newsfirstkannada.com

ಕಾವೇರಿ ಕದನ.. ಇಂದು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ; ಸಂಸದೆ ಸುಮಲತಾ ನೇತೃತ್ವದಲ್ಲಿ​ ಪ್ರತಿಭಟನೆ

Share :

21-08-2023

    ಸಂಜಯ್ ವೃತ್ತದಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ

    ನೀರಿಲ್ಲದೇ ರೈತರಿಗೆ ಸಂಕಷ್ಟ.. ​ ಸರ್ಕಾರದ ವಿರುದ್ಧ ಆಕ್ರೋಶ

    ಕಾಂಗ್ರೆಸ್​​ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಧುಮುಕಿದ ಬಿಜೆಪಿ

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆದಿದೆ. ಸುಪ್ರೀಂಕೋರ್ಟ್‌ ಆಜ್ಞೆಗೆ ತಲೆಬಾಗಿ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸ್ತಿದೆ. ಆದ್ರೆ ಸರ್ಕಾರದ ನಡೆಗೆ ಅನ್ನದಾತರು ಸಿಡಿದೆದ್ದಿದ್ದಾರೆ. ತಮಿಳುನಾಡಿಗೆ ನೀರು ಹರಿಸದಂತೆ ಪ್ರತಿಭಟನೆಗಿಳಿದಿದೆ. ಇತ್ತ ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಮಲ ಪಡೆ ಕೂಡ ಕಾವೇರಿ ಬಾಣವನ್ನ ಹೂಡಿದೆ.

ಮಳೆರಾಯನ ಕೃಪೆಯಿಲ್ಲದೇ ಕಾವೇರಿಯ ಒಡಲು ಖಾಲಿಯಾಗ್ತಿದೆ. ಕೆಆರ್​​ಎಸ್​​ ಡ್ಯಾಂನಿಂದ ನೀರು ಹರಿಯದೇ ರೈತರ ಬೆಳೆಗಳು ಬತ್ತಿ ಹೋಗ್ತಿವೆ. ಆದ್ರೆ ರೈತರ ಜಮೀನುಗಳಿಗೆ ಬರಬೇಕಿದ್ದ ನೀರು ತಮಿಳುನಾಡು ಪಾಲಾಗ್ತಿದೆ. ಸುಪ್ರೀಂ ಕೋರ್ಟ್​ ಆಜ್ಞೆಗೆ ತಲೆಬಾಗಿರೋ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸ್ತಿದೆ.

ತಮಿಳುನಾಡಿಗೆ ನೀರು ಹರಿಸ್ತಿರೋ ಸರ್ಕಾರದ ನಡೆಗೆ ವಿರೋಧ

ಬೆಂಗಳೂರಲ್ಲಿ ಕುಡಿಯುವ ನೀರಿಗೆ ಕಾವೇರಿ ನೀರೆ ಬೇಕೇ ಬೇಕು. ಮೈಸೂರು, ಮಂಡ್ಯ, ರಾಮನಗರ ಭಾಗದ ರೈತರಿಗೆ ಕೆಆರ್‌ಎಸ್‌, ಕಬಿನಿ, ಹಾರಂಗಿಯೇ ಜೀವಾಳ. ಆದ್ರೀಗ ಮಳೆ ಇಲ್ಲದೇ ರಾಜ್ಯದ ಡ್ಯಾಂಗಳು ಭರ್ತಿಯಾಗಿಲ್ಲ. ರೈತರ ಬೆಳೆಗಳಿಗೆ ನೀರೇ ಸಿಗುತ್ತಿಲ್ಲ. ಹೀರುವಾಗ ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು ಬೀದಿಗಳಿದಿದ್ದಾರೆ. ಹಲವೆಡೆ ಪ್ರತಿಭಟನಾ ಕಹಳೆ ಮೊಳಗಿಸಿದ್ದಾರೆ. ಮದ್ದೂರಿನ ಐಬಿ ಸರ್ಕಲ್​ನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕೂಡ ಪ್ರತಿಭಟಿಸಿದ್ದಾರೆ.

ಕೆಆರ್​ಎಸ್​ ಡ್ಯಾಂ
ಕೆಆರ್​ಎಸ್​ ಡ್ಯಾಂ

ಸಂಸದೆ ಸುಮಲತಾ ನೇತೃತ್ವದಲ್ಲಿಂದು ಬೃಹತ್​ ಪ್ರತಿಭಟನೆ

ಇತ್ತ ತಮಿಳುನಾಡಿಗೆ ನೀರು ಹರಿಸುತ್ತಿರೋದಕ್ಕೆ ಸರ್ಕಾರದ ನಡೆಗೆ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಸಂಸದೆ ಸುಮಲತಾ ನೇತೃತ್ವದಲ್ಲಿ ಮಂಡ್ಯದಲ್ಲಿಂದು ಬಿಜೆಪಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಯ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಸಂಸದ ಪ್ರತಾಪ್ ಸಿಂಹ ಆಕ್ಷೇಪ.. ಪ್ರತಿಭಟನಾ ಸ್ಥಳ ಚೇಂಜ್​

ಇನ್ನೂ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸಿದ್ದನ್ನೇ ಅಸ್ತ್ರವಾಗಿಸಿಕೊಂಡಿರೋ ಬಿಜೆಪಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ.. ಇಂದು ಮಂಡ್ಯ ಸಂಸದೆ ಸುಮಲತಾ ನೇತೃತ್ವದಲ್ಲಿ ಬೆಂಗಳೂರು-ಮೈಸೂರು ಹೈವೇ ಬಂದ್‌ ಮಾಡಿ ಪ್ರತಿಭಟಿಸಲು ಕಮಲ ನಾಯಕರು ಸಜ್ಜಾಗಿದ್ರು. ಆದ್ರೆ ಹೈವೇ ಬಂದ್‌ಗೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಹೆದ್ದಾರಿ ಬಂದ್‌ ನಿರ್ಧಾರವನ್ನ ಕೈಬಿಡಲಾಗಿದೆ. ಇಂದು ಮಂಡ್ಯದ ಸಂಜಯ್ ವೃತ್ತದಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ ನಡೆಯಲಿದೆ.

ಕಾವೇರಿ ಕದನ.. ಇಂದು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ

ತಮಿಳುನಾಡಿಗೆ ಪ್ರತಿನಿತ್ಯ 10,000 ಕ್ಯೂಸೆಕ್ಸ್‌ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಸರ್ಕಾರ ಸುಪ್ರೀಂಕೋರಟ್​ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಮೇಲ್ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರೋದಾಗಿ ಸಚಿವ ಹೆಚ್‌.ಕೆ ಪಾಟೀಲ್‌ ತಿಳಿಸಿದ್ದಾರೆ.

ಕಾವೇರಿ ಕದನದಿಂದ ಸರ್ಕಾರಕ್ಕೆ ರೈತರ ಹೋರಾಟದ ಬಿಸಿ ತಟ್ಟಿದೆ. ಎಚ್ಚೆತ್ತಿರೋ ಸರ್ಕಾರ ನೀರಾವರಿ ಸಮಸ್ಯೆ ನಿವಾರಣೆಗೆ ಆಗಸ್ಟ್‌ 23ಕ್ಕೆ ಸರ್ವಪಕ್ಷಗಳ ಸಭೆ ಕರೆದಿದೆ. ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರಿಂದ ಸರ್ಕಾರ ನೀರಿನ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಪಡೆಯಲಿದೆ. ಅದೇನೆ ಇರಲಿ ವಿಪಕ್ಷದಲ್ಲಿದ್ದಾಗ ನೀರಿಗಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಈಗ ಕಾವೇರಿ ವಿಚಾರವಾಗಿ ದಿಟ್ಟ ನಿಲುವು ತಾಳದೇ ಇಕ್ಕಟ್ಟಿಗೆ ಸಿಲುಕಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ಕದನ.. ಇಂದು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ; ಸಂಸದೆ ಸುಮಲತಾ ನೇತೃತ್ವದಲ್ಲಿ​ ಪ್ರತಿಭಟನೆ

https://newsfirstlive.com/wp-content/uploads/2023/07/KRS.jpg

Load More