newsfirstkannada.com

ಈ ವರ್ಷವೂ ಕರ್ನಾಟಕ- ತಮಿಳುನಾಡು ನಡುವೆ ಕಾವೇರಿ ನೀರಿಗಾಗಿ ಫೈಟ್ ಗ್ಯಾರಂಟಿ

Share :

12-08-2023

    ಮತ್ತೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ತಮಿಳುನಾಡು ನಿರ್ಧಾರ

    ನಿತ್ಯ 15 ಸಾವಿರ ಕ್ಯೂಸೆಕ್​ ನೀರು ಬಿಡುಗಡೆಗೆ ತಮಿಳುನಾಡು ಆಗ್ರಹ

    ತಮಿಳುನಾಡಿನ ಬೇಡಿಕೆ ವಿರುದ್ಧ ಕರ್ನಾಟಕದ ವಾದ ಏನು ಗೊತ್ತಾ?

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿಗಾಗಿ ಮತ್ತೊಮ್ಮೆ ಫೈಟ್ ನಡೆಯುವ ಲಕ್ಷಣ ಕಾಣುತ್ತಿದೆ. ತಮಿಳುನಾಡಿಗೆ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಿಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಎಂ.ಕೆ.ಸ್ಟಾಲೀನ್ ಸರ್ಕಾರ ನಿರ್ಧರಿಸಿದೆ. ಮಾತ್ರವಲ್ಲ ಅಲ್ಲಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

15 ಸಾವಿರ ಕ್ಯೂಸೆಕ್ ನೀರು ಹರಿಸಲು ಬೇಡಿಕೆ..!

ಕರ್ನಾಟಕ ತಮಗೆ ಪ್ರತಿ‌ನಿತ್ಯ 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ದ ಸಭೆಯಲ್ಲಿ ಬೇಡಿಕೆ ಇಟ್ಟಿದೆ. ತಮಿಳುನಾಡಿನ ಈ ಬೇಡಿಕೆಗೆ ಕರ್ನಾಟಕ ಅಧಿಕಾರಿಗಳು ಒಪ್ಪಿಲ್ಲ. ಮಳೆ ಕೊರತೆಯ ವರ್ಷ ಇದು. ಕೇರಳದ ವೈಯನಾಡ್, ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಸೂಕ್ತ ಮಳೆಯಾಗಿಲ್ಲ. ಮಳೆ ಸಂಕಷ್ಟದ ವರ್ಷದಲ್ಲಿ ಸಂಕಷ್ಟವನ್ನು ಎರಡೂ ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳಬೇಕು. ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಮ್​ಗಳು ಭರ್ತಿಯಾಗಿಲ್ಲ. ಕರ್ನಾಟಕದ ನಗರ-ಪಟ್ಟಣಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಅಗತ್ಯ ಎಂದು ನಮ್ಮ ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಸಭೆಯು ವಿಫಲಗೊಂಡಿದೆ. ತಮಿಳುನಾಡಿಗೆ ನಿತ್ಯವೂ 15 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ. 8 ಸಾವಿರ ಕ್ಯೂಸೆಕ್ ನೀರು ಮಾತ್ರ ಬಿಡಲು ಸಾಧ್ಯ ಎಂದು ಕರ್ನಾಟಕ ಹೇಳಿದೆ. ಕರ್ನಾಟಕ ತೀರ್ಮಾನ ವಿರೋಧಿಸಿ ತಮಿಳುನಾಡು ಅಧಿಕಾರಿಗಳು ಸಭೆಯಿಂದ ಹೊರ ನಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವರ್ಷವೂ ಕರ್ನಾಟಕ- ತಮಿಳುನಾಡು ನಡುವೆ ಕಾವೇರಿ ನೀರಿಗಾಗಿ ಫೈಟ್ ಗ್ಯಾರಂಟಿ

https://newsfirstlive.com/wp-content/uploads/2023/08/SIDDU-1-1.jpg

Load More