newsfirstkannada.com

Kaveri: ನಾಳೆ ಕಾವೇರಿ ಅರ್ಜಿ ವಿಚಾರಣೆ ನಡೆಯೋದು ಡೌಟ್!​ ಮತ್ತೆ ಯಾವಾಗ?

Share :

31-08-2023

    ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ ಮಾಡಿದ ಕಾವೇರಿ ಪ್ರಾಧಿಕಾರ

    ನೀರು ಬಳಸಿಲ್ಲ ಎಂದು ಉಲ್ಲೇಖಿಸಿದ ತಮಿಳುನಾಡು

    ಸಂವಿಧಾನ ಪೀಠದಲ್ಲಿ ಆರ್ಟಿಕಲ್ 370 ವಿಚಾರಣೆ

ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಕಾವೇರಿ ವಿವಾದ ತಾರಕಕ್ಕೇರಿದ್ದು, ಕಾವೇರಿ ಪ್ರಾಧಿಕಾರ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ ಮಾಡಿದೆ. ಸುಪ್ರೀಂಕೋರ್ಟ್​ ಸೂಚನೆಯಂತೆ ಪ್ರಾಧಿಕಾರವು ಸಭೆ ನಡೆಸಿ, ವರದಿಯನ್ನು ಸಿದ್ದಪಡಿಸಿದೆ.

ಇನ್ನು ಕರ್ನಾಟಕವು CWMA ನೀಡಿದ್ದ ಆದೇಶವನ್ನ ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದೆ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತಿಳಿಸಿದೆ ಹಾಗೂ ತಮಿಳುನಾಡು ವಿವೇಚನಾಯುತವಾಗಿ ನೀರು ಬಳಸಿಲ್ಲ ಎಂದು ಉಲ್ಲೇಖಿಸಿದೆ. ಕಾವೇರಿ ಪ್ರಾಧಿಕಾರ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಆಧಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಕಾವೇರಿ ನೀರು ವಿವಾದದ ಅರ್ಜಿ ವಿಚಾರಣೆ ನಡೆಯಲಿದೆ.

ಆದರೆ ನಾಳೆ ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದದ ಬಗ್ಗೆ ವಿಚಾರಣೆ ನಡೆಯೋದು ಅನುಮಾನ ಎಂದು ಹೇಳಲಾಗುತ್ತಿದೆ. ಸಂವಿಧಾನ ಪೀಠದಲ್ಲಿ ಆರ್ಟಿಕಲ್ 370 ವಿಚಾರಣೆ ಇದ್ದು, ಈ ಸಂವಿಧಾನ ಪೀಠದಲ್ಲಿ ನ್ಯಾ.B.R.ಗವಾಯಿಯವರು ಭಾಗಿಯಾಗಲಿದ್ದಾರೆ. ಈ ಕಾರಣ ಕಾವೇರಿ ಅರ್ಜಿ ವಿಚಾರಣೆ ಸೋಮವಾರ ನಡೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kaveri: ನಾಳೆ ಕಾವೇರಿ ಅರ್ಜಿ ವಿಚಾರಣೆ ನಡೆಯೋದು ಡೌಟ್!​ ಮತ್ತೆ ಯಾವಾಗ?

https://newsfirstlive.com/wp-content/uploads/2023/06/KRS-Dam-1.jpg

Load More