newsfirstkannada.com

BIGG BOSS: ಜಡೆ ಜಗಳದಲ್ಲಿ ತಲೆ ಬೋಳಿಸಿಕೊಳ್ಳೋ ಪರಿಸ್ಥಿತಿ.. ಸಂಗೀತಾ, ತನಿಷಾ ಕಿತ್ತಾಟದಲ್ಲಿ ಕಾರ್ತಿಕ್‌ ಲಾಕ್‌!

Share :

21-11-2023

  ತನಿಷಾಗೆ ನೀನು ಬಾಯ್ ಮುಚ್ಕೊಂಡು ಇರಬೇಕು ಎಂದ ನಮ್ರತಾ

  ಎದುರಾಳಿ ತಂಡಕ್ಕೆ ಒಂದಾದ ಮೇಲೊಂದರಂತೆ ಸವಾಲುಗಳು

  ಕಾರ್ತಿಕ್ ಹಾಗೂ ತುಕಾಲಿ ಸಂತೂ ತಲೆ ಬೋಳಿಸಿಕೊಳ್ಳೋಕೆ ರೆಡಿ

ಬಿಗ್‌ಬಾಸ್ ಸೀಸನ್‌ 10ರ ಸ್ಪರ್ಧಿಗಳ ಮಧ್ಯೆ ನಡೆಯುತ್ತಿರುವ ಜಿದ್ದಾಜಿದ್ದಿನ ಫೈಟ್ ಮತ್ತೊಂದು ಹಂತಕ್ಕೆ ಹೋಗಿದೆ. ಟಾಸ್ಕಿಗಾಗಿ, ತಂಡಕ್ಕಾಗಿ ಸ್ಪರ್ಧಿಗಳು ಏನು ಬೇಕಾದ್ರೂ ಮಾಡ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. 7ನೇ ವಾರದ ಭರ್ಜರಿ ಟಾಸ್ಕ್‌ನಲ್ಲಿ ಜಡೆ ಜಗಳ ತಾರಕಕ್ಕೇರಿದ್ದು, ಈ ಕಿತ್ತಾಟದಲ್ಲಿ ಕಾರ್ತಿಕ್ ಹಾಗೂ ತುಕಾಲಿ ಸಂತೂ ತಲೆ ಬೋಳಿಸಿಕೊಳ್ಳುವಂತ ಪರಿಸ್ಥಿತಿ ಕ್ರಿಯೇಟ್ ಆಗಿದೆ.

ಬಿಗ್‌ಬಾಸ್‌ನಲ್ಲಿ ನಡೆಯುತ್ತಿರೋ ಟಾಸ್ಕ್ನಲ್ಲಿ ಟೀಮ್ ಸಂಪತ್ತಿಗೆ ಸವಾಲ್, ಗಜಕೇಸರಿ ತಂಡದ ಮಧ್ಯೆ ಬಿಗ್ ಫೈಟ್ ನಡೀತಿದೆ. ಟಾಸ್ಕ್‌ನಲ್ಲಿ ಪ್ರತಿ ತಂಡ ತಮ್ಮ ಎದುರಾಳಿ ತಂಡಕ್ಕೆ ಒಂದಾದ ಮೇಲೊಂದರಂತೆ ಸವಾಲುಗಳನ್ನು ನೀಡಬೇಕು ಅನ್ನೋ ಆಟ ಶುರುವಾಗುತ್ತೆ.

ಟಾಸ್ಕ್‌ನಲ್ಲಿ ಎದುರಾಳಿ ತಂಡಕ್ಕೆ ಸವಾಲು ಹಾಕಿದ ಸಂಗೀತ, ತುಕಾಲಿ ಸಂತೋಷ್, ಕಾರ್ತಿಕ್ ಅವರು ತಮ್ಮ ತಲೆಯನ್ನು ಫುಲ್ ಶೇವ್ ಮಾಡಬೇಕು ಎಂದಿದ್ದಾರೆ. ಇದು ಸಂಪತ್ತಿಗೆ ಸವಾಲ್ ತಂಡದ ಕೋಪಕ್ಕೆ ಗುರಿಯಾಗುತ್ತೆ.
ಸಂಗೀತಾ ಹಾಕಿದ ತಲೆ ಬೋಳಿಸೋ ಸವಾಲಿಗೆ ಸಂಪತ್ತಿಗೆ ಸವಾಲ್ ತಂಡ ತನಿಷಾ ಕೆಂಡಾಮಂಡಲರಾಗಿದ್ದಾರೆ. ಇಬ್ಬರ ಬದಲು ಒಬ್ಬರನ್ನು ಅಟ್‌ಲೀಸ್ಟ್‌ ಕನ್ಸಿಡರ್ ಮಾಡಬಹುದಲ್ಲಾ ಎಂದು ಕೇಳಿದ್ದಾರೆ. ಇದಕ್ಕೆ ಮತ್ತೆ ಕೆರಳಿದ ಸಂಗೀತಾ ಈಗ ಬಂದು ಸಡನ್ ಆಗಿ ಬಂದು ನೀವು ಏನೋನು ಮಾತಾಡಿದ್ರೆ ಆಗಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್ ಜೊತೆಗೆ ಜಡೆ ಜಗಳ ಜೋರಾಗಿದ್ದು, ಇಷ್ಟ ಬಂದ ಹಾಗೆಲ್ಲಾ ನೀನು ಮಾತಾಡಬೇಡ. ಬಾಯ್ ಇದೆ ಅಂತ ಮಾತಾಡೋದಲ್ಲ ನೀನು ಬಾಯ್ ಮುಚ್ಕೊಂಡು ಇರಬೇಕು ಎಂದು ನಮ್ರತಾ, ತನಿಷಾಗೆ ಆವಾಜ್ ಹಾಕಿದ್ದಾರೆ. ನಮ್ರತಾ ಮಾತಿಗೆ ಕೆರಳಿದ ತನಿಷಾ ಬಾಯಿ ಮುಚ್ಚೋಕೆ ಆಗಲ್ಲ. ನೀನೇ ಕಿವಿ ಮುಚ್ಚಿಕೊ ಎಂದು ತಿರುಗೇಟು ಕೊಟ್ಟಿದ್ದಾರೆ.

ಕೊನೆಗೆ ಟಾಸ್ಕ್‌ಗಾಗಿ ಎದುರಾಳಿ ತಂಡದ ಸವಾಲು ಸ್ವೀಕರಿಸಿರೋ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಅವರು ತಲೆ ಬೋಳಿಸಿಕೊಳ್ಳೋಕೆ ರೆಡಿಯಾಗಿದ್ದಾರೆ. ತಲೆ ಬೋಳಿಸಿಕೊಂಡ ಮೇಲೆ ಟಾಸ್ಕ್‌ನಲ್ಲಿ ಏನಾಗುತ್ತೆ ಅನ್ನೋದು ಇವತ್ತಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಜಡೆ ಜಗಳದಲ್ಲಿ ತಲೆ ಬೋಳಿಸಿಕೊಳ್ಳೋ ಪರಿಸ್ಥಿತಿ.. ಸಂಗೀತಾ, ತನಿಷಾ ಕಿತ್ತಾಟದಲ್ಲಿ ಕಾರ್ತಿಕ್‌ ಲಾಕ್‌!

https://newsfirstlive.com/wp-content/uploads/2023/11/Bigg-Boss-kannada-9.jpg

Load More