newsfirstkannada.com

KRS Dam: ಕಾವೇರಿ ಕಂಟಕ.. ತಮಿಳುನಾಡಿಗೆ ನೀರು ಬಿಡುಗಡೆ ಸ್ಥಗಿತ ಮಾಡಿದ ರಾಜ್ಯ ಸರ್ಕಾರ

Share :

08-09-2023

    ತಮಿಳುನಾಡಿಗೆ 75 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು

    10 ದಿನದಲ್ಲಿ 62 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗಿತ್ತು

    ತಮಿಳುನಾಡಿಗೆ ನೀರು ನಿಲ್ಲಿಸಿ ನಾಲೆಗಳಿಗೆ ನೀರು ಬಿಡುಗಡೆ ಮಾಡಿದೆ

ಮಂಡ್ಯ: ನೆರೆಯ ರಾಜ್ಯ ತಮಿಳುನಾಡಿಗೆ ಹರಿಸಲಾಗುತ್ತಿದ್ದ KRS ಡ್ಯಾಂನ ನೀರನ್ನು ಸರ್ಕಾರ ನಿಲ್ಲಿಸಿದೆ. ಪ್ರಾಧಿಕಾರದ ಸೂಚನೆಯಂತೆ ಬಹುತೇಕ ನೀರು ತಲುಪಿದ ಹಿನ್ನೆಲೆಯಲ್ಲಿ ನೀರನ್ನು ಸ್ಥಗಿತ ಮಾಡಲಾಗಿದೆ.

ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ 75 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. 10 ದಿನದಲ್ಲಿ 62 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗಿತ್ತು. ಅದರಂತೆಯೇ ಕಾವೇರಿ ಪ್ರಾಧಿಕಾರ ಸೂಚನೆಯಂತೆ ಕರ್ನಾಟಕ ನೀರು ಹರಿಯಬಿಟ್ಟಿದೆ. ಇದೀಗ ನೀರು ಬಿಡುವುದನ್ನು ಕರ್ನಾಟಕ ನಿಲ್ಲಿಸಿದೆ.

ಕಳೆದ ಮೂರು ದಿನಗಳಿಂದ ಡ್ಯಾಂ ಕೆಳ ಭಾಗದ ಪ್ರದೇಶದಲ್ಲಿ ಮಳೆಯಾಗುತ್ತಿದೆ. 11 ಸಾವಿರ ಕ್ಯೂಸೆಕ್ ನೀರು ಮಳೆ ರೂಪದಲ್ಲಿ ತಲುಪಿದೆ. KRS ಡ್ಯಾಂ ಹಾಗೂ ಮಳೆಯಿಂದ ಒಟ್ಟು 62 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹೋಗಿದೆ. ನದಿಯಲ್ಲಿ ಹರಿಯುತ್ತಿರುವ ನೀರು ಸಂಪೂರ್ಣ ತಲುಪಿದ್ರೆ ಉಳಿದ 13 ಸಾವಿರ ಕ್ಯೂಸೆಕ್ ನೀರು ತಲುಪಲಿದೆ. ಅಲ್ಲಿಗೆ ಪ್ರಾಧಿಕಾರದ ಆದೇಶದಂತೆ 75 ಸಾವಿರ ಕ್ಯೂಸೆಕ್ ಕೋಟಾವನ್ನು ರಾಜ್ಯ ಸರ್ಕಾರ ಮುಗಿಸಿದೆ.

ಇಂದಿನಿಂದ ತಮಿಳುನಾಡಿಗೆ ನೀರು ನಿಲ್ಲಿಸಿ ನಾಲೆಗಳಿಗೆ ನೀರು ಬಿಡುಗಡೆ ಮಾಡಿದೆ. ಎರಡನೇ ಕಟ್ಟಿನಲ್ಲಿ ನಾಲೆಗಳಿಗೆ ನೀರು ಬಿಡುಗಡೆ ಮಾಡಿದೆ. ರೈತರ ಹೋರಾಟಕ್ಕೆ ಮಣಿದು ಸದ್ಯ 2ನೇ ಕಟ್ಟಿನಲ್ಲಿ ನಾಲೆಗಳಿಗೆ ನೀರು ಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KRS Dam: ಕಾವೇರಿ ಕಂಟಕ.. ತಮಿಳುನಾಡಿಗೆ ನೀರು ಬಿಡುಗಡೆ ಸ್ಥಗಿತ ಮಾಡಿದ ರಾಜ್ಯ ಸರ್ಕಾರ

https://newsfirstlive.com/wp-content/uploads/2023/07/KRS-dam-2.jpg

Load More