BPL-AB ಎಂಬ ಹೊಸ ಕಾರ್ಡ್ ಪರಿಚಯಿಸಲಿದೆ ಸರ್ಕಾರ
BPL-AB ಕಾರ್ಡ್ ಪಡೆದವರಿಗೆ ಸಿಗಲ್ವಾ ಅನ್ನಭಾಗ್ಯ..?
ಸಚಿವ ಮುನಿಯಪ್ಪರಿಂದ ಮಹತ್ವದ ಮಾಹಿತಿ..!
ಬೆಂಗಳೂರು: ರಾಜ್ಯದ 3 ಕೋಟಿ ಜನರ ಖಾತೆಗೆ ಅನ್ನಭಾಗ್ಯದ ಹಣ ಸೇರಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಸರ್ಕಸ್ ಮಾಡಿ ಕೊನೆಗೂ ಜನರಿಗೆ ಯೋಜನೆ ತಲುಪಿಸಿದೆ. ಅಕ್ಕಿ ಬದಲು ಕೆಜಿಗೆ 34 ರೂಪಾಯಿ ಹಣ ನೀಡಿದೆ. ಆದರೆ ಇದೀಗ ಗ್ಯಾರಂಟಿ ಎಫೆಕ್ಟ್ನಿಂದ ಹೊಸದಾಗಿ ಬಿಪಿಎಲ್ ಕಾರ್ಡ್ ಸಿಗದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಚಿತ ವೈದ್ಯಕೀಯ ಸೌಲಭ್ಯದ ಲಾಭ ಪಡೆಯಲಾಗದೆ, ಆಸ್ಪತ್ರೆಗೆ ಹಣ ಹೊಂದಿಸಲು ಆಗದೇ ಬಡವರು ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ಅಂತ್ಯ ಹಾಡಲು ಆಹಾರ ಇಲಾಖೆ ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿದೆ.
ಹೌದು, ಎರಡು ರೀತಿಯ ಬಿಪಿಎಲ್ ಕಾರ್ಡ್ ಪರಿಚಯಿಸಲು ಆಹಾರ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್‌ಗಳ ಪೈಕಿ ಸುಮಾರು 8 ಲಕ್ಷ ಕಾರ್ಡ್‌ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯುತ್ತಿಲ್ಲ. ಹೀಗಾಗಿ ಅಂತಹವರನ್ನು ಪತ್ತೆ ಹಚ್ಚಿ ಉಚಿತ ಅಕ್ಕಿ ವಿತರಣೆಯಿಂದ ಹೊರಗಿಡಲು ಆಹಾರ ಇಲಾಖೆ ನಿರ್ಧರಿಸಿದೆ. ಅಕ್ಕಿ ಪಡೆಯದ ಹಲವರು ಭಾರತ್ ಆರೋಗ್ಯ ಸೇವೆ ಮತ್ತಿತರ ಸರ್ಕಾರಿ ಸೌಲಭ್ಯಗಳಿಗೆ ಸೀಮಿತವಾಗಿ ಬಿಪಿಎಲ್ ಕಾರ್ಡ್ ಬಳಸ್ತಿದ್ದಾರೆ. ಹೀಗಾಗಿ ಎರಡು ಮಾದರಿ ಬಿಪಿಎಲ್ ಕಾರ್ಡ್ ವಿತರಣೆಗೆ ಚಿಂತನೆ ನಡೆದಿದೆ. ಆಂಧ್ರದ ಮಾದರಿಯಲ್ಲಿ ಪ್ರತ್ಯೇಕ ಕಾರ್ಡ್ ಜಾರಿಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಖುದ್ದು ಆಹಾರ ಸಚಿವ ಮುನಿಯಪ್ಪ ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿ ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಕಾರ್ಡ್‌ಗಳನ್ನು ಆದಷ್ಟು ಬೇಗ ನೀಡುವ ಪ್ರಕ್ರಿಯೆಯನ್ನು ಸರ್ಕಾರ ನಡೆಸಲಿದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಿಸಲಾಗುವುದು. ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ 3 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಕೆಲವರು ಪಡಿತರ ಬೇಡ ಆರೋಗ್ಯ ಯೋಜನೆಗಳ ಲಾಭಕ್ಕಾಗಿ ಪಡಿತರ ಚೀಟಿ ನೀಡಿ ಎಂದು ಕೋರಿದ್ದಾರೆ. ಹಾಗಾಗಿ, ಇಂತಹವರಿಗೆ ಆದಷ್ಟು ಬೇಗ ಕಾರ್ಡ್ ನೀಡಲು ಕ್ರಮವಹಿಸಲಾಗುವುದು. ಆರೋಗ್ಯ ಯೋಜನೆಗಾಗಿ ಕಾರ್ಡ್ ಬಯಸಿರುವವರಿಗೆ ಬಿಪಿಎಲ್-ಎಬಿ ಎಂದು ನಮೂದಿಸಿ ಕಾರ್ಡ್ ನೀಡುವ ಚಿಂತನೆ ಇದೆ. ಇಂತಹವರಿಗೆ ಪಡಿತರ ಯೋಜನೆಯ ಲಾಭ ಇರುವುದಿಲ್ಲ ಆದರೆ, ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಈ ಬಿಪಿಎಲ್‌ಕಾರ್ಡ್‌ನ್ನು ಬಳಸಿಕೊಳ್ಳಬಹುದು. ಆರೋಗ್ಯ ಯೋಜನೆಗಾಗಿಯೇ ಬಿಪಿಎಲ್ ಕಾರ್ಡ್‌ನ್ನು ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. –ಸಚಿವ KH ಮುನಿಯಪ್ಪ
ಹೀಗಾಗಿ ಆಹಾರ ಇಲಾಖೆಯು ಮನೆ- ಮನೆ ಸಮೀಕ್ಷೆ ಮಾಡಲು ಮುಂದಾಗಿದೆ. ಮಾನದಂಡ ಮೀರಿ ಪಡೆದ ಬಿಪಿಎಲ್ ರದ್ದು ಮಾಡಲು ಇಲಾಖೆ ಮುಂದಾಗಿದೆ. ಈಗಾಗಲೇ ಆಹಾರ ಇಲಾಖೆ 4 ಲಕ್ಷ ಅನರ್ಹ ಕಾರ್ಡ್ಗಳನ್ನ ಕ್ಯಾನ್ಸಲ್ ಮಾಡಿದೆ. ಈಗ ಮತ್ತೆ ಕಳ್ಳಾಟ ಆಡುವರರ ಆಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಅರ್ಹರಿಗೆ ಮಾತ್ರ ಯೋಜನೆ ಲಾಭ ಸಿಗುವಂತೆ ಮಾಡಲು ಸಿದ್ದವಾಗಿರೋದು ಒಳ್ಳೆಯ ಬೆಳವಣಿಗೆ. ಈ ಕೆಲಸ ಶೀಘ್ರದಲ್ಲೇ ಆಗಲಿ ಅಂತಿದ್ದಾರೆ ಜನತಾ ಜನಾರ್ಧನರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ