ಜಾಸ್ತಿ ಪಂಚರ್ ಹಾಕ್ತಿದ್ದಾರೆ ಅದೂ ಹೆಚ್ಚು ದಿನಗಳು ಇರಲ್ಲ
ಸಿಎಂ ಸಿದ್ದರಾಮಯ್ಯ ಸರಣಿ ಸಭೆ ಮಾಡುತ್ತಾ ಇರೋದೇಕೆ?
ಕುಂಬಳಕಾಯಿ ಕಳ್ಳ ಅಂದರೆ.. ಹಾಗೆ ಆಯ್ತು ಇವರ ವರ್ತನೆ
ಬೆಂಗಳೂರು: ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ನಾಯಕರು ಸಾಲು, ಸಾಲು ಲಂಚದ ಆರೋಪ ಮಾಡುತ್ತಿದ್ದಾರೆ. ರಾಜಕೀಯ ವಾಕ್ಸಮರದ ಮಧ್ಯೆ ಸಿಎಂ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಹೀಗಿರುವಾಗ ಬಿಜೆಪಿ ನಾಯಕ ಸಿ.ಟಿ ರವಿ ಅವರು ರಾಜ್ಯ ಸರ್ಕಾರದ ಆಯಸ್ಸು ಹೆಚ್ಚು ದಿನ ಇಲ್ಲ. ಲೋಕಸಭಾ ಚುನಾವಣೆ ನಂತರ ಶಾಸಕರ ಒಳಬೇಗುದಿಯಿಂದಲೇ ಸರ್ಕಾರ ಪತನ ಆಗುತ್ತೆ ಎಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿ.ಟಿ ರವಿ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರ ಲೋಕಸಭಾ ಚುನಾವಣೆ ನಂತರ ಪತನ ಆಗೋದು ಗ್ಯಾರಂಟಿ. ಅಲ್ಲಿಯವರೆಗೆ ತೇಪೆ ಹಚ್ಚುತ್ತಾರೆ. ಜಾಸ್ತಿ ಪಂಚರ್ ಹಾಕ್ತಿದ್ದಾರೆ ಅದೂ ಕಷ್ಟ. ಲೋಕಸಭಾ ಚುನಾವಣೆ ತನಕ ಮ್ಯಾನೇಜ್ ಮಾಡುತ್ತಾರೆ ಅಷ್ಟೇ. ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರು ಬರೆದ ಪತ್ರ ನಕಲಿ ಅಂತಾ ಹೇಳಿದ್ರು. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಿಎಂ ಸಿದ್ದರಾಮಯ್ಯ ಸರಣಿ ಸಭೆ ಮಾಡುತ್ತಿದ್ದಾರೆ. ಇದನ್ನು ನೋಡಿದ್ರೆನೇ ಗೊತ್ತಾಗುತ್ತೆ ಶಾಸಕರು ಬರೆದಿರುವ ಪತ್ರ ನಕಲಿ ಅಲ್ಲ ಅಸಲಿ ಅಂತಾ. ಈ ರೀತಿಯ ಅಸಮಾಧಾನ ನೋಡಿದ್ರೆ ಪಾರ್ಲಿಮೆಂಟ್ ಚುನಾವಣೆ ತನಕ ಈ ಸರ್ಕಾರ ಉಳಿಯುತ್ತಾ? ಎಂದು ಸಿ.ಟಿ ರವಿ ಅವರು ಪ್ರಶ್ನಿಸಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ನೀಡಿರುವ ದೂರಿನ ಪತ್ರವೂ ನಕಲಿ ಎನ್ನುತ್ತಾರೆ. ಇದರ ಹಿಂದೆ ಬಿಜೆಪಿ ಹಾಗೂ ಕುಮಾರಸ್ವಾಮಿ ಕೈವಾಡ ಇರಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಇಲ್ಲೇ ಅವರು ಎಡವಿದ್ದು. ನಕಲಿ ಅಂತಾ ಯಾರು ಹೇಳಬೇಕು. ಅವರು ತನಿಖೆ ಮಾಡಿ ಹೇಳಬೇಕು. ತನಿಖೆ ವರದಿ ಬಂದ ಮೇಲೆ ಹೇಳಿದ್ರೆ ಸರಿ. ಅದಕ್ಕಿಂತ ಮೊದಲೇ ಹೇಳಿದ್ರೆ.. ಏನ್ ಅರ್ಥ..? ರಾಜ್ಯಪಾಲರು ವರದಿ ಕೊಡಲು ಹೇಳಿದ್ರು. ಕುಂಬಳಕಾಯಿ ಕಳ್ಳ ಅಂದರೆ ಏದೇನೋ ಗಾದೆ ಇದೆಯಲ್ಲ. ಹಾಗೆ ಆಯ್ತು ಇವರ ವರ್ತನೆ. ಇಷ್ಟೊಂದು ಅರ್ಜೆಂಟ್ ಯಾಕೆ ಎಂದು ಸಿಎಂ ಸಿದ್ದರಾಮಯ್ಯಗೆ ಸಿ.ಟಿ ರವಿ ಅವರು ತಿರುಗೇಟು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ