೆಂಟ್‌ನಲ್ಲಿ ಸಾವು

ಕಳೆದ ಶನಿವಾರ ವಾಹನ ಸವಾರರ ಪಾಲಿಗೆ ಕರಾಳ ಶನಿವಾರವಾಗಿ ಮಾರ್ಪಟ್ಟಿತ್ತು. ವೀಕೆಂಡ್‌ನಲ್ಲಿ ವಾಹನಗಳನ್ನ ಏರಿದ್ದ ಜನರನ್ನ ಯಮಧೂತ ಫಾಲೋ ಮಾಡ್ತಿದ್ನೇನೋ? ಅದ್ಕೆ ಒಂದೇ ದಿನ ರಾಜ್ಯದಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸಿಬಿಟ್ಟಿವೆ. ಆಗಸ್ಟ್‌ 12ರಂದು ಕೇವಲ 24 ಗಂಟೆಯಲ್ಲಿ ರಾಜ್ಯದ ಹಲವು ಕಡೆ ಸುಮಾರು 38 ಮಂದಿ ವಿವಿಧ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಚಿತ್ರದುರ್ಗದಲ್ಲಿ ಕಾರು-ಲಾರಿ ಅಪಘಾತದಲ್ಲಿ ಸುಮಾರು 5 ಮಂದಿ ದುರ್ಮರಣ ಹೊಂದಿದ್ದಾರೆ. ಹಾಗಾದ್ರೆ ಕರಾಳ ಶನಿವಾರದಂದು ಯಾವ ಜಿಲ್ಲೆಗಳಲ್ಲಿ ಎಷ್ಟು ಮಂದಿಗೆ ಯಮಪಾಶ ಬಿದ್ದಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಎಲ್ಲೆಲ್ಲಿ, ಎಷ್ಟು ಸಾವು?

ಚಿತ್ರದುರ್ಗ 5
ತುಮಕೂರು 8
ಚಿಕ್ಕಮಗಳೂರು 4
ಮಂಡ್ಯ 3
ಬೆಂಗಳೂರು ಗ್ರಾಂ. 2
ಹಾಸನ 2
ಮೈಸೂರು 2
ಬೆಂಗಳೂರು ನಗರ 1
ಇತರೆ ಜಿಲ್ಲೆಗಳು 10

‘ಅನುಭವ ಇಲ್ಲದವರು ರಾತ್ರಿ ವಾಹನ ಚಲಾಯಿಸಬೇಡಿ’

ಇನ್ನು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕ್ಸಿಡೆಂಟ್ ಕೇಸ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರೋದು ಪೊಲೀಸ್ ಇಲಾಖೆಗೂ ತಲೆನೋವು ತರಿಸಿದೆ. ಅಲ್ಲದೇ ಬೈಕ್ ಸವಾರರೇ ಅಪಘಾತಗಳಲ್ಲಿ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಅನುಭವ ಇಲ್ಲದವರು ರಾತ್ರಿ ವಾಹನ ಚಲಾಯಿಸಬೇಡಿ ಅಂತಾ ಸಾರ್ವಜನಿಕರಿಗೆ ಎಡಿಜಿಪಿ ಅಲೋಕ್ ಕುಮಾರ್ ಮನವಿ ಮಾಡಿದ್ದಾರೆ.

ಒಂದೇ ದಿನ 38 ಸಾವು

ಒಟ್ಟಾರೆ, ನಿಧಾನವೇ ಪ್ರಧಾನ ಅದೇ ಸೇಫ್ ಪ್ರಯಾಣ. ಹೀಗಾಗಿ ವಾಹನ ಸವಾರರು ಜಾಗೃತಿಯಿಂದ ವಾಹನಗಳನ್ನ ಚಲಾಯಿಸಿದ್ರೆ ನೀವು ಸೇಫ್‌. ಎದುರಿಗೆ ಬರೋರು ಸೇಫ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Accident: ಶನಿವಾರದಂದು ಕಾಡಿದ ಶನಿದೇವಾ.. ಒಂದೇ ದಿನ ರಾಜ್ಯದಲ್ಲಿ 38 ಮಂದಿ ಶಿವನ ಪಾದ ಸೇರಿದ್ರು

https://newsfirstlive.com/wp-content/uploads/2023/08/Mysore-Accident.jpg

Load More