newsfirstkannada.com

ಇಂದು ಸದನದಲ್ಲಿ ಅಸಲಿ ಯುದ್ಧ.. CM ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗುವ ವಿರೋಧ ಪಕ್ಷದ ನಾಯಕ ಯಾರು?

Share :

04-07-2023

    ಸರ್ಕಾರದ ಯೋಜನೆಗಳಿಗೆ ಬಿಜೆಪಿಯಿಂದ ಪ್ರಚಾರ- ಡಿಸಿಎಂ

    ವಿಧಾನಸಭೆಯ ಒಳಗೆ ಬೊಮ್ಮಾಯಿ, ಹೊರಗೆ BSY ವಾರ್

    ಇಂದು BJPಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತಾ?

ರಾಜ್ಯ ಬಜೆಟ್ ಅಧಿವೇಶನ ನಿನ್ನೆಯಿಂದ ಆರಂಭವಾಗಿದೆ. ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಕೆಲ ದಿನಗಳ ಸಾಧನೆಯನ್ನ ರಾಜ್ಯಪಾಲರು ಹಾಡಿ ಹೊಗಳಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕಾಂಗ್ರೆಸ್‌ ಸರ್ಕಾರದ ಘೋಷವಾಕ್ಯವನ್ನ ಕೊಂಡಾಡಿದ್ದಾರೆ. ಇದೀಗ ಇವತ್ತಿನಿಂದ ಸದನದಲ್ಲಿ ಅಸಲಿ ಕದನ ಶುರುವಾಗಲಿದೆ. ಕಲಾಪದ ಒಳಗೆ, ಹೊರಗೆ ‘ಗ್ಯಾರಂಟಿ’ ಯುದ್ಧ ನಡೆಯೋದು ನಿಶ್ಟಿತವಾಗಿದೆ. ಆದ್ರೆ, ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತೋ ವಿಪಕ್ಷ ನಾಯಕ ಯಾರು ಅನ್ನೋದೆ ಕುತೂಹಲ.

ಸಿದ್ದರಾಮಯ್ಯ ಸರ್ಕಾರದ ಮೊದಲ ಅಧಿವೇಶನ ಆರಂಭವಾಗಿದೆ. ನಿನ್ನೆ ರಾಜ್ಯಪಾಲರ ಭಾಷಣವೇ ಹೈಲೆಟ್‌ ಆಗಿದ್ದ ಸದನದಲ್ಲಿ ಇವತ್ತು ಅಸಲಿ ವಾರ್ ಶುರುವಾಗಲಿದೆ. 2 ಗ್ಯಾರಂಟಿಗಳನ್ನ ಜಾರಿಗೊಳಿಸಿ ಮೂರಕ್ಕೆ ಕೈ ಇಟ್ಟು ಸಿಎಂ ಸಿದ್ದರಾಮಯ್ಯ ಸರ್ಕಾರ ಮುನ್ನುಗ್ಗುತ್ತಿದೆ. ಇದನ್ನೇ ಅಸ್ತವಾಗಿಸಿಕೊಂಡು ಆಡಳಿತ ಪಕ್ಷವನ್ನ ಕಟ್ಟಿ ಹಾಕಲು ಕೇಸರಿ ಪಾಳಯ ಸಜ್ಜಾಗಿದೆ. ಇವತ್ತಿನಿಂದ ಕಮಲ ಪಾಳಯ ಗ್ಯಾರಂಟಿ ಕದನ ನಡೆಸಲು ಮುಂದಾಗಿದೆ.

ಇವತ್ತಿನಿಂದ ಅಧಿವೇಶನದಲ್ಲಿ ‘ಗ್ಯಾರಂಟಿ’ ಕದನ ಶುರು

ಈಗಾಗಲೇ 13 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ 14ನೇ ಬಜೆಟ್‌ ಮಂಡಿಸಲು ಉತ್ಸುಕರಾಗಿದ್ದಾರೆ. ಇದೇ ಜುಲೈ 7ರಂದು ಕರುನಾಡ ಲೆಕ್ಕವನ್ನ ಸಿದ್ದರಾಮಯ್ಯ ರಾಜ್ಯದ ಜನರ ಮುಂದೆ ತೆರೆದಿಡಲಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಬರೆಯಲಿದ್ದಾರೆ. ಈಗಾಗಲೇ ನಿನ್ನೆ ಬಜೆಟ್‌ ಅಧಿವೇಶನ ಆರಂಭವಾಗಿದೆ. ಇವತ್ತಿನಿಂದ 3 ದಿನಗಳ ಕಾಲ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆಗಳು ಆರಂಭವಾಗಲಿದೆ. ಇದೇ ವೇಳೆ ವಿಧಾನಸಭೆ, ವಿಧಾನಪರಿಷತ್‌ ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಗ್ಯಾರಂಟಿ ಪ್ರತಿಭಟನೆ ನಡೆಸಲಿದ್ದಾರೆ.

ಬಿಜೆಪಿ ‘ಗ್ಯಾರಂಟಿ’ ಅಸ್ತ್ರ

  • ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ ಪ್ರತಿಭಟನೆ
  • ಪರಿಷತ್‌ನಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಭಟನೆ
  • ಹೊರಗಡೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಪ್ರೊಟೆಸ್ಟ್‌
  • ಬಿಎಸ್​ ಯಡಿಯೂರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಸಾಥ್
  • ಬೆ. 10:30ಕ್ಕೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ
  • ಅನ್ನಭಾಗ್ಯ, ಗೃಹಲಕ್ಷ್ಮಿ, ಸ್ತ್ರೀ ಶಕ್ತಿ, ಯುವನಿಧಿ, ಗೃಹಜ್ಯೋತಿ
  • ಈ ಯೋಜನೆಗಳಿಗೆ ಯಾವುದೇ ಕಂಡೀಷನ್‌ ಹಾಕಬಾರದು‌
  • ಅಲ್ಲದೇ ಸಮರ್ಪಕವಾಗಿ ಗ್ಯಾರಂಟಿಗಳನ್ನ ಜಾರಿಗೊಳಿಸಿಲ್ಲ
  • ಈ ಅಸ್ತ್ರವನ್ನ ಬಳಸಿ ಹೋರಾಟ ಮಾಡಲು ಬಿಜೆಪಿ ಸಿದ್ಧತೆ

‘ಬಿಜೆಪಿ ಪ್ರತಿಭಟನೆ ಮಾಡಿದ್ರೆ ಒಳ್ಳೇಯದೇ ಆಯ್ತು’

ಇನ್ನೂ ಬಿಜೆಪಿಯವರು ಮಾಡ್ತಿರೋ ಗ್ಯಾರಂಟಿ ಪ್ರತಿಭಟನೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಪ್ರತಿಭಟನೆ ಮಾಡಿದ್ರೆ ಒಳ್ಳೆಯದೇ ಆಯಿತು. ಅವರು ನಮ್ಮ ಸರ್ಕಾರದ ಕೆಲಸಗಳಿಗೆ ಪ್ರಚಾರ ಕೊಡ್ತಿದ್ದಾರೆ ಅಂತಾ ಬಿಜೆಪಿ ಗ್ಯಾರಂಟಿ ಹೋರಾಟದ ಬಗ್ಗೆ ಡಿಸಿಎಂ ಲೇವಡಿ ಮಾಡಿದ್ದಾರೆ.

ಬಿಜೆಪಿಯವರಿಗೆ ಅಭಿನಂದಿಸುತ್ತೇನೆ. ಅವರು ಪ್ರತಿಭಟನೆ ಮಾಡಿ ಒಳ್ಳೆಯ ಪ್ರಚಾರ ಕೊಡುತ್ತಿದ್ದಾರೆ. ನಮ್ಮ ಯೋಜನೆಗಳನ್ನು ಜನರಿಗೆ ತಿಳಿಸುವಂತ ಕೆಲಸ ಮಾಡುತ್ತಿರುವುದಕ್ಕೆ ಬಹಳ ಸಂತೋಷ.

ಡಿ.ಕೆ. ಶಿವಕುಮಾರ್, ಡಿಸಿಎಂ

ಇವತ್ತು ವಿರೋಧ ಪಕ್ಷ ನಾಯಕನ ಆಯ್ಕೆ ಸಾಧ್ಯತೆ

ಅಧಿವೇಶನವೂ ಆರಂಭವಾಯ್ತು. ಸದನದಲ್ಲಿ ರಾಜ್ಯಪಾಲರ ಭಾಷಣ ಮುಗಿದೋಯ್ತು. ಆದ್ರೆ, ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎಂಬ ಪ್ರಶ್ನೆ, ಪ್ರಶ್ನೆಯಾಗೇ ಉಳಿದಿದೆ. ಇವತ್ತು ಈ ಗೊಂದಲಕ್ಕೆ ಬಹುತೇಕ ತೆರೆ ಬೀಳುವ ಸಾಧ್ಯತೆ ಇದೆ. ಇವತ್ತು ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಬಿಜೆಪಿಯ ವೀಕ್ಷಕರಾದ ಮನ್ಸುಖ್ ಮಾಂಡವೀಯ ಮತ್ತು ವಿನೋದ್ ತಾವಡೆ ಆಗಮಿಸಲಿದ್ದಾರೆ. ವಿಪಕ್ಷ ನಾಯಕನ ಆಯ್ಕೆಯ ಕಸರತ್ತನ್ನು ನಡೆಸಲಿದ್ದಾರೆ. ಅಲ್ಲದೇ ಇವತ್ತು ವಿಪಕ್ಷ ನಾಯಕನ ಆಯ್ಕೆಯಾಗುತ್ತೆ ಅಂತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರದ ನಂತರ ಬಿಹಾರ ಟಾರ್ಗೆಟ್.. ಆಪರೇಷನ್​ ಕಮಲಕ್ಕೆ ಬಲಿಯಾಗುತ್ತಾ ಸಿಎಂ ನಿತೀಶ್ ಕುಮಾರ್‌​ ಸರ್ಕಾರ?

ರಾಜ್ಯ ಬಜೆಟ್ ಅಧಿವೇಶನ 2ನೇ ದಿನಕ್ಕೆ ಕಾಲಿಟ್ಟಿದೆ. ಈ ಕಲಾಪದಲ್ಲಿ ಗ್ಯಾರಂಟಿಗಳ ಗದ್ದಲ, ಕೋಲಾಹಲ ಸೃಷ್ಟಿಯಾಗೋದು ಪಕ್ಕಾ ಆಗಿದೆ. ಇದೀಗ ಕೇಸರಿ ನಾಯಕರ ಗ್ಯಾರಂಟಿ ಬಾಣಗಳನ್ನ ಸಿದ್ದರಾಮಯ್ಯ ಸರ್ಕಾರ ಹೇಗೆ ಎದುರಿಸುತ್ತೆ? ವಿಪಕ್ಷಗಳ ಅಸ್ತ್ರಗಳನ್ನ ಹೇಗೆ ಡಿಫೆಂಡ್ ಮಾಡಿಕೊಳ್ಳುತ್ತೆ ಅನ್ನೋದೇ ಸದ್ಯದ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಸದನದಲ್ಲಿ ಅಸಲಿ ಯುದ್ಧ.. CM ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗುವ ವಿರೋಧ ಪಕ್ಷದ ನಾಯಕ ಯಾರು?

https://newsfirstlive.com/wp-content/uploads/2023/07/CM_SIDDARAMAIAH-2.jpg

Load More