newsfirstkannada.com

Breaking: ಕೆಎಎಸ್ ಪ್ರಿಲಿಮ್ಸ್​ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಮರು ಪರೀಕ್ಷೆ ನಡೆಯುತ್ತಾ..?

Share :

Published August 27, 2024 at 1:44pm

    ಗೊಂದಲದ ನಡುವೆ KAS ಪ್ರಿಲಿಮ್ಸ್ ಪರೀಕ್ಷೆ ನಡೆಸಿದ್ದ ಸರ್ಕಾರ

    KAS ಪ್ರಿಲಿಮ್ಸ್ ಪರೀಕ್ಷೆಯ ದಿನಾಂಕ ಮುಂದೂಡಲು ಆಗ್ರಹ ಇತ್ತು

    ಬಳ್ಳಾರಿ, ಬಾಗಲಕೋಟೆಯಲ್ಲಿ ಸೋರಿಕೆ ಆಗಿರುವ ಬಗ್ಗೆ ಆರೋಪ

ಬಳ್ಳಾರಿ: ಗೊಂದಲ, ಪ್ರತಿಭಟನೆಗಳ ಮಧ್ಯೆ ಕೆಎಎಸ್ (ಕರ್ನಾಟಕ ಆಡಳಿತ ಸೇವೆ) ಪ್ರಿಲಿಮ್ಸ್ ಪರೀಕ್ಷೆ ಇಂದು ನಡೆಯುತ್ತಿದೆ. ಈ ಮಧ್ಯೆ ಬಳ್ಳಾರಿ, ಬಾಗಲಕೋಟೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಆರೋಪ ಕೇಳಿಬಂದಿದೆ.

ಬಳ್ಳಾರಿಯ ಪರೀಕ್ಷಾ ಸೆಂಟರ್​ನಲ್ಲಿ ಪ್ರಶ್ನೆ ಪತ್ರಿಕೆ ಸೀಲಿಂಗ್ ಓಪನ್ ಇದೆ ಎಂದು ಪರೀಕ್ಷಾ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಪತ್ರಿಕೆ-1 ಪರೀಕ್ಷೆಯು ಬೆಳಗ್ಗೆ 10 ರಿಂದ 12 ಗಂಟೆವರೆಗೆ ನಡೆದಿತ್ತು. ಮೊದಲ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಅಭ್ಯರ್ಥಿಗಳು ಆರೋಪ ಮಾಡ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಫೋನ್​ ಕಾಲ್​ನ ಸಂಭಾಷಣೆಯೊಂದು ವೈರಲ್ ಆಗಿದೆ.

ವೈರಲ್ ಆಗಿರೋ ಆಡಿಯೋದಲ್ಲಿ ಏನಿದೆ..?
ಪರೀಕ್ಷಾರ್ಥಿ ಎನ್ನಲಾಗುತ್ತಿರುವ ಆಡಿಯೋದಲ್ಲಿ.. ಪ್ರಶ್ನೆ ಪತ್ರಿಕೆ ಈಗಾಗಲೇ ಓಪನ್ ಆಗಿ ಬಂದಿದೆ. ನಾನು ಬಳ್ಳಾರಿ ಸೆಂಟ್ ಜಾನ್ ಹೈಸ್ಕೂಲ್​​ನ 18 ರೂಮ್​​ನಲ್ಲಿ ಪರೀಕ್ಷೆ ಬರೆಯಲು ಹೋಗಿದ್ದೆ. ಇದಕ್ಕೆ ಕೆಲವು ಹುಡುಗರು ವಿರೋಧ ವ್ಯಕ್ತಪಡಿಸ್ತಿದ್ದಾರೆ ಅನ್ನೋದನ್ನು ಕೇಳಬಹುದಾಗಿದೆ.

ಆರೋಪ ಏನು..?
ಬಳ್ಳಾರಿ ಮತ್ತು ಬಾಗಲಕೋಟೆಯಲ್ಲಿ ಪರೀಕ್ಷೆ ಆರಂಭಕ್ಕೂ ಮೊದಲೇ ಸೀಲ್ ಓಪನ್ ಆಗಿದೆ. ಬಳ್ಳಾರಿ, ಬಾಗಲಕೋಟೆ ಮಾತ್ರವಲ್ಲ ಅನೇಕ ಕಡೆ ಸೀಲ್ ಓಪನ್ ಆಗಿದೆ. ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುತ್ತಿರೋರಿಗೆ ಅನ್ಯಾಯ ಆಗುತ್ತಿದೆ. ಈ ಕೂಡಲೇ ಕೆಎಎಸ್ ಪರೀಕ್ಷೆಯನ್ನು ಮರುಪರೀಕ್ಷೆ ಮಾಡಬೇಕು. ಯಾಕೆಂದರೆ ಒಂದೂವರೆ ತಿಂಗಳು ಮೊದಲೇ ಪ್ರಶ್ನೆ ಪತ್ರಿಕೆಯನ್ನು ರೆಡಿಮಾಡಿ ಕೂತ್ಕೊಂಡು, ಎಕ್ಸಾಂ ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆಯ ಸೀಲ್ ಓಪನ್ ಆಗಿದೆ ಎಂದರೆ ಲೀಕ್ ಆಗಿದೆ ಎಂದರ್ಥ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಕಾಂತ್ ಕುಮಾರ್ ಆರೋಪಿಸಿದ್ದಾರೆ.

2023-24ನೇ ಸಾಲಿನ 40 ಕೆಎಎಸ್‌ ಹುದ್ದೆ, ಒಟ್ಟು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ನಡೆಸುತ್ತಿದೆ. ಒಟ್ಟು 564 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಬರೆಯಲು ಒಟ್ಟು 2,10,910 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೇಮಕಾತಿಗೆ ಕೆಪಿಎಸ್‌ಸಿ ಫೆ. 26ರಂದು ಅಧಿಸೂಚನೆ ಹೊರಡಿಸಿತ್ತು.

ಇದನ್ನೂ ಓದಿ:ಗೊಂದಲ,‌ ಪ್ರತಿಭಟನೆ ನಡುವೆ ಇಂದು KAS ಪ್ರಿಲಿಮ್ಸ್ ಪರೀಕ್ಷೆ; ಆತಂಕದಲ್ಲೇ 2.5 ಲಕ್ಷ ಪರೀಕ್ಷಾರ್ಥಿಗಳು ಭಾಗಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಕೆಎಎಸ್ ಪ್ರಿಲಿಮ್ಸ್​ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಮರು ಪರೀಕ್ಷೆ ನಡೆಯುತ್ತಾ..?

https://newsfirstlive.com/wp-content/uploads/2024/08/KAS-EXAM-1.jpg

Load More