ಕಳೆದ 7 ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ಕನ್ನಡಿಗ
ಮಹಾರಾಜ ಟ್ರೋಫಿಯಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್
ಕೊನೆಗೂ ಟೀಮ್ ಇಂಡಿಯಾದ ಬಾಗಿಲು ತಟ್ಟಿದ್ದ ಕನ್ನಡಿಗ ಕರುಣ್ ನಾಯರ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಈತ. ಎಲ್ಲರೂ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆದರೆ, ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರ ಮಾತ್ರ ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಭಾರತದ ಪರ ತ್ರಿಶತಕ ಬಾರಿಸಿ ಸಂಚಲನ ಮೂಡಿಸಿದ್ದರು. ಈ ಆಟಗಾರ ಕೆಲವೇ ತಿಂಗಳಲ್ಲಿ ಟೀಮ್ ಇಂಡಿಯಾದಿಂದ ಕಣ್ಮರೆಯಾದರು. ಅಂದಿನಿಂದಲ್ಲೂ ಇಂದಿನವರೆಗೂ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಕಾಯುತ್ತಿದ್ದಾರೆ. ಇಷ್ಟು ದಿನದಿಂದ ಕಾಯುತ್ತಿದ್ದ ಕನ್ನಡಿಗ ಕರುಣ್ ನಾಯರ್ ಈಗ ಬಿಸಿಸಿಐ ಬಾಗಿಲು ತಟ್ಟಿದ್ದಾರೆ.
ಮಹಾರಾಜ ಟ್ರೋಫಿಯಲ್ಲಿ ದಾಖಲೆ
ಕಳೆದ 7 ವರ್ಷಗಳಿಂದ ಟೀಮ್ ಇಂಡಿಯಾದಿಂದ ಕರುಣ್ ನಾಯರ್ ದೂರ ಉಳಿದಿದ್ರು. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ್ರೂ ಇವರ ಮೇಲೆ ಬಿಸಿಸಿಐ ಒಂದು ಕಣ್ಣು ಇಡಲಿಲ್ಲ. ಈಗ ಭರ್ಜರಿ ಕಮ್ಬ್ಯಾಕ್ ಮಾಡಿರೋ ಕರುಣ್ ನಾಯರ್ 2024ರ ಮಹಾರಾಜ ಟಿ20 ಟ್ರೋಫಿಯಲ್ಲಿ ಘರ್ಜಿಸಿ ಶತಕ ಸಿಡಿಸಿದ್ದಾರೆ. ಕೇವಲ 48 ಎಸೆತಗಳಲ್ಲಿ 13 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 124 ರನ್ ಗಳಿಸಿ ಬಿರುಸಿನ ಬ್ಯಾಟಿಂಗ್ ಮಾಡಿದ್ದಾರೆ.
ಕರುಣ್ ನಾಯರ್ ಕಳೆದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 66 ರನ್ ಗಳಿಸಿದ್ದರು. ಇನ್ನೇನು 2025ರ ಐಪಿಎಲ್ಗಾಗಿ ತಯಾರಿ ನಡೆಯುತ್ತಿರೋ ಹೊತ್ತಲ್ಲೇ ಕರುಣ್ ನಾಯರ್ ಕಮ್ಬ್ಯಾಕ್ ಮಾಡಿದ್ದಾರೆ. ಹೀಗೆ ಕರುಣ್ ನಾಯರ್ ತನ್ನ ಆಟ ಮುಂದುವರಿಸಿದರೆ ಐಪಿಎಲ್ ತಂಡಗಳು 2025ರ ಮೆಗಾ ಆಕ್ಷನ್ನಲ್ಲಿ ಖರೀದಿಸಲು ಮುಗಿಬೀಳಲಿವೆ.
ಇದನ್ನೂ ಓದಿ: 6,6,6,6,6,6,6,6,4,4,4,4,4,4,4,4,4,4,4,4,4,4,4,4,4; ಸ್ಫೋಟಕ ದ್ವಿಶತಕ ಸಿಡಿಸಿದ ಟೀಮ್ ಇಂಡಿಯಾ ಬ್ಯಾಟರ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ