newsfirstkannada.com

VIDEO: ಸರ್ಕಾರಿ ಕಾರು ದುರ್ಬಳಕೆ.. ಮಗಳಿಗೆ ವಾರ್ನಿಂಗ್ ಕೊಟ್ಟ ಮಿನಿಸ್ಟರ್​ ಶಿವಾನಂದ್​ ಪಾಟೀಲ್​!

Share :

22-06-2023

    ಸಿಎಂ ಸಿದ್ದರಾಮಯ್ಯನವರೇ ಝೀರೋ ಟ್ರಾಫಿಕ್ ಬೇಡ ಅಂದಿದ್ದಾರೆ

    ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಪುತ್ರಿಯ ಕಾರುಬಾರು

    ಅಪ್ಪ ಮಂತ್ರಿಯಾದ್ರೆ ಮಕ್ಕಳು ಏನ್ ಬೇಕಾದ್ರೂ ಮಾಡಬಹುದಾ?

ಬೆಂಗಳೂರು: ಅಪ್ಪ ಮಂತ್ರಿ, ಮುಖ್ಯಮಂತ್ರಿಯಾದ್ರೆ ಅವರ ಮಕ್ಕಳ ದರ್ಬಾರ್, ಗತ್ತು, ಗೈರತ್ತು ಜೋರಾಗಿ ಬಿಡುತ್ತೆ. ಅಧಿಕಾರದಲ್ಲಿರೋ ಜನಪ್ರತಿನಿಧಿಗಳಿಗೆ ಎಷ್ಟೋ ಬಾರಿ ಅವರ ಮುದ್ದಿನ ಮಕ್ಕಳು ಮುಜುಗರಕ್ಕೆ ಕಾರಣವಾಗುತ್ತಾರೆ. ಇಂತಹದೇ ಮತ್ತೊಂದು ಘಟನೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಅಕ್ಕರೆಯ ಮಗಳು ಕಾರಣವಾಗಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಸಾರ್ವಜನಿಕರಿಗೆ ತೊಂದರೆ ಆಗುತ್ತೆ ಅಂತಾ ನನಗೆ ಝೀರೋ ಟ್ರಾಫಿಕ್ ಬೇಡ ಅಂತಾ ಹೇಳಿದ್ದಾರೆ. ಸಿದ್ದರಾಮಯ್ಯ ಕ್ಯಾಬಿನೆಟ್‌ನ ಬಹುತೇಕ ಮಂತ್ರಿಗಳು ಸಿಎಂ ಮಾದರಿಯನ್ನೇ ಫಾಲೋ ಮಾಡ್ತಿದ್ದಾರೆ. ಹೀಗಿರುವಾಗ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸರ್ಕಾರಿ ಕಾರನ್ನ ದುರ್ಬಳಕೆ ಮಾಡಿಕೊಂಡಿರೋದು ನ್ಯೂಸ್‌ ಫಸ್ಟ್‌ ಚಾನೆಲ್‌ನ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಸದಾಶಿವನಗರದಲ್ಲಿ ಸಚಿವ ಶಿವಾನಂದ ಪಾಟೀಲ್‌ ಅವರ ಮಗಳು ಸಂಯುಕ್ತ ಪಾಟೀಲ್ ಅಪ್ಪನ ಕಾರಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಅಪ್ಪ ಮಂತ್ರಿಯಾಗಿದ್ದು, ಮಗಳು ಸರ್ಕಾರಿ ಕಾರನ್ನ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳೋದು ತಪ್ಪಾಗುತ್ತದೆ. ಈ ವಿಚಾರ ಗೊತ್ತಿದ್ದು ಸಚಿವರ ಕಾರಲ್ಲಿ ಮಗಳು ಓಡಾಟ ನಡೆಸಿದ್ರಾ ಅನ್ನೋ ಪ್ರಶ್ನೆಗಳು ಎದ್ದಿದೆ.

ಇನ್ನು, ತಮ್ಮ ಪುತ್ರಿಯ ಕಾರುಬಾರ್‌ಗೆ ಏನಂತೀರಾ ಅಂತಾ ಸಚಿವ ಶಿವಾನಂದ ಪಾಟೀಲ್ ಅವರನ್ನು ಕೇಳಿದಾಗ ಸ್ಪಷ್ಟನೆ ನೀಡಿದ್ದಾರೆ. ನನ್ನ ಮಗಳು ಸರ್ಕಾರಿ ಕಾರಿನಲ್ಲಿ ಓಡಾಟ ನಡೆಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ನೀವು ಹೇಳಿದ ಮೇಲೆ ನನಗೆ ಗೊತ್ತಾಗಿದೆ. ಸಚಿವರ ಪುತ್ರಿಯಾಗಿದ್ದು ಸರ್ಕಾರಿ ಕಾರಿನಲ್ಲಿ ಓಡಾಡಿದ್ರೆ ವಾರ್ನಿಂಗ್ ಕೊಡುತ್ತೇನೆ ಎಂದು ಶಿವಾನಂದ ಪಾಟೀಲ್‌ರು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಸರ್ಕಾರಿ ಕಾರು ದುರ್ಬಳಕೆ.. ಮಗಳಿಗೆ ವಾರ್ನಿಂಗ್ ಕೊಟ್ಟ ಮಿನಿಸ್ಟರ್​ ಶಿವಾನಂದ್​ ಪಾಟೀಲ್​!

https://newsfirstlive.com/wp-content/uploads/2023/06/Shivananda-Patil.jpg

Load More