ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಮತ್ತೊಂದು ಮೆಗಾ ಟ್ವಿಸ್ಟ್
ಅದ್ಭುತ ಅವಕಾಶಕ್ಕೆ ಮನೆಯ ಸ್ಪರ್ಧಿಗಳಲ್ಲಿ ಪೈಪೋಟಿ ಶುರು
ಡ್ರೋನ್ ಪ್ರತಾಪ್ ಕಣ್ಣೀರಿಗೆ ಕರಗದ ಕಾರ್ತಿಕ್ ಖಡಕ್ ಸವಾಲು
ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಎಮೋಷನಲ್ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್ ಆಸೆಯನ್ನ ಕೆಲವರು ಬೆಂಬಲಿಸಿದ್ರೆ ಇಬ್ಬರು ಸ್ಪರ್ಧಿಗಳು ಮಾತ್ರ ಸೆಡ್ಡು ಹೊಡೆಯುವ ಸವಾಲು ಹಾಕಿದ್ದಾರೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್, ತನಿಷಾ, ಕಾರ್ತಿಕ್ ಮಧ್ಯೆ ಅಸಲಿ ಫೈಟ್ ಶುರುವಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಕಡಿಮೆ ಆಯ್ತು ಅಂದುಕೊಳ್ತಿದ್ದಂತೆ ಮನೆಯ ಸದಸ್ಯರಿಗೆ ಮತ್ತೊಂದು ಭಾವನಾತ್ಮಕ ಟಾಸ್ಕ್ ಕೊಡಲಾಗಿದೆ. ಅದು ಏನಂದ್ರೆ ಮನೆಯ ಮೂವರು ಸದಸ್ಯರಿಗೆ ಮಾತ್ರ ತಮ್ಮ ಮನೆಯಿಂದ ಬಂದಿರುವ ಪತ್ರಗಳನ್ನು ಪಡೆಯೋದು. ಈ ಒಂದು ಅದ್ಭುತ ಅವಕಾಶಕ್ಕೆ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಲ್ಲಿ ಪೈಪೋಟಿ ಶುರುವಾಗಿದೆ.
ದೀಪಾವಳಿ ಹಬ್ಬದಲ್ಲಿ ಮನೆಯಿಂದ ಬಿಗ್‌ಬಾಸ್ ಸ್ಪರ್ಧಿಗಳಿಗೆ ಊಟ ತರಿಸಲಾಗಿತ್ತು. ಆದರೆ ಎಲ್ಲರಿಗೂ ಊಟ ಬಂತು. ಆದರೆ ನನಗೆ ರೆಡಿಮೇಡ್ ಸ್ವೀಟ್ ಬಂದಿದೆ. ನನ್ನ ಅಮ್ಮ ಏನು ಮಾಡಿಕೊಟ್ಟಿಲ್ಲ. ನನಗೆ ಅಮ್ಮ ಹೇಗಿದ್ದಾರೆ ಅನ್ನೋದು ಗೊತ್ತಾಗಬೇಕು ಎಂದು ತನಿಷಾ ಕಣ್ಣೀರಿಟ್ಟು ಕೇಳಿಕೊಂಡಿದ್ದಾರೆ.
ಇನ್ನು, ಡ್ರೋನ್ ಪ್ರತಾಪ್ ಮೇಲೆ ಬಿಗ್‌ಬಾಸ್ ಮನೆಯ ಹಲವು ಸದಸ್ಯರು ಅನುಕಂಪ ತೋರಿದ್ದಾರೆ. ಮೊದಲು ಡ್ರೋನ್ ಪ್ರತಾಪ್‌ಗೆ ಅವಕಾಶ ಕೊಡೋಣ ಅಂತ ನಮ್ರತಾ ಹೇಳಿದ್ದಾರೆ. ಯಾಕಂದ್ರೆ ಕಳೆದ ಮೂರು ವರ್ಷದಿಂದ ಡ್ರೋನ್ ಪ್ರತಾಪ್ ಅವರು ಮನೆಯವರ ಜೊತೆ ಮಾತಾಡಿಲ್ಲ ಎಂದಿದ್ದಾರೆ. ಇದಕ್ಕೆ ಒಪ್ಪದ ಕಾರ್ತಿಕ್ ಅವರು ಪ್ರತಾಪ್‌ಗೆ ಮೂರು ವರ್ಷದಿಂದ ಮನೆಯವರಿಂದ ದೂರವಿದ್ದು ಅಭ್ಯಾಸವಿದೆ. ಆದರೆ ನನಗೆ ಅಭ್ಯಾಸ ಇಲ್ಲ ನನಗೆ ಈ ಅವಕಾಶ ಫಸ್ಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕೊನೆಗೆ ನನಗೆ ನಮ್ಮ ಅಪ್ಪ, ಅಮ್ಮನ ಜೊತೆ ಮಾತಾಡಬೇಕು ಎಂದು ಡ್ರೋನ್ ಪ್ರತಾಪ್ ಅವರು ಕಣ್ಣೀರಿಟ್ಟಿದ್ದಾರೆ. ನನಗೆ ಗೊತ್ತಾಗಬೇಕು ಅವರು ನನ್ನ ಜೊತೆ ಮಾತಾಡುತ್ತಾರಾ ಇಲ್ವಾ ಅಂತ. ನಮ್ಮ ಅಪ್ಪ, ಅಮ್ಮನ ನೋಡಬೇಕು ಎಂದು ಡ್ರೋನ್ ಪ್ರತಾಪ್ ಕಣ್ಣೀರಿಟ್ಟಿದ್ದು ಮನೆಯ ಸದಸ್ಯರು ಸಮಾಧಾನ ಪಡಿಸೋ ಪ್ರಯತ್ನದಲ್ಲಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮೂವರಿಗೆ ಮನೆಯವರ ಪತ್ರ ಪಡೆಯೋ ಅವಕಾಶವಿದ್ದು, ಡ್ರೋನ್ ಪ್ರತಾಪ್, ತನಿಷಾ, ಕಾರ್ತಿಕ್ ಮಧ್ಯೆ ಯಾರಿಗೆ ಅವಕಾಶ ಸಿಗಲಿದೆ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ