newsfirstkannada.com

×

ಇಂದಿನಿಂದ 1 ವಾರ ಇಡೀ ರಾಜ್ಯಾದ್ಯಂತ ಭರ್ಜರಿ ಮಳೆ; ಕನ್ನಡಿಗರು ಗಮನಿಸಲೇಬೇಕಾದ ಸ್ಟೋರಿ!

Share :

Published September 25, 2024 at 6:19am

    ಇಂದಿನಿಂದ ಒಂದು ವಾರಗಳ ಕಾಲ ಭರ್ಜರಿ ಮಳೆಯಾಗಲಿದೆ

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲರ್ಟ್​ ಘೋಷಿಸಿದ ಸರ್ಕಾರ..!

    ಸೆಪ್ಟೆಂಬರ್​ 25ನೇ ತಾರೀಕಿನಿಂದ ಅಕ್ಟೋಬರ್​​​ 2 ರವರೆಗೆ ಮಳೆ

ಬೆಂಗಳೂರು: ಇಂದಿನಿಂದ ಒಂದು ವಾರಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ. ಸೆಪ್ಟೆಂಬರ್​ 25ನೇ ತಾರೀಕಿನಿಂದ ಅಕ್ಟೋಬರ್​​​ 2 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ವರುಣನ ಆರ್ಭಟ ಜೋರಾಗಿ ಇರಲಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲೂ ಮಳೆ ಅಬ್ಬರ ಇರಲಿದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರೋ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಹಲವು ಭಾಗಗಳಲ್ಲಿ ಭರ್ಜರಿ ಮಳೆ

ಅಷ್ಟೇ ಅಲ್ಲ, ರಾಜ್ಯದ ಕೆಲವು ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಸಮೇತ ಮಳೆ ಬೀಳಲಿದೆ. ಬೀದರ್, ಬೆಳಗಾವಿ, ಕಲಬುರಗಿ, ಯಾದಗಿರಿ, ತುಮಕೂರು, ಚಿಕ್ಕಬಳ್ಳಾಪುರ, ವಿಜಯಪುರ, ರಾಯಚೂರು, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರದಲ್ಲೂ ಮಳೆ ಬೀಳಿದೆ. ಹಾಗಾಗಿ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಟ್ಟೆಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಆದೇಶಿಸಿದೆ.

ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅನ್ಯಾಯವಾದ್ರೆ ಸುಮ್ಮನೇ ಕೂರಲ್ಲ; ಪ್ರಕಾಶ್​ ರಾಜ್​​​ಗೆ ಪವನ್​​ ಖಡಕ್​​​​ ವಾರ್ನಿಂಗ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ 1 ವಾರ ಇಡೀ ರಾಜ್ಯಾದ್ಯಂತ ಭರ್ಜರಿ ಮಳೆ; ಕನ್ನಡಿಗರು ಗಮನಿಸಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/05/Bangalore-Rains-1.jpg

Load More