ಡಾರ್ಲಿಂಗ್ ಪ್ರಭಾಸ್ ಬಹುನಿರೀಕ್ಷಿತ ಆದಿಪುರುಷ ವಿಶ್ವಾದಾದ್ಯಂತ ರಿಲೀಸ್
ಸಿನಿಮಾದಲ್ಲಿ 'ಸೀತಾ ಭಾರತದ ಮಗಳು' ಡೈಲಾಗ್‌ಗೆ ಸೆನ್ಸಾರ್ ಹಾಕಿದ್ದೇಕೆ..?
ಪ್ರಭಾಸ್ ಆದಿಪುರುಷ ಸಿನಿಮಾ ಪ್ರದರ್ಶನಕ್ಕೆ ನೇಪಾಳ ಸರ್ಕಾರದಿಂದ ತಡೆ!
ಬಾಹುಬಲಿ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ’ ವಿಶ್ವದಲ್ಲೆಡೆ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದೆ. ಆದಿಪುರುಷ ಚಿತ್ರವು ಬಿಡುಗಡೆಯಾದ ಒಂದೇ ದಿನಕ್ಕೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾವನ್ನು ಗಳಿಕೆಯಲ್ಲಿ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದೀಗ ಇದರ ಮಧ್ಯೆ ಆದಿಪುರುಷ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾರತೀಯ ಚಲನಚಿತ್ರಗಳ ಮೇಲೆ ನಿಷೇಧ ಹೇರಲಾಗಿದೆ. ಆದಿಪುರುಷ ಚಿತ್ರದಲ್ಲಿ ಸೀತೆಯ ಪಾತ್ರವನ್ನು ಬಣ್ಣಿಸಿದ್ದರ ಬಗ್ಗೆ ಕಠ್ಮಂಡು ಮೇಯರ್ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವವರೆಗೂ ಭಾರತದ ಎಲ್ಲಾ ಚಿತ್ರಗಳನ್ನು ಬ್ಯಾನ್ ಮಾಡುವುದಾಗಿ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಮೆಟ್ರೋಪಾಲಿಟಿನ್ ಸಿಟಿ ಕಠ್ಮಂಡುವಿನಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಮೇಯರ್ ಆದೇಶಿಸಿದ್ದಾರೆ. ರಿಲೀಸ್ಗೆ ಅವಕಾಶ ಮಾಡಿಕೊಡುವ ಥಿಯೇಟರ್ಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.
ಆದಿಪುರುಷ ಚಿತ್ರದಲ್ಲಿ ಸೀತಾಳನ್ನು “ಭಾರತದ ಮಗಳು” ಎಂದು ಬಣ್ಣಿಸಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರೋ ಕಠ್ಮಂಡು ಮೇಯರ್ ನಾವು ಸಿನಿಮಾ ರಿಲೀಸ್ ಮಾಡಬೇಕಾದರೆ ಸೀತಾ “ನೇಪಾಳದ ಮಗಳು” ಎಂದು ಬದಲಿಸಿ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಇದು ಭಾರೀ ವೈರಲ್ ಆಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ