ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಶಿವರಾಮ್ ತಂಗಿ!
ನಟಿ ಕಾವೇರಿ ಮದುವೆಯಾಗ್ತಿರೋ ವರ ಯಾರು ಗೊತ್ತಾ?
ಇನ್ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿ ನಟಿ ಹೇಳಿದ್ದೇನು?
ಸ್ಮಾಲ್ ಸ್ಕ್ರೀನ್ ಸೆಲೆಬ್ರೇಟಿಸ್ಗಳು ತಮ್ಮ ರಿಯಲ್ ಲೈಫಿನಲ್ಲಿ ಖುಷಿ ಖುಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಕಿರುತೆರೆಯ ಬಹಳಷ್ಟು ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಈಗ ಅದೇ ಸಾಲಿನಲ್ಲಿ ಮತ್ತೋರ್ವ ನಟಿ ಕಾವೇರಿ ಬಾಗಲಕೋಟೆ ಅವರು ತಮ್ಮ ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದಾರೆ.
ನಟಿ ಕಾವೇರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗಿಣಿರಾಮ ಧಾರಾವಾಹಿಯಲ್ಲಿ ಸೀಮಾ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಆದರೆ ವೈಯಕ್ತಿಕ ಕಾರಣದಿಂದ ಸೀರಿಯಲ್ನಿಂದ ಹೊರ ಬಂದಿದ್ದರು. ನಟಿ ಕಾವೇರಿ ಅವರು ತಮ್ಮ ಅದ್ಬುತ ನಟನೆಯ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಇವರು ತಮ್ಮದೇ ಅಭಿಮಾನಿಗಳ ಬಳಗವನ್ನು ಸಹ ಹೊಂದಿದ್ದಾರೆ. ಇನ್ನು, ತಮ್ಮ ಪರ್ಸ್ನಲ್ ಲೈಫ್ಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಮ್ಮ ಬದುಕಿನ ಅತ್ಯಂತ ಸುಂದರ ಕ್ಷಣದ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಕಾವೇರಿ ತಮ್ಮ ಮನದರಸ ಯಾರು ಅಂತಾ ಎಲ್ಲರಿಗೂ ತಿಳಿಸಿದ್ದಾರೆ. ಎಂಟು ವರ್ಷಗಳಿಂದ ಪ್ರೀತಿ ಮಾಡಿದ ಹುಡುಗನ ಜೊತೆ ಮದುವೆಯಾಗಲು ಸಜ್ಜಾಗಿದ್ದಾರೆ.
ಮೊನ್ನೆಯಷ್ಟೆ ನಟಿ ಕಾವೇರಿ ಅವರ ಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರವನ್ನ ಮುಗಿಸಿಕೊಂಡಿದ್ದರು. ನಟಿ ಕಾವೇರಿ ಅವರು ಮದುವೆಯಾಗುವ ಹುಡುಗ ಆರ್ಮಿಯಲ್ಲಿದ್ದಾರೆ. ಅವರ ಹೆಸರು ವಿಟ್ಟು ಹಿರೆನ್ನವರ್. ದೇಶದ ಸೈನಿಕನಾಗಿ ತಮ್ಮ ಬದುಕನ್ನ ನಮ್ಮ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಇಂತಹ ವ್ಯಕ್ತಿಯನ್ನ ಮದುವೆಯಾಗಲು ಬಹಳ ಸಂತಸ ಅಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾವೇರಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕಾವೇರಿ ಅವರು ಮೆಚ್ಚಿದ ಹುಡಗನನ್ನ ಮದುವೆಯಾಗಲು ಫುಲ್ ರೆಡಿಯಾಗಿದ್ದಾರೆ. ಸದ್ಯ ಹೆಣ್ಣು ನೋಡುವ ಶಾಸ್ತ್ರ ಮುಗಿದಿದೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ