newsfirstkannada.com

ವಾಹನ ಸವಾರರಿಗೆ ಸಿಹಿಸುದ್ದಿ.. ಟ್ರಾಫಿಕ್ ದಂಡ ಪಾವತಿಸಲು ಮತ್ತೆ 50% ಆಫರ್‌; ಈ ಬಾರಿ ಎಷ್ಟು ದಿನ ಕಾಲಾವಕಾಶ ಗೊತ್ತಾ?

Share :

05-07-2023

    ಮತ್ತೊಮ್ಮೆ ದಂಡ ಪಾವತಿಗೆ 50% ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ

    ಇಂದಿನಿಂದ ಎರಡು ತಿಂಗಳುಗಳ ಕಾಲ 50% ದಂಡ ಪಾವತಿಸಲು ಅವಕಾಶ

    ಫೆಬ್ರವರಿಯಲ್ಲಿ ಆಫರ್ ಕೊಟ್ರೂ ಇನ್ನೂ ಬಾಕಿ ಉಳಿದಿದೆ 2 ಕೋಟಿ ಕೇಸ್‌!

ಬೆಂಗಳೂರು: ಟ್ರಾಫಿಕ್‌ ರೂಲ್ಸ್ ಬ್ರೇಕ್‌ ಮಾಡಿರೋ ವಾಹನ ಸವಾರರಿಗೆ ಮತ್ತೊಂದು ಸುವರ್ಣಾವಕಾಶ ಬಂದಿದೆ. ರಾಜ್ಯದ ಸಾರಿಗೆ ಇಲಾಖೆ ಟ್ರಾಫಿಕ್ ರೂಲ್ಸ್ ದಂಡ ಪಾವತಿಸಲು ಮತ್ತೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದೆ. ಕಳೆದ ಮಾರ್ಚ್‌ ತಿಂಗಳಲ್ಲೂ ಸಾರಿಗೆ ಇಲಾಖೆ ಇಂತಹದೊಂದು ಭರ್ಜರಿ ಆಫರ್ ಕೊಟ್ಟಿತ್ತು. ರಿಯಾಯಿತಿ ಸಿಕ್ಕ ಖುಷಿಯಲ್ಲಿ ಕೆಲವರು 50% ಫೈನ್ ಕಟ್ಟಿ ರಿಲೀಫ್ ಆಗಿದ್ರೆ ಹಲವರು ತಮ್ಮ ವಾಹನಗಳ ಮೇಲಿನ ದಂಡವನ್ನ ಇನ್ನೂ ಹಾಗೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಮತ್ತೊಮ್ಮೆ ದಂಡ ಪಾವತಿಗೆ ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ನೀಡಿದೆ.

ಈ ಬಾರಿಯೂ ಟ್ರಾಫಿಕ್ ದಂಡ ಪಾವತಿಸಲು ಸಾರಿಗೆ ಇಲಾಖೆ ಶೇಕಡಾ 50ರಷ್ಟು ರಿಯಾಯಿತಿಯನ್ನು ನೀಡಿದೆ. ಆದರೆ ಈ ಆಫರ್‌ಗೆ ಒಂದು ಷರತ್ತು ಕೂಡ ಅನ್ವಯವಾಗಲಿದೆ. ಫೆಬ್ರವರಿ 11ರ ಅವಧಿಯೊಳಗೆ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಬಹುದಾಗಿದೆ. ಟ್ರಾಫಿಕ್‌ ದಂಡ ಪಾವತಿಗೆ ಈ ಬಾರಿ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಇಂದಿನಿಂದ ಸೆಪ್ಟೆಂಬರ್ 9ರವರೆಗೆ ಕಾಲಾವಕಾಶ ನೀಡಿ ಸಾರಿಗೆ ಇಲಾಖೆ ಆದೇಶ ನೀಡಿದೆ. ಈ ಆದೇಶ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಶೇಕಡಾ 50ರಷ್ಟು ರಿಯಾಯಿತಿ ಅನ್ವಯವಾಗಲಿದೆ.

2 ಕೋಟಿ ಟ್ರಾಫಿಕ್ ದಂಡ ಪ್ರಕರಣ ಇನ್ನೂ ಬಾಕಿ
ರಾಜ್ಯ ಸಾರಿಗೆ ಇಲಾಖೆಯು ಕಳೆದ ಫೆಬ್ರವರಿಯಲ್ಲೂ ಇದೇ ಮಾದರಿಯ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ನೀಡಿತ್ತು. ಮೊದಲಿಗೆ ಫೆಬ್ರವರಿ 3ರಿಂದ ಫೆಬ್ರವರಿ 11ರವರೆಗೆ ದಂಡ ಪಾವತಿಸಲು ಸೂಚಿಸಿತ್ತು. ಇದಾದ ಬಳಿಕವೂ ರಿಯಾಯಿತಿ ದಂಡ ಪಾವತಿಸಲು 15 ದಿನಗಳ ಕಾಲ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಟ್ರಾಫಿಕ್‌ ಪೊಲೀಸರು 52.11 ಲಕ್ಷ ಪ್ರಕರಣಗಳಲ್ಲಿ 152 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿತ್ತು.

ಇನ್ನೂ ರಾಜ್ಯದಲ್ಲಿ 2 ಕೋಟಿ ಟ್ರಾಫಿಕ್ ದಂಡ ಪ್ರಕರಣಗಳಿದ್ದು, 1300 ಕೋಟಿ ರೂಪಾಯಿ ದಂಡದ ಮೊತ್ತ ಬಾಕಿ ಉಳಿದಿತ್ತು. ಈ ಬಾಕಿ ಉಳಿದ ದೊಡ್ಡ ಮಟ್ಟದ ದಂಡ ಸಂಗ್ರಹಿಸಲು ಇದೀಗ ಸಾರಿಗೆ ಇಲಾಖೆ ಇಂದಿನಿಂದ ಸೆಪ್ಟೆಂಬರ್ 9ರವರೆಗೆ ಕಾಲಾವಕಾಶ ನೀಡಿದೆ. ವಾಹನ ಸವಾರರು ಇಂದೇ ರಾಜ್ಯದ ಟ್ರಾಫಿಕ್ ಪೊಲೀಸರ ಬಳಿ ಹೋಗಿ ಶೇಕಡಾ 50ರಷ್ಟು ರಿಯಾಯಿತಿ ದರದಲ್ಲಿ ಟ್ರಾಫಿಕ್‌ ದಂಡವನ್ನು ಪಾವತಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವಾಹನ ಸವಾರರಿಗೆ ಸಿಹಿಸುದ್ದಿ.. ಟ್ರಾಫಿಕ್ ದಂಡ ಪಾವತಿಸಲು ಮತ್ತೆ 50% ಆಫರ್‌; ಈ ಬಾರಿ ಎಷ್ಟು ದಿನ ಕಾಲಾವಕಾಶ ಗೊತ್ತಾ?

https://newsfirstlive.com/wp-content/uploads/2023/07/Traffic-Fine-1.jpg

Load More