newsfirstkannada.com

ನನ್ನ ಕ್ಲೋಸ್​ ಫ್ರೆಂಡ್​​ ಅನ್ನು ಮಾತ್ರ ರೇಗಿಸುತ್ತೇನೆ.. ಕಾರ್ತಿಕ್​​​ ತನಿಶಾ ಬಳಿ ಸಂಗೀತಾ ಬಗ್ಗೆ ಹೇಳಿದ್ದೇನು..?

Share :

30-10-2023

    ದಿನ ಕಳೆಯುತ್ತಿದ್ದಂತೆ ಬಿಗ್ ಮನೆಯಲ್ಲಿ ಹೊಸ ವಿಚಾರಗಳು ಬಯಲಿಗೆ

    ಗಟ್ಟಿಯಾಗಿದ್ದ ಸಂಗೀತಾ ಹಾಗೂ ಕಾರ್ತಿಕ್ ಸ್ನೇಹದ ಮಧ್ಯೆ ಏನಾಯ್ತು?

    ತನಿಶಾ ಬಳಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಕಾರ್ತಿಕ್!

ಕನ್ನಡದ ಬಿಗ್​​ ರಿಯಾಲಿಟಿ ಶೋಗೆ 777 ಚಾರ್ಲಿ ಸಿನಿಮಾದ ನಾಯಕಿ ಸಂಗೀತಾ ಶೃಂಗೇರಿ ಅವರು ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ಇನ್ನೂ ಬಿಗ್​ಬಾಸ್​​ ಮನೆಯಲ್ಲಿ ಸಂಗೀತಾ ಶೃಂಗೇರಿ ಅವರಿಗೆ ಕಾರ್ತಿಕ್ ಅವರು ಒಳ್ಳೆಯ ಸ್ನೇಹಿತರಾಗಿದ್ದರು.

ಇನ್ನೂ ಬಿಗ್​​​ಬಾಸ್​ ಮನೆಯೊಳಗೆ ಸಂಗೀತಾ, ಕಾರ್ತಿಕ್ ಸ್ನೇಹ ಬಾಂಧವ್ಯ ದಿನೇ ದಿನೇ ಹೆಚ್ಚಾಗುತ್ತಿತ್ತು. ಆದರೆ ದಿನ ಕಳೆದಂತೆ ಈ ಕಡೆ ಕಾರ್ತಿಕ್ ಹಾಗೂ ಸಂಗೀತಾ ಅವರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಮೊನ್ನೆ ಮೊನ್ನೆಯ ಎಪಿಸೋಡ್​​ನಲ್ಲಿ  ಹುಡುಗಿಱರಾದ್ರು ಗುಂಪುಗಳ ನಾಯಕಿರಾಗಲಿ ಅಂತ ಬಿಗ್​ಬಾಸ್​ ಹೇಳಿದ್ದರು. ಅದೇ ರೀತಿ ಎರಡು ಗುಂಪಿಗೂ ತನಿಷಾ ಹಾಗೂ ನಮ್ರತಾ ನಾಯಕತ್ವ ವಹಿಸಿಕೊಂಡಿದ್ದರು. ಈ ಗುಂಪುಗಳಿಗೆ ಯಾರು ನಾಯಕತ್ವ ವಹಿಸಬೇಕು ಎಂದು ಮನೆಯವರು ನಿರ್ಧರಿಸುವಾಗ ಎಲ್ಲರು ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಕಾರ್ತಿಕ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕಾರ್ತಿಕ್ ಸಂಗೀತಾ ಅವರ ಹೆಸರನ್ನು ಕ್ಯಾಪ್ಟನ್ ಆಗೋಕೆ ತಗೋಳಿಲ್ಲ ಅನ್ನೋದು ಸಂಗೀತಾಗೆ ಬೇಸರ ವ್ಯಕ್ತಪಡೆಸಿದ್ದರು. ಹಾಗಾಗಿ ಸಂಗೀತಾ ಕಾರ್ತಿಕ್ ಅವರ ಹತ್ತಿರ ನೀವ್ಯಾಕೆ ನನ್ನ ಹೆಸರು ತಗೋಳಿಲ್ಲ. ನಮ್ರತಾ ಅವರದ್ದು ತಗೋಳೋಕೆ ಕಾರಣವೇನು ಅಂತ ಪ್ರಶ್ನಿಸಿದ್ದರು. ಬಳಿಕ ಎಲ್ಲರು ಇಲ್ಲಿ ಫೇಕ್, ನೀವು ಫೇಕ್​​ ಅಂತಾ ಕಾರ್ತಿಕ್​​ಗೆ ಹೇಳಿದ್ದಾರೆ. ಈ ಮಾತನ್ನು ಕೇಳುತ್ತಿದ್ದಂತೆ ಕಾರ್ತಿಕ್​​​ ಬೇಸರಗೊಂಡು ಅಲ್ಲಿಂದ ಹೊರಟು ಹೋಗಿದ್ದರು. ಅಂದಿನಿಂದ ಇಂದಿನವರೆಗೂ ಸಂಗೀತಾ, ಕಾರ್ತಿಕ್ ಅಷ್ಟಾಗಿ ಮಾತಾಡುತ್ತಿರಲಿಲ್ಲ.

ಆದರೆ ಇಂದು ಕಾರ್ತಿಕ್ ಅವರು ತನಿಶಾ ಬಳಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ನಾನು ಒಂದು ಸಾರಿ ಕ್ಲೋಸ್ ಆದ್ರೆ ಮತ್ತೆ ಬಿಟ್ಟು ಕೊಡುವುದಿಲ್ಲ. ಮತ್ತೆ ನನಗೆ ಹತ್ತಿರವಾದ ಫ್ರೆಂಡ್ಸ್​ ಬಳಿ​ ಮಾತ್ರ ಆ ರೀತಿ ರೇಗಿಸುತ್ತೇನೆ. ಆದರೆ ಸಂಗೀತಾ ನನಗೆ ಫೇಕ್ ಅಂತಾ ಹೇಳಿದ್ದು ನನಗೆ ಸಖತ್​ ಬೇಸರ ಆಯ್ತು ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಕ್ಲೋಸ್​ ಫ್ರೆಂಡ್​​ ಅನ್ನು ಮಾತ್ರ ರೇಗಿಸುತ್ತೇನೆ.. ಕಾರ್ತಿಕ್​​​ ತನಿಶಾ ಬಳಿ ಸಂಗೀತಾ ಬಗ್ಗೆ ಹೇಳಿದ್ದೇನು..?

https://newsfirstlive.com/wp-content/uploads/2023/10/bigg-boss-6-2.jpg

Load More