ಬಿಯರ್ ಬೆಲೆಯಲ್ಲಿ ಶೇಕಡಾ ಎಷ್ಟು ಹೆಚ್ಚಳವಾಗಿದೆ ಗೊತ್ತಾ?
ಬಜೆಟ್ನಲ್ಲಿ ಮಂಡನೆ ಮಾಡಿದಂತೆ ಇಂದಿನಿಂದ ಬೆಲೆ ಜಾರಿ
ರಮ್, ವಿಸ್ಕಿ, ಜಿನ್ ಸೇರಿದಂತೆ ಇತರೆ ಮದ್ಯಗಳ ಬೆಲೆ ಹೆಚ್ಚಳ
ಬೆಂಗಳೂರು: ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ಕೊಟ್ಟಿದ್ದು ಇಂದಿನಿಂದ ಎಲ್ಲಾ ಮದ್ಯಗಳ ಬೆಲೆಗಳು ಹೆಚ್ಚಳವಾಗಲಿವೆ. ಆದರೆ ಕೆಲವು ಬಾರ್ಗಳಲ್ಲಿ ನಿನ್ನೆಯಿಂದಲೇ ಹೆಚ್ಚಿನ ಹಣ ಪಡೆಯಲಾಗಿದೆ ಎಂದು ಹೇಳಲಾಗಿದೆ. ರಮ್, ವಿಸ್ಕಿ, ಬ್ರಾಂದಿ, ಜಿನ್ ಸೇರಿದಂತೆ ಇತರೆ ಮದ್ಯಗಳ ಬೆಲೆಗಳಲ್ಲಿ ಶೇಕಡಾ 20 ಏರಿಕೆಯಾದರೆ, ಬಿಯರ್ ಮೇಲಿನ ಅಬಕಾರಿ ಸುಂಕ ಶೇಕಡಾ 10 ರಷ್ಟು ಹೆಚ್ಚಳವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು 14ನೇ ಬಜೆಟ್ ಅನ್ನು ಜುಲೈ 07 ರಂದು ಮಂಡಿಸಿದ್ದರು. ಬಜೆಟ್ನಲ್ಲಿ ಮದ್ಯದ ಬೆಲೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಡೆ ಮದ್ಯದ ಹೊಸ ದರ ಇಂದಿನಿಂದ ಹೆಚ್ಚಳ ಮಾಡಲಿದೆ. ಸರ್ಕಾರ ಈಗಾಗಲೇ 5 ಗ್ಯಾರಂಟಿಗಳಲ್ಲಿ 3 ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಇನ್ನುಳಿದವುಗಳನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡಲಿದೆ. ಹೀಗಾಗಿ ಈ ಯೋಜನೆಗಳಿಗೆ ಹಣ ಹೊಂದಿಸಲು ಅಬಕಾರಿ ಸುಂಕ ಏರಿಕೆ ಮಾಡಿದೆ.
ಇನ್ನು ಸರ್ಕಾರದ ಆದೇಶದಂತೆ ಇಂದಿನಿಂದ ಮದ್ಯದ ಬೆಲೆ ಹೆಚ್ಚಳವಾಗಬೇಕು. ಆದರೆ ಕೆಲವು ಬಾರ್ಗಳಲ್ಲಿ ನಿನ್ನೆಯಿಂದಲೇ ಈ ಬೆಲೆಯನ್ನು ಅಳವಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ