ಎರಡನೆ ಬಾರಿಗೆ ಅರ್ಜಿ ವಿಚಾರಣೆ ಅನುಮಾನ
ಸೆ. 11 ರಂದು ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ
ಕಾವೇರಿ ನೀರಿನ ವಿಚಾರವಾಗಿ ರಿಟ್ ಅರ್ಜಿ ಸಲ್ಲಿಸಿದ ಕರ್ನಾಟಕ
ಇಂದು ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಒಟ್ಟು ನಾಲ್ಕು ಅರ್ಜಿಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಲಿದೆ. ಕರ್ನಾಟಕದಿಂದ 24 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚಿಸುವಂತೆ ತಮಿಳುನಾಡು ವಾದಿಸಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ.
ಈಗಾಗಲೇ ನೀರಿನ ವಿಚಾರವಾಗಿ ಕಾವೇರಿ ಪ್ರಾಧಿಕಾರ ಹೇಳಿದಷ್ಟು ನೀರನ್ನು ಬಿಟ್ಟಿದ್ದೇವೆ ಅಂತ ಕರ್ನಾಟಕ ರಿಟ್ ಅರ್ಜಿ ಸಲ್ಲಿಸಿದೆ. ಇತ್ತ, ಸುಪ್ರೀಂಕೋರ್ಟ್ಗೆ ಕಾವೇರಿ ಪ್ರಾಧಿಕಾರ ಅಫಿಡವೀಟ್ ಸಲ್ಲಿಸಿದ್ದು, ಮೂರು ತಿಂಗಳಲ್ಲಿ 35 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ ಅಂತ ಹೇಳಿದೆ. ಅಲ್ಲದೆ, ಮಳೆ ಕೊರತೆ ಕಾರಣ ಎರಡು ಸರ್ಕಾರಗಳ ನಡುವೆ ಸಂಕಷ್ಟ ಸೂತ್ರ ಸಿದ್ದಪಡಿಸಬೇಕಿದೆ ಅಂತ ಹೇಳಿದೆ.
ಇನ್ನು, ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮಂಡ್ಯದ ರೈತ ಸಂಘವೂ ಕೂಡ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಎಲ್ಲದರ ನಡುವೆ ಇಂದಿನ ತ್ರಿಸದಸ್ಯ ಪೀಠದಲ್ಲಿ ನ್ಯಾ.ನರಸಿಂಹ ಅನುಪಸ್ಥಿತಿ ಹಿನ್ನಲೆ, ಎರಡನೆ ಬಾರಿಗೆ ಅರ್ಜಿ ವಿಚಾರಣೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾಗಿ ಸೆ. 11 ರಂದು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಆದರಿಂದು ದ್ವಿಸದಸ್ಯ ಪೀಠದ ಮುಂದೆ ಮತ್ತೆ ತಮಿಳುನಾಡು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಕಳೆದ ಶುಕ್ರವಾರವು ವಿಚಾರಣೆ ನಡೆಯದೆ ಮುಂದೂಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ