ಸಂತ್ರಸ್ಥರನ್ನು ಸ್ಥಳಾಂತರ ಮಾಡುತ್ತಿರೋ ಅಗ್ನಿಶಾಮಕ ಸಿಬ್ಬಂದಿ
ಕೊಡಂಕೂರು ಗ್ರಾಮ ಮನೆಗಳು ದ್ವೀಪದಂತಾಗಿ ಜಲದಿಗ್ಭಂದನ
ಕೃಷ್ಣಮಠದ ವಾಹನ ನಿಲುಗಡೆ ಸ್ಥಳವೆಲ್ಲಾ ಕಂಪ್ಲೀಟ್ ಜಲಾವೃತ
ಉಡುಪಿ: ಕೃಷ್ಣನಗರಿಯಲ್ಲಿ ಧಾರಾಕಾರ ಮಳೆಯ ಅಬ್ಬರ ಹಲವು ಅವಾಂತರ ಸೃಷ್ಟಿಗೆ ಕಾರಣವಾಗುತ್ತಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮನೆಗಳು ದ್ವೀಪದಂತಾಗಿ ಜಲದಿಗ್ಭಂದನಕ್ಕೆ ಒಳಪಡುತ್ತಿವೆ. ಇನ್ನು ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ಕೂಡ ಜೋರಾಗಿ ನಡೆಯುತ್ತಿದೆ.
ವರುಣಾರ್ಭಟಕ್ಕೆ ಕೊಡಂಕೂರು ಗ್ರಾಮದ ಹಲವು ಮನೆಗಳು ನಡುಗಡ್ಡೆಯಾಗಿ ಬಿಟ್ಟಿವೆ. ಮನೆ ಸುತ್ತಲೂ ನೀರು ಭೋರ್ಗರೆದು ಹರಿಯುತ್ತಿದೆ. ಹೀಗಾಗಿ ಸ್ಥಳೀಯರು ತಮ್ಮ ಜೀವವನ್ನ ಅಂಗೈಯಲ್ಲಿಡಿದು ಕುಳಿತ್ತಿದ್ದಾರೆ. ಸ್ಥಳದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ಮಾಡುತ್ತಿದೆ. ಬೋಟ್ ಮೂಲಕ ತೆರಳಿ ಭಯದಲ್ಲೇ ಕುಳಿತಿದ್ದವರನ್ನ ರಕ್ಷಣೆ ಮಾಡುತ್ತಿದ್ದಾರೆ.
ಮನೆಗಳು ನೀರಿನಿಂದ ತುಂಬಿದ್ದರಿಂದ ಎತ್ತರದ ಪ್ರದೇಶದಲ್ಲಿ ಬಂದು ನಿಂತಿದ್ದ ಸಂತ್ರಸ್ಥರನ್ನು ರಕ್ಷಣೆ ಮಾಡಲಾಗುತ್ತಿದೆ. ಮಹಿಳೆಯರಿಗೆ, ವೃದ್ಧರಿಗೆ, ಸಣ್ಣ, ಸಣ್ಣ ಮಕ್ಕಳಿಗೆ ಲೈಫ್ ಜಾಕೆಟ್ ಹಾಕಿಸಿ ಬಳಿಕ ಬೋಟ್ನಲ್ಲಿ ಕೂರಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ 198 ಮಿಲಿ ಮೀಟರ್ ನಿರಂತರವಾಗಿ ಮಳೆ ಸುರಿಯುತ್ತಿದೆ ಎಂದು ಹೇಳಲಾಗುತ್ತಿದೆ.
ಉಡುಪಿ ಜಿಲ್ಲೆಯ ತಾಲೂಕುವಾರು ಮಳೆ ವಿವರ:
ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಇನ್ನು ಮೂರ್ನಾಲ್ಕು ದಿನಗಳ ಮಳೆ ಹೀಗೆ ಇರಲಿದೆ ಎನ್ನಲಾಗಿದ್ದು ಹೀಗಾಗಿ ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಉಡುಪಿಯ ಕೃಷ್ಣ ಮಠದ ವಾಹನ ನಿಲುಗಡೆ ಸ್ಥಳವೆಲ್ಲ ಫುಲ್ ಜಲಾವೃತ ಆಗಿದೆ. ಹೀಗಾಗಿ ಅಲ್ಲಿದ್ದ ವಾಹನಗಳನ್ನು ಸ್ಥಳಾಂತರ ಮಾಡಿ ಪಾರ್ಕಿಂಗ್ ಏರಿಯಾದ ರಸ್ತೆ ಬಂದ್ ಮಾಡಲಾಗಿದೆ. ದೇವರ ದರ್ಶನ ಪಡೆಯಲಾಗದೇ ಉತ್ತರ ಕರ್ನಾಟಕ ಭಾಗದಿಂದ ಬಂದಂತ ಭಕ್ತರು ನಿರಾಸೆಗೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ