newsfirstkannada.com

ಕ್ಷೀಣಿಸುತ್ತಿದ್ದಾಳೆ ಕಾವೇರಿ.. ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

Share :

07-09-2023

    ಸೆಪ್ಟೆಂಬರ್​11 ರಂದು ಮೈಸೂರು-ಬೆಂಗಳೂರು ಹೆದ್ದಾರಿ ಬಂದ್​

    ಇಂದು ಸಿಎಂ‌ ಭೇಟಿ ಮಾಡಲು ನಿರ್ಧರಿಸಿದ ರೈತ ಸಂಘದ ನಿಯೋಗ

    ಸೆಪ್ಟೆಂಬರ್ 12ರ ನಂತರ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ

ಮಳೆಯ ಅಭಾವದಿಂದ ಕಾವೇರಿ ಕ್ಷೀಣಿಸುತ್ತಿದ್ದಾಳೆ. ಮತ್ತೊಂದೆಡೆ ಕರ್ನಾಟಕದ ರೈತರಲ್ಲಿ ನೀರಿನ ಅಭಾವದ ಆತಂಕ ಮನೆ ಮಾಡಿದೆ. ಅತ್ತ ಕಾವೇರಿ ಪ್ರಾಧಿಕಾರ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇವೆಲ್ಲದರಿಂದ ಬೇಸತ್ತ ರೈತರು ಹೋರಾಟಕ್ಕಿಳಿದಿದ್ದಾರೆ. ಸೆ.11 ರಂದು ಮೈಸೂರು-ಬೆಂಗಳೂರು ಹೆದ್ದಾರಿ ಬಂದ್​ ಮಾಡಲು ಮುಂದಾಗಿದ್ದಾರೆ.

ಕೆಆರ್‌ಎಸ್ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ ಎಷ್ಟಿದೆ?

ಗರಿಷ್ಟ ಮಟ್ಟ : 124.80 ಅಡಿಗಳು
ಇಂದಿನ ಮಟ್ಟ : 98.20 ಅಡಿಗಳು
ಗರಿಷ್ಠ ಸಂಗ್ರಹ : 49.452 ಟಿಎಂಸಿ
ಇಂದಿನ ಸಂಗ್ರಹ : 21.432
ಒಳಹರಿವು : 2,893 ಕ್ಯೂಸೆಕ್
ಹೊರಹರಿವು : 6,2,67 ಕ್ಯೂಸೆಕ್

ಸಿಎಂ ಭೇಟಿ ಮಾಡಲು ಮುಂಸದಾದ ರೈತರು

ಇಂದು ಸಿಎಂ‌ ಭೇಟಿ ಮಾಡಲು ರೈತ ಸಂಘದ ನಿಯೋಗ ನಿರ್ಧರಿಸಿದೆ. ಜಿಲ್ಲೆಯ ರೈತರ ಬದುಕಿನ ವಾಸ್ತವ ಸ್ಥಿತಿಯನ್ನ ಸಿಎಂಗೆ ತಿಳಿಸಲಿದ್ದಾರೆ. ಅಲ್ಲದೆ, ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಲಿದ್ದಾರೆ. ಕೆಆರ್​​ಎಸ್​​ ಬಳಿ ನಡೆಯುತ್ತಿದ್ದ ಧರಣಿ ಸ್ಥಗಿತವಾಗಿದ್ದು, ಸೆಪ್ಟೆಂಬರ್​​ 8 ರಿಂದ ಶ್ರೀರಂಗಪಟ್ಟಣದಲ್ಲಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗಿದೆ. ಇನ್ನು, ಸೆಪ್ಟೆಂಬರ್​​ 11ಕ್ಕೆ ರಾಜ್ಯ ಹೆದ್ದಾರಿ ಸೇರಿ ಮೈಸೂರು ಬೆಂಗಳೂರು ದಶಪಥ ಬಂದ್​​​ ಮಾಡಲು ತೀರ್ಮಾನಿಸಿದೆ.

ನೀರು ಬಿಡಲ್ಲ

ಸುಪ್ರೀಂಕೋರ್ಟ್​ಗೆ ಕರ್ನಾಟಕ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದು, ಕಾವೇರಿ ಕಣಿವೆಯಲ್ಲಿ ಭೀಕರ ಬರವಿದ್ದು, ಸೆಪ್ಟೆಂಬರ್ 12ರ ನಂತರ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಅಂತ ತಿಳಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ಪಾಲನೆ ಆಗಿದೆ ಅಂತ ಕೋರ್ಟ್​ಗೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಷೀಣಿಸುತ್ತಿದ್ದಾಳೆ ಕಾವೇರಿ.. ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/07/krs-1.jpg

Load More