newsfirstkannada.com

ರಶ್ಮಿಕಾ ಬಳಿಕ ಕತ್ರಿನಾ ಕೈಫ್​ಗೂ ಕಾಡಿದ ಡೀಪ್​ಫೇಕ್ ಸಂಕಟ.. ‘ಟೈಗರ್​ 3’ ಸಿನಿಮಾದ ಫೋಟೋವನ್ನೇ ಮಿಸ್​ಯೂಸ್​ ಮಾಡಿದ್ರು​

Share :

07-11-2023

    ಟೈಗರ್​ 3 ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಕತ್ರಿನಾ ಕೈಫ್​

    ಕತ್ರಿನಾ ಫೋಟೋವನ್ನು ಡೀಪ್​ಫೇಕ್​ ಮಾಡಿದ ದುರುಳರು

    ರಶ್ಮಿಕಾನ ಬೆನ್ನಲ್ಲೇ ಕತ್ರಿನಾಗೂ ಕಾಡಿದ ಡೀಪ್​ಫೇಕ್​ ಸಮಸ್ಯೆ

ನ್ಯಾಷನಲ್​ ಕ್ರಶ್​​ ರಶ್ಮಿಕಾ ಮಂದಣ್ಣ ಡೀಫ್​ಫೇಕ್​ ವಿಡಿಯೋದ ಬೆನ್ನಲ್ಲೇ ನಟಿ ಕತ್ರಿಕಾ ಕೈಫ್​ಗೂ ಈ ಸಮಸ್ಯೆ ಎದುರಾಗಿದೆ. ‘ಟೈಗರ್​ 3’ ಸಿನಿಮಾದ ಕತ್ರಿನಾ ಕೈಫ್​ ಫೋಟೋವೊಂದನ್ನು ಡೀಪ್​ಫೇಕ್​ ಮಾಡಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿದಾಡುತ್ತಿದೆ.

ಕತ್ರಿನಾ ಕೈಫ್​ ‘ಟೈಗರ್​ 3’ ಸಿನಿಮಾ ಶೂಟಿಂಗ್​ ವೇಳೆ ಬಿಳಿಯ ಬಣ್ಣ ಟವೆಲ್​ ಧರಿಸಿ ನಟಿಸಿದ್ದರು. ಆದರೆ ಅದೇ ಫೋಟೋವನ್ನು ಮುಂದಿಟ್ಟುಕೊಂಡು ಡೀಪ್​ಫೇಕ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಸದ್ಯ ಫೋಟೋ ವೈರಲ್​ ಆಗಿದೆ.

ಆರ್ಟಿಫೀಶಿಯಲ್​ ತಂತ್ರಜ್ಞಾನ ಬಂದ ಬಳಿಕ ಮಾನಹಾನಿ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿವೆ. ಯಾರದ್ದೋ ಮುಖಕ್ಕೆ ಇನ್ಯಾರದ್ದೋ ಮುಖ ಜೋಡಣೆ ಮಾಡಿ ಹರಿಯಬಿಡಲಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ವಿಚಾರದಲ್ಲೂ ಇದೇ ಆಗಿದ್ದು, ಝರಾ ಪಾಟೀಲ್​ ಎಂಬಾಕೆಯ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖವನ್ನು ಜೋಡಣೆ ಮಾಡಲಾಗಿದೆ.

ಆದರೆ ಈ ಡೀಪ್​ಫೇಕ್​ ಪ್ರಕರಣ ಮುನ್ನೆಲೆಗೆ ಬಂದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​​ ಬಿಗ್​​ಬಿ ಅಮಿತಾಭ್​ ಬಚ್ಚನ್​ ಸೇರಿದಂತೆ ಅನೇಕ ತಾರೆಯರು ಈ ರೀತಿಯ ಕೃತ್ಯವನ್ನು ತಡೆಯಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಶ್ಮಿಕಾ ಬಳಿಕ ಕತ್ರಿನಾ ಕೈಫ್​ಗೂ ಕಾಡಿದ ಡೀಪ್​ಫೇಕ್ ಸಂಕಟ.. ‘ಟೈಗರ್​ 3’ ಸಿನಿಮಾದ ಫೋಟೋವನ್ನೇ ಮಿಸ್​ಯೂಸ್​ ಮಾಡಿದ್ರು​

https://newsfirstlive.com/wp-content/uploads/2023/11/katrina-kaif.jpg

Load More