RSS ಸಂಸ್ಥಾಪಕ ಹೆಡ್ಗೆವಾರ್ ಪಠ್ಯಕ್ಕೆ ಬೀಳುತ್ತಾ ಕತ್ತರಿ?
ರಾಜ್ಯದಲ್ಲಿ ಮತ್ತೆ ಪಠ್ಯ-ಪುಸ್ತಕ ದಂಗಲ್ ಮುನ್ಸೂಚನೆ!
ರಾಜ್ಯದಲ್ಲಿ ಶಿಕ್ಷಣ ತಜ್ಞರ ಒತ್ತಾಯವೇನು?
ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮತ್ತೆ ಪಠ್ಯ ಪರಿಷ್ಕರಣೆ ಮುನ್ನಲೆಗೆ ಬಂದಿದೆ. ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಪಠ್ಯ ಕತ್ತರಿ ಹಾಕುವಂತೆ ಶಿಕ್ಷಣ ತಜ್ಞರು ಸೇರಿ ಕೆಲ ಹಿರಿಯ ಸಾಹಿತಿಗಳಿಂದ ಒತ್ತಾಯ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲ, ಚಕ್ರವರ್ತಿ ಸೂಲಿಬೆಲೆ ಬರೆದಿರುವ ‘ತಾಯಿ ಭಾರತೀಯ ಅಮರಪುತ್ರರು’ ಎಂಬ ಪಾಠವನ್ನೂ ತೆಗೆದು ಹಾಕುವಂತೆ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯಾ ಒತ್ತಾಯ ಮಾಡಿದ್ದಾರಂತೆ.
ಶಿಕ್ಷಣ ತಜ್ಞರ ಒತ್ತಾಯವೇನು?
ಹಿಂದಿನ ಸರ್ಕಾರದಲ್ಲಿ ಬಿ.ಸಿ.ನಾಗೇಶ್ ಅವರು ಶಿಕ್ಷಣಮಂತ್ರಿಯಾಗಿದ್ದರು. ಈ ವೇಳೆ ಪಠ್ಯ-ಪುಸ್ತಕಗಳ ಪರಿಷ್ಕರಣೆಗಾಗಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಈ ಸಮಿತಿಯು ಪಠ್ಯ-ಪುಸ್ತಕದಲ್ಲಿ ಒಂದಷ್ಟು ಬದಲಾವಣೆ ಮಾಡಿತ್ತು. ಇದು ಹಲವರ ವಿರೋಧಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆಯೇ, ಬಿಜೆಪಿ ಸರ್ಕಾರದಲ್ಲಿ ಪರಿಷ್ಕರಣೆ ಆಗಿದ್ದ ಪಠ್ಯ-ಪುಸ್ತಕಗಳಿಗೆ ಕತ್ತರಿ ಹಾಕಿ, ಹಳೆಯ ಅಂದ್ರೆ 2019 ರ ಬರಗೂರು ರಾಮಚಂದ್ರಪ್ಪನವರ ಪರಿಷ್ಕರಣೆಯಂತೆ ಪಠ್ಯವನ್ನೇ ಮುಂದುವರೆಸುವಂತೆ ಒತ್ತಾಯ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ