newsfirstkannada.com

ಏಕಾಏಕಿ ಸಂಗೀತಾ ವಿರುದ್ಧ ಸಿಡಿದ್ದೆದ್ದ ಕಾರ್ತಿಕ್​​; ಇವರಿಬ್ಬರ ಮಧ್ಯೆ ಕಿರಿಕ್ ಆಗಿದ್ದು ಯಾಕೆ?

Share :

11-11-2023

  ಪದೇ ಪದೇ ಬಿಗ್​ಬಾಸ್​​ ಮನೆಯಲ್ಲಿ ಸಂಗೀತಾ ಜೊತೆ ಕಾರ್ತಿಕ್ ಕಿರಿಕ್‌

  ಬಿಗ್​ಬಾಸ್​ ಸ್ಪರ್ಧಿ ಸಂಗೀತಾ ಮಾತಿಗೆ ಕಾರ್ತಿಕ್​ ಕೋಪಗೊಳ್ಳುವುದೇಕೆ?

  ನೋಡ ನೋಡುತ್ತಿದ್ದಂತೆ ಕೈಯಲ್ಲಿದ್ದ ಬಜ್ಜಿ ಎಸೆದ ಕಾರ್ತಿಕ್​ ಮಹೇಶ್​

ಬಿಗ್​ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ಜಗಳ ವಾರದಿಂದ ವಾರಕ್ಕೆ ಜೋರಾಗುತ್ತಿದೆ. ಇದರಿಂದ ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳ ನಿಜವಾದ ಬಣ್ಣ ಒಂದೊಂದಾಗಿಯೇ ಆಚೆ ಬರುತ್ತಿದೆ. ಬಿಗ್​​ಬಾಸ್​​ ಶುರುವಾದ್ದಾಗಿನಿಂದ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ​ಏನೋ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಅದೇ ರೀತಿ ​ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಪ್ರೀತಿ ಇದೆ ಎಂಬ ಫೋಟೋಗಳು ಸಹ ವೈರಲ್​ ಆಗಿತ್ತು.

ಆದರೆ ದಿನ ಕಳೆದಂತೆ ಸಂಗೀತಾ ಹಾಗೂ ಕಾರ್ತಿಕ್​ ಮಧ್ಯೆ ಕಿರಿಕ್‌, ಗಲಾಟೆ ನಡೆಯುತ್ತಲೇ ಇದೆ. ಇದೀಗ ಮತ್ತೆ ಕಾರ್ತಿಕ್​ ಹಾಗೂ ಸಂಗೀತಾ ನಡುವೆ ಮತ್ತೆ ಮನಸ್ತಾಪ ಉಂಟಾಗಿದೆ. ಬಿಗ್​ಬಾಸ್​ ಮನೆ ಮಂದಿಗೆ ಚಟುವಟಿಕೆ ಒಂದನ್ನು ನೀಡಿದ್ದರು. ಇದೇ ವೇಳೆ ಕಾರ್ತಿಕ್​ ಹಾಗೂ ಸಂಗೀತಾ ನಡುವೆ ಮತ್ತೆ ಮನಸ್ತಾಪ ಉಂಟಾಗಿದೆ. ಕಾರ್ತಿಕ್​​ ಹಾಗೂ ನೀತು ಬಜ್ಜಿ ಮಾಡುತ್ತಾ ಇರುತ್ತಾರೆ. ಇದೇ ವೇಳೆ ಬಜ್ಜಿ ಮಾಡುತ್ತಿದ್ದ ಜಾಗದಲ್ಲಿ ನಮ್ರತಾ ಹಾಗೂ ಸಂಗೀತಾ ನಿಂತು ಕೊಂಡಿರುತ್ತಾರೆ. ಆಗ ಕಾರ್ತಿಕ್​ ಜಾಗ ಬಿಡಿ ಎಂದು ಜೋರಾಗಿ ಕೂಗುತ್ತಾರೆ. ಆ ಸೌಂಡ್ ಕೇಳಿ ಕೊಂಡ ಕೂಡಲೇ ಸಂಗೀತಾ ಅಲ್ಲಿಂದ ಹೊರಟು ಹೋಗಿ ಬೇರೆ ಕಡೆ ಕುಳಿತುಕೊಳ್ಳುತ್ತಾರೆ.

ಸಂಗೀತಾ ಕುಳಿತುಕೊಂಡ ಜಾಗಕ್ಕೆ ಕಾರ್ತಿಕ್​ ಬಂದು ಮಾತಾಡಿಸುತ್ತಾರೆ. ಆಗ ಬೇಸರದಿಂದ ಸಂಗೀತಾ ನಾನು ಒಂದು ಕಂಟೆಂಟ್ ಕೊಡುವುದಕ್ಕೆ ಅಲ್ಲಿಗೆ ಬಂದಿದ್ದೆ. ಆದರೆ ನೀವು ಅಲ್ಲಿಂದ ಹೋಗಿ ಅಂತಾ ಹೇಳಿದ್ದು ನನಗೆ ಬೇಸರ ಆಯ್ತು ಅಂತಾರೆ. ಆಗ ಕಾರ್ತಿಕ್​ ನಾನು ನಿನಗೆ ಹೇಳಲಿಲ್ಲ ಎಂದು ಅನ್ನುತ್ತಲೇ ಕೈಯಲ್ಲಿದ್ದ ಜಜ್ಜಿಯನ್ನು ಜೋರಾಗಿ ಎಸೆದು ಹೋಗುತ್ತಾರೆ. ಇದನ್ನು ನೋಡದ ಉಳಿದ ಸ್ಪರ್ಧಿಗಳು ಶಾಕ್​​ನಲ್ಲಿ ನಿಂತು ನೋಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಏಕಾಏಕಿ ಸಂಗೀತಾ ವಿರುದ್ಧ ಸಿಡಿದ್ದೆದ್ದ ಕಾರ್ತಿಕ್​​; ಇವರಿಬ್ಬರ ಮಧ್ಯೆ ಕಿರಿಕ್ ಆಗಿದ್ದು ಯಾಕೆ?

https://newsfirstlive.com/wp-content/uploads/2023/11/bigg-boss-2023-11-11T093009.038.jpg

Load More