27 ಮದುವೆಯಾಗಿ ಮೋಸ ಮಾಡಿದ್ದ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್
ಒಂದೇ ಜಿಲ್ಲೆಯಲ್ಲಿ 32 ಪುರುಷರ ಮದುವೆಯಾಗಲು ಹೇಗೆ ಸಾಧ್ಯ?
ನಾನೇನು ತಪ್ಪು ಮಾಡಿದ್ದೇನೆ ಎಂದು ಕೇಳಿದ ಶಾಹೀನ್ ಅಖ್ತರ್
ಶ್ರೀನಗರ: ಮದುವೆ ಆಗೋದು ಗಂಡನ ಬಿಟ್ಟು ಓಡಿ ಹೋಗೋದು. ಹತ್ತೇ ದಿನಕ್ಕೆ ಮತ್ತೊಬ್ಬನ ಜೊತೆ ಮದುವೆ ಆಗೋದು. ಇತ್ತೀಚೆಗೆ ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಇಂತಹದೊಂದು ಮ್ಯಾರೇಜ್ ದೋಖಾ ಪ್ರಕರಣ ಬೆಳಕಿಗೆ ಬಂದಿತ್ತು. ಪಾಪ ಮದುವೆಯಾದ ಡಜನ್, ಡಜನ್‌ಗಟ್ಟಲೇ ಗಂಡಂದಿರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಒಂದೇ ಮಹಿಳೆಯ ಫೋಟೋ ತಂದು ಇವಳೇ ನನ್ನ ಹೆಂಡತಿ. ದಯವಿಟ್ಟು ಹುಡುಕಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು. 27 ಮದುವೆಯಾಗಿ ಮೋಸ ಮಾಡಿದ್ದ ಈ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮೋಸ ಮಾಡಿದ್ದಾರೆ ಎನ್ನಲಾದ ಮಹಿಳೆಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಆದರೆ ಮಹಿಳೆ ಕೊಟ್ಟ ಸ್ಟೇಟ್‌ಮೆಂಟ್‌ಗಳಿಗೆ ಡಜನ್‌ಗಟ್ಟಲೇ ಗಂಡಂದಿರು ನಿಜಕ್ಕೂ ಶಾಕ್ ಆಗಿದ್ದಾರೆ.
ಕಾಶ್ಮೀರದ ರಜೌರಿಯಲ್ಲಿ ಎರಡು ಡಜನ್‌ಗೂ ಹೆಚ್ಚು ಜನರನ್ನು ಮದುವೆ ಆಗಿದ್ದ ಮಹಿಳೆ ಬಂಧನವಾಗಿದೆ. ಈಕೆಯ ಅಸಲಿ ಹೆಸರು ಶಾಹೀನ್ ಅಖ್ತರ್ ಎನ್ನಲಾಗಿದೆ. ಈಕೆ ಹಲವು ಗಂಡಸರನ್ನ ಮದುವೆಯಾಗಿ ಶಾದಿ ವೇಳೆ ನೀಡುವ ಮೆಹರ್ ಹಣ, ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು ಎನ್ನಲಾಗಿತ್ತು. ಒಬ್ಬಳೇ ಮಹಿಳೆಯ ಪೋಟೋ ಹಿಡಿದು ಎರಡು ಡಜನ್ ಪುರುಷರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈಗ ರಾಜೋರಿ ಜಿಲ್ಲೆಯ ನೌಶೇರಾ ಟೌನ್‌ನಲ್ಲಿ ಶಾಹೀನ್ ಅಖ್ತರ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮದುವೆಯಾದ 10 ದಿನಕ್ಕೆ ರಾತ್ರೋರಾತ್ರಿ ಪರಾರಿ; 27 ಗಂಡನಿಗೆ ಮೋಸ ಮಾಡಿದ ಮಾಯಗಾತಿಗಾಗಿ ಹುಡುಕಾಟ
ನಾನು ತಪ್ಪೇ ಮಾಡಿಲ್ಲ ಎಂದ ಮಹಿಳೆ
27 ಪುರುಷರನ್ನು ಮದುವೆಯಾಗಿ ಮೋಸ ಮಾಡಿದ ಆರೋಪ ಕೇಳಿ ಬರುತ್ತಿರುವ ಶಾಹೀನ್ ಅಖ್ತರ್ ಉಲ್ಟಾ ಹೊಡೆದಿದ್ದಾರೆ. ದೂರು ಕೊಟ್ಟಿರುವ ಗಂಡಸರೆಲ್ಲಾ ಆಧಾರರಹಿತವಾದ ಆರೋಪ ಮಾಡಿದ್ದಾರೆ. ನಾನು ರಜೌರಿಯಲ್ಲಿ ಒಬ್ಬ ಪುರುಷರನ್ನು ಮದುವೆಯಾಗಿದ್ದೆ. ನನಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆತನೂ ನನಗೆ ಡಿವೋರ್ಸ್ ಕೊಟ್ಟಿದ್ದಾನೆ. ಮಕ್ಕಳನ್ನ ಬೆಳೆಸಲು ನಾನು ಟೈಲರಿಂಗ್ ವೃತ್ತಿ ಮಾಡುತ್ತಿದ್ದೇನೆ ಎಂದು ಶಾಹೀನ್ ಅಖ್ತರ್ ಹೇಳಿಕೆ ನೀಡಿದ್ದಾರೆ.
ಆರೋಪ ಮಾಡುತ್ತಿರುವವರ ಬಳಿ ಸಾಕ್ಷಿಗಳು ಏನಾದ್ರೂ ಇದ್ರೆ ತೋರಿಸಬೇಕು. ಒಂದೇ ಜಿಲ್ಲೆಯಲ್ಲಿ 32 ಪುರುಷರನ್ನು ಮದುವೆಯಾಗಲು ಹೇಗೆ ಸಾಧ್ಯ. ನನಗೆ ಅವರು ಯಾರು ಪರಿಚಯವೇ ಇಲ್ಲ. ನನ್ನ ತಪ್ಪು ಸಾಬೀತು ಪಡಿಸಿದರೆ ನಾನು ಯಾವುದೇ ಕಠಿಣ ಶಿಕ್ಷೆ ಅನುಭವಿಸಲು ಸಿದ್ಧಳಾಗಿದ್ದೇನೆ. ನನಗೆ ಪೊಲೀಸರೇ ನ್ಯಾಯ ಕೊಡಬೇಕು ಎಂದು ಶಾಹೀನ್ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ