newsfirstkannada.com

ಕಾವೇರಿ ಕಂಟಕ; ರೈತರಿಂದ ಮೈ-ಬೆಂ ಹೆದ್ದಾರಿ ಬಂದ್​ಗೆ ಕರೆ; ಸೆಪ್ಟೆಂಬರ್​ 12ರ ನಂತರ ತಮಿಳುನಾಡಿಗೆ ನೀರು ಬಿಡಲ್ಲ!

Share :

07-09-2023

  ಇಂದು ಸಿಎಂ‌ ಭೇಟಿ ಮಾಡಲಿರುವ ರೈತ ಸಂಘದ ನಿಯೋಗ

  ಸಿಡಿದ ಅನ್ನದಾತರಿಂದ ಮೈ-ಬೆಂ ಹೆದ್ದಾರಿ ಬಂದ್​ಗೆ ಕರೆ

  ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯ

ವರುಣನ ಚೆಲ್ಲಾಟ, ನೆರೆಯವರ ಪುಂಡಾಟ, ಕಾವೇರಿ ಮಕ್ಕಳಿಗೆ ಪ್ರಾಣ ಸಂಕಟ. ಹೀಗೆ ಕನ್ನಡನಾಡಿನ ಜೀವನದಿ ಕಾವೇರಿ ಹರಿದು ಹೋಗ್ತಿದ್ರೂ ಪ್ರತಿಭಟನೆ ಹೊರತು ಏನೂ ಮಾಡಲಾಗದ ಅಸಹಾಯಕತೆ. ನಿತ್ಯವೂ ನೀರು ಖಾಲಿ ಆಗ್ತಿದ್ದು, ರೈತರ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ. ಇವತ್ತು ಸಿಎಂ ಭೇಟಿ ಮಾಡಲು ರೈತ ಸಂಘ ಮುಂದಾಗಿದೆ. ಸೆಪ್ಟೆಂಬರ್​ 11ಕ್ಕೆ ದಶಪಥವನ್ನೇ ಬಂದ್​ ಮಾಡಲು ಕರೆ ಕೊಟ್ಟಿದೆ.

ಕಾವೇರಿ ಕೊಳ್ಳ ಕೊತ ಕೊತ ಕುದಿಯುತ್ತಿದೆ. ಮಳೆ ಬಾರದೇ ಕಳೆಗುಂದಿರುವ ಕಾವೇರಿ ಒಡಲು ನಿತ್ಯವೂ ತಳಕ್ಕೆ ಮುಟ್ಟುತ್ತಿದೆ. ನೆರೆಮನೆಯ ನೀರಿನ ಹಪಾಹಪಿಗೆ ರಾಜ್ಯವನ್ನ ಸೆರೆವಾಸಕ್ಕೆ ತಳ್ಳುವಂತೆ ಮಾಡ್ತಿದೆ. ಒಂದ್ಕಡೆ ಸುಪ್ರೀಂಕೋರ್ಟ್​​ನ ಕಟಕಟೆಯಲ್ಲಿ ಕಾವೇರಿ ನಿಂತಿದ್ರೆ, ಇನ್ನೊಂದ್ಕಡೆ ಸಕ್ಕರೆ ನಾಡಿನಲ್ಲಿ ಪ್ರತಿಭಟನೆ ಕಾಡ್ಗಿಚ್ಚು ಕರಗುತ್ತಿಲ್ಲ. ಕಾವೇರಿ ನಮ್ಮವಳು ಅಂತ ನಿತ್ಯವೂ ವಿವಿಧ ರೀತಿಯಲ್ಲಿ ಮಂಡ್ಯದ ಮಣ್ಣಿನಲ್ಲಿ ಪ್ರತಿಭಟನೆ ಕಹಳೆ ಕೇಳ್ತಿದೆ.

ವಿಚಾರಣೆ ಮುಂದೂಡಿಕೆ, ನಿಲ್ಲದ ನೀರಿನ ಹರಿಯುವಿಕೆ!

ನಿನ್ನೆ ನಡೆದ ಕಾವೇರಿ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ಆದ್ರೆ, ಕನ್ನಂಬಾಡಿಯಿಂದ ಮಾತ್ರ ನೀರಿನ ಹರಿಯುವಿಕೆ ಮುಂದುವರೆದಿದೆ. ಇದರಿಂದ ಸಿಡಿದೆದ್ದ ಕಾವೇರಿ ಮಕ್ಕಳು, ಬೃಹತ್​​ ಪ್ರತಿಭಟನೆಗೆ ಸಜ್ಜಾಗ್ತಿದ್ದಾರೆ. ಮೈಸೂರು ಬೆಂಗಳೂರು ದಶಪಥ ಬಂದ್​ಗೆ ಕರೆ ಶಪಥ ತೊಟ್ಟಿದ್ದಾರೆ. ಸೆಪ್ಟೆಂಬರ್​​ 11 ಅಂದ್ರೆ ಬರುವ ಸೋಮವಾರ ದಶಪಥ ಹೆದ್ದಾರಿ ಬಂದ್ ಮಾಡಲು ಕರ್ನಾಟಕ ರಾಜ್ಯ ರೈತ ಸಂಘ ಕರೆ ಕೊಟ್ಟಿದೆ.

ಪ್ರಮುಖ ಮೂರು ನಿರ್ಣಯ ಕೈಗೊಂಡ ಸಂಘ

KRSನಲ್ಲಿ ನಡೆಯುತ್ತಿದ್ದ ರೈತಸಂಘದ ಅಹೋರಾತ್ರಿ ಧರಣಿ ಸ್ಥಗಿತ ಆಗಿದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ನೇತೃತ್ವದಲ್ಲಿ ಕಳೆದ 7 ದಿನಗಳಿಂದ ಧರಣಿ ನಡೆಯುತ್ತಿತ್ತು. ಆದ್ರೆ, ಸುಪ್ರೀಂಕೋರ್ಟ್​​ನ ಅರ್ಜಿ ವಿಚಾರಣೆ ಸೆಪ್ಟೆಂಬರ್​​ 21ಕ್ಕೆ ಮುಂದೂಡಿಕೆ ಆದ ಹಿನ್ನಲೆ ಧರಣಿಯನ್ನ ಸ್ಥಗಿತ ಮಾಡಲು ರೈತ ಸಂಘ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ತುರ್ತು ಸಭೆ ನಡೆಸಿ ಮೂರು ಪ್ರಮುಖ ನಿರ್ಣಯಗಳನ್ನ ರೈತಸಂಘ ಕೈಗೊಂಡಿದೆ.

ಸೆ.11ರಂದು ರಾಜ್ಯ ಹೆದ್ದಾರಿ ಸೇರಿ ಮೈ-ಬೆಂ ದಶಪಥ ಬಂದ್​​​

ಇಂದು ಸಿಎಂ‌ ಭೇಟಿ ಮಾಡಲು ರೈತ ಸಂಘದ ನಿಯೋಗ ನಿರ್ಧರಿಸಿದೆ. ಜಿಲ್ಲೆಯ ರೈತರ ಬದುಕಿನ ವಾಸ್ತವ ಸ್ಥಿತಿಯನ್ನ ಸಿಎಂಗೆ ತಿಳಿಸಲಿದ್ದಾರೆ. ಅಲ್ಲದೆ, ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಲಿದ್ದಾರೆ. ಕೆಆರ್​​ಎಸ್​​ ಬಳಿ ನಡೆಯುತ್ತಿದ್ದ ಧರಣಿ ಸ್ಥಗಿತವಾಗಿದ್ದು, ಸೆಪ್ಟೆಂಬರ್​​ 8 ರಿಂದ ಶ್ರೀರಂಗಪಟ್ಟಣದಲ್ಲಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗಿದೆ. ಇನ್ನು, ಸೆಪ್ಟೆಂಬರ್​​ 11ಕ್ಕೆ ರಾಜ್ಯ ಹೆದ್ದಾರಿ ಸೇರಿ ಮೈಸೂರು ಬೆಂಗಳೂರು ದಶಪಥ ಬಂದ್​​​ ಮಾಡಲು ತೀರ್ಮಾನಿಸಿದೆ.

ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಮಂಡ್ಯ ಶಾಸಕ!

ಇನ್ನು, ರೈತ‌ ಹಿತರಕ್ಷಣಾ ಸಮಿತಿ ಸಭೆ ನಡೀತು. ಸಭೆ ಬಳಿಕ ಮಂಡ್ಯ ಶಾಸಕ ರವಿಕುಮಾರ್ ಮಾತನಾಡಿದ್ರು. ಕುಡಿಯುವ ನೀರಿಗು ಸಮಸ್ಯೆ ಎದುರಾಗುವ ಆತಂಕವಿದೆ. ತಕ್ಷಣ ಡ್ಯಾಂನಿಂದ ಹರಿಸುತ್ತಿರುವ ನೀರು ನಿಲ್ಲಿಸಬೇಕಿದೆ. ಆ ಬಗ್ಗೆ ಉಸ್ತುವಾರಿ ಸಚಿವರು ಸಿಎಂ, ಡಿಸಿಎಂ ಜೊತೆ ಮಾತನಾಡ್ತೇನೆ ಎಂದಿದ್ದಾರೆ. ಅವರ ನಿರ್ಧಾರದ ಬಳಿಕ ನಾವು ನಿರ್ಧಾರ ಮಾಡ್ತೇವೆ ಎಂದಿದ್ದಾರೆ.

ಸೆಪ್ಟೆಂಬರ್​ 12ರ ನಂತರ ತಮಿಳುನಾಡಿಗೆ ನೀರು ಬಿಡಲ್ಲ!

ಇತ್ತ, ಕಾವೇರಿ ನದಿ ನೀರು ಹಂಚಿಕೆ ಮತ್ತೆ ಸುಪ್ರೀಂಕೋರ್ಟ್​​ ಕಟಕಟೆ ಹತ್ತಿದೆ. ನಿನ್ನೆ ವಿಚಾರಣೆ ನಡೆಸಿದ ಕೋರ್ಟ್​​, ಸೆಪ್ಟೆಂಬರ್​​​ 21ಕ್ಕೆ ಮುಂದೂಡಿದೆ. ಈ ವೇಳೆ ಸುಪ್ರೀಂಕೋರ್ಟ್​ಗೆ ಕರ್ನಾಟಕ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದು, ಕಾವೇರಿ ಕಣಿವೆಯಲ್ಲಿ ಭೀಕರ ಬರವಿದ್ದು, ಸೆಪ್ಟೆಂಬರ್ 12ರ ನಂತರ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಅಂತ ತಿಳಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ಪಾಲನೆ ಆಗಿದೆ ಅಂತ ಕೋರ್ಟ್​ಗೆ ತಿಳಿಸಿದೆ.

ಒಟ್ಟಾರೆ, ಒಂದ್ಕಡೆ ಕಾವೇರಿ ಒಡಲಲ್ಲಿ ನೀರಿನ ಕಿಚ್ಚು ಹೊತ್ತಿದೆ. ಇನ್ನೊಂದ್ಕಡೆ ಸರ್ಕಾರ ಉಭಯ ಸಂಕಟಕ್ಕೆ ಸಿಲುಕಿದ್ದು, ರೈತರ ಹಿತ ರಕ್ಷಣೆ ಜೊತೆಗೆ ಕೋರ್ಟ್​ ಆದೇಶ ಪಾಲನೆ ಮಾಡಬೇಕಾಗಿದೆ. ಜೊತೆಗೆ ಎರಡು ಕೋಟಿ ಜನರ ನೀರಿನ ದಾಹ ನೀಗಿಸಬೇಕಾದ ಕರ್ತವ್ಯ ನಿರ್ವಹಿಸಬೇಕಿದೆ. ಹೀಗಾಗಿ ಸರ್ಕಾರ ರಾಜ್ಯದ ಹಿತ ಕಾಪಾಡುವತ್ತ ಹೆಚ್ಚು ಗಮನ ಹರಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ಕಂಟಕ; ರೈತರಿಂದ ಮೈ-ಬೆಂ ಹೆದ್ದಾರಿ ಬಂದ್​ಗೆ ಕರೆ; ಸೆಪ್ಟೆಂಬರ್​ 12ರ ನಂತರ ತಮಿಳುನಾಡಿಗೆ ನೀರು ಬಿಡಲ್ಲ!

https://newsfirstlive.com/wp-content/uploads/2023/09/Kaveri-River-1.jpg

Load More