newsfirstkannada.com

ಕಾವೇರಿ ನೀರು ವಿವಾದ.. ಸುಪ್ರೀಂ ಕೋರ್ಟ್​ ತೀರ್ಮಾನದಿಂದ ತಮಿಳುನಾಡಿಗೆ ನಿರಾಸೆ

Share :

26-08-2023

  ಮತ್ತೊಮ್ಮೆ ಸುಪ್ರೀಂ​ ಕದ ತಟ್ಟಿದ ಕಾವೇರಿ ಕದನ

  ಬೇಸಿಗೆಯಲ್ಲಿ ಹನಿ ನೀರಿಗೂ ಕಾದಿದೆ ಭಯಾನಕ ಪರಿಸ್ಥಿತಿ

  ಜಲವ್ಯಾಜ್ಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ಮುಂಗಾರಿನ ಅಭಿಷೇಕದಿಂದ ನಳನಳಿಸ್ಬೇಕಿದ್ದ ಕರ್ನಾಟಕ ಈ ಬಾರಿ, ಮಳೆ ಕಾಣದೇ ಕಳೆ ಕಳೆದ್ಕೊಂಡಿದೆ. ಅಷ್ಟು-ಇಷ್ಟು ಶೇಖರವಾದ ನೀರಿನಲ್ಲಿ ಬೆಳೆ ಬೆಳೆದ್ಕೊಳ್ಳಬೇಕು ಅಂದ್ರೆ ಅದರ ಮೇಲೂ ನೆರೆಯ ತಮಿಳುನಾಡು ವಕ್ರದೃಷ್ಟಿ ಬೀರಿ ಕೂತಿದೆ. ರಾಜ್ಯದ ಆಣೆಕಟ್ಟಿನಿಂದ ನೀರು ಹರಿದು ಹೋದ್ರು, ತಮಿಳುನಾಡಿನ ದಾಹ ನೀಗ್ತಿಲ್ಲ ಅಂತ ನ್ಯಾಯ ಪಂಚಾಯ್ತಿ ಸೇರಿಸಿದೆ. ಈ ಮೂಲಕ ಮತ್ತೊಮ್ಮೆ ಕಾವೇರಿ ಕದನ, ಸುಪ್ರೀಂ​ನ ಕದ ತಟ್ಟಿ, ಕಟಕಟೆಯಲ್ಲಿ ನಿಂತಿದೆ.

ಸುಪ್ರೀಂಕೋರ್ಟ್​ನ ತೀರ್ಮಾನದಿಂದ ತಮಿಳುನಾಡಿಗೆ ನಿರಾಸೆ

ಹೌದು. ಶತಮಾನದ ಮುಗಿಯದ ಜಲವ್ಯಾಜ್ಯ ಮತ್ತೆ ಸುಪ್ರೀಂಕೋರ್ಟ್​​ನಲ್ಲಿ ಶುರುವಾಗಿದೆ. ರಾಜ್ಯದ ಜಲಪಾತ್ರೆ ಖಾಲಿ ಆಗ್ತಿದ್ರೂ ತಮಿಳುನಾಡು ಮಾತ್ರ ನೀರು ಬೇಕು ಅಂತ ಹಕ್ಕು ಮಂಡಿಸಿದೆ. ಇವತ್ತು, ಸುಪ್ರೀಂಕೋರ್ಟ್​​ನಲ್ಲಿ ನೀರಿಗಾಗಿ ದಾವೆ ಹೂಡಿದ ತಮಿಳುನಾಡು, ರಾಜ್ಯದ ಪಾಲಿನ ನೀರನ್ನ ಕರ್ನಾಟಕ ಹರಿಸ್ತಿಲ್ಲ ಅಂತ ವಾದ ಮಾಡಿದೆ.

ಸುಪ್ರೀಂ ಕಟಕಟೆಯಲ್ಲಿ ಕಾವೇರಿ!

ನ್ಯಾ. ಬಿ.ಆರ್.ಗವಾಯಿ: ತಮ್ಮ ತಮ್ಮ ವಾದವನ್ನ ಮಂಡಿಸಬಹುದು.
ಶ್ಯಾಮ್​​ ದೀವಾನ್​​, ಕರ್ನಾಟಕ ಪರ ವಕೀಲ: ಕರ್ನಾಟಕದಲ್ಲಿ ಈ ಬಾರಿ ಮಳೆಯ ಕೊರತೆಯಾಗಿದೆ. ಶೇ.47ರಷ್ಟು ಮಳೆ ಕೊರತೆ ಇದೆ. ಈ ಕೊರತೆ ನಡುವೆಯೂ ನೀರು ಬಿಡಲಾಗ್ತಿದೆ. ಇಂದಿನವರೆಗೂ ತಮಿಳುನಾಡಿಗೆ ನೀರು ಹರಿಯುತ್ತಿದೆ. ಪ್ರಾಧಿಕಾರ ಸಭೆ ನಡೆಯುತ್ತಿದ್ದಾಗ ಇದ್ಯಾವುದನ್ನೂ ಗಮನಿಸದೇ ತಮಿಳುನಾಡು ಅಧಿಕಾರಿಗಳು ಎದ್ದು ಹೋಗಿದ್ದಾರೆ.
ಮುಕುಲ್ ರೋಹಟಗಿ, ತಮಿಳುನಾಡು ಪರ ವಕೀಲ: ಮೈ ಲಾರ್ಡ್​​, ಈ ಬಾರಿ ನಮ್ಮ ರಾಜ್ಯದಲ್ಲೂ ನೀರಿನ ಅಭಾವ ಇದೆ. ನಮ್ಮಲ್ಲೂ ಮಳೆಯ ಕೊರತೆ ಇದೆ, ನೀರು ಹಂಚಿಕೊಳ್ಳಬೇಕು. ಇರುವ ಮಳೆಯ ನೀರನ್ನ ಇಬ್ಬರು ಹಂಚಿಕೊಳ್ಳಬೇಕು. ಆದ್ರೆ, ನಮ್ಮ ಪಾಲಿನ ನೀರು ಕರ್ನಾಟಕ ಹರಿಸ್ತಿಲ್ಲ.
ನ್ಯಾ. ಬಿ.ಆರ್.ಗವಾಯಿ : ಸರಿ ಎರಡು ರಾಜ್ಯಗಳ ವಾದ ಸರಿ. ಕರ್ನಾಟಕ ನೀರು ಬಿಡುಗಡೆ ಮಾಡಿದ್ದೇವೆ ಎಂದಿದ್ದಾರೆ. ಬಿಡುಗಡೆಯಾದ ನೀರು ತಮಿಳುನಾಡು ತಲುಪಲು ಮೂರು ದಿನ ಬೇಕು. ನಾವು ಹೇಗೆ ಆದೇಶ ನೀಡಲು ಸಾಧ್ಯ? ನಾವು ಈ ನೀರಿನ ಹಂಚಿಕೆ ವಿಷಯದಲ್ಲಿ ತಜ್ಞರಲ್ಲ. ಕೇಂದ್ರ ಸರ್ಕಾರದ ಪರ ವಕೀಲೆ ಅಡಿಷನಲ್ ಸಾಲಿಸಿಟರ್ ಜನರಲ್ ನಿಮ್ಮ ವಾದ ಏನಾದ್ರೂ ಇದ್ಯಾ?
ಐಶ್ಚರ್ಯಾ ಭಾಟಿ, ಕೇಂದ್ರ ಪರ ವಕೀಲೆ: ತಮಿಳುನಾಡು ಮತ್ತು ಕರ್ನಾಟಕ ವಾದ ಸರಿ ಇದೆ. ಇದು ಕೊರತೆಯ ವರ್ಷ. ಇರುವ ನೀರನ್ನೇ ಹಂಚಿಕೊಳ್ಳಬೇಕಾಗಿದೆ. ಸೋಮವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ. ಹೀಗಾಗಿ ಇಂದಿನ ವಿಚಾರಣೆಯನ್ನು ಮುಂದೂಡಬಹುದು.
ನ್ಯಾ. ಬಿ.ಆರ್.ಗವಾಯಿ: ಹೌದು. ನೀವು ಏಕೆ ಪ್ರಾಧಿಕಾರದ ಮುಂದೆಯೇ ಹೋಗಬಾರದು. ನಾವು ನೀರಿನ ಹಂಚಿಕೆಯಲ್ಲಿ ಪರಿಣತರಲ್ಲ. ನೀರು ಕಾವೇರಿ ನೀರಿನ ಪ್ರಾಧಿಕಾರವನ್ನ ಮೊದ್ಲು ಸಂಪರ್ಕಿಸಿ. ಕಾವೇರಿ ನೀರು ಪ್ರಾಧಿಕಾರವು ತನ್ನ ಆದೇಶದಂತೆ ನೀರು ಹರಿಸಲಾಗಿದೆಯೇ ಇಲ್ಲವೇ ಅನ್ನೋದು ಪರಿಶೀಲಿಸಲಿ, ಆ ಬಗ್ಗೆ ನಮಗೆ ವರದಿ ಸಲ್ಲಿಸ್ಲಿ. ಶುಕ್ರವಾರ ನಾವು ಮತ್ತೆ ವಿಚಾರಣೆ ನಡೆಸೋಣ.

ಇದು ಸುಪ್ರೀಂಕೋರ್ಟ್​ನಲ್ಲಿ ನಡೆದ ವಾದ ಸರಣಿ ಆಗಿತ್ತು. ಕಾವೇರಿ ನೀರಿನ ವಿವಾದದಲ್ಲಿ ಸದ್ಯಕ್ಕೆ ಮಧ್ಯಪ್ರವೇಶ ಮಾಡಲು ನಿರಾಕರಿಸಿರೋದು ರಾಜ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಅನುಭವವಾಗಿದೆ. ಇತ್ತ, ನೀರಿಗಾಗಿ ಸರ್ವೋಚ್ಛ ನ್ಯಾಯಾಲಯ ಮೊರೆ ಹೋಗಿದ್ದ ತಮಿಳುನಾಡು, ಕಾವೇರಿ ಜಲಕ್ಕಾಗಿ ತ್ರಿಸದಸ್ಯ ಪೀಠ ರಚನೆ ಆಗುವಲ್ಲಿ ಸಫಲ ಕಂಡಿತ್ತು. ಆದ್ರೆ, ಇವತ್ತು ಸುಪ್ರೀಂನ ನಿರ್ಧಾರದಿಂದ ನಿರಾಶೆಗೆ ಒಳಗಾಗಿದೆ.

ಕೆಆರ್​​ಎಸ್​​ನಿಂದ ಹರಿದು ಹೋಗಿದ್ದು 10 ಟಿಎಂಸಿ ನೀರು

ಈ ಮಧ್ಯೆ ತಮಿಳುನಾಡಿಗೆ 10 ಟಿಎಂಸಿ ಕಾವೇರಿ ನೀರು ಬಿಟ್ಟಿದ್ದ ಕರ್ನಾಟಕ, ವಿಚಾರಣೆ ಕಾರಣಕ್ಕೆ ತಡೆ ನೀಡಿತ್ತು. ನಿನ್ನೆ ಸಂಜೆಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿವು ಇಳಿಮುಖ ಆಗಿದೆ. ರೈತರ ವಿರೋಧಕ್ಕೂ ಬಗ್ಗದೆ ನೀರು ಬಿಟ್ಟಿದ್ದಕ್ಕೆ ಕೆಆರ್​​ಎಸ್​​ನಲ್ಲಿ ನೀರಿನ ಮಟ್ಟ ಭಾರೀ ಕುಸಿತ ಕಂಡಿದೆ. ಇತ್ತ, 49 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಉಳಿದಿದ್ದು ಕೇವಲ 25 ಟಿಎಂಸಿ ನೀರಷ್ಟೇ. ಇದರಲ್ಲಿ ಡೆಡ್​​ ಸ್ಟೋರೇಜ್​​​ ತೆಗೆದರೆ ಉಪಯೋಗ ಆಗುವ ನೀರು ಅತ್ಯಂತ ಕಡಿಮೆ. ಹೀಗಾಗಿ ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಫಿಕ್ಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ನೀರು ವಿವಾದ.. ಸುಪ್ರೀಂ ಕೋರ್ಟ್​ ತೀರ್ಮಾನದಿಂದ ತಮಿಳುನಾಡಿಗೆ ನಿರಾಸೆ

https://newsfirstlive.com/wp-content/uploads/2023/07/KAVERI.jpg

Load More