ಇಂದು ಕೂಡ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ
7 ದಿನಗಳಲ್ಲಿ ತಮಿಳುನಾಡಿಗೆ 3 TMC ನೀರು ಹರಿಯಬಿಡಲಾಗಿದೆ
ಮಂಡ್ಯ, ಮೈಸೂರು ಜನರಿಗೆ ಕುಡಿಯಲು ಕಾವೇರಿ ನೀರೆ ಆಸರೆ
ಮಂಡ್ಯ: ಕೆಆರ್‌ಎಸ್ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಇನ್ನು ಡ್ಯಾಂನಲ್ಲಿರೋದು ಕೇವಲ 21 ಟಿಎಂಸಿ ನೀರು ಮಾತ್ರ. ಎಂದಿನಂತೆ ಇಂದು ಕೂಡ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, 5 ಸಾವಿರಕ್ಕೂ ಕ್ಯೂಸೆಕ್ ಹೆಚ್ಚಿನ ಪ್ರಮಾಣದ ನೀರು ಬಿಡಲಾಗುತ್ತಿದೆ.
ಕಳೆದ ಏಳು ದಿನಗಳಲ್ಲಿ ತಮಿಳುನಾಡಿಗೆ 3 ಟಿಎಂಸಿ ನೀರು ಹರಿಯಬಿಡಲಾಗಿದೆ. ಇನ್ನೂ 7 ದಿನ KRSನಿಂದ 5000 ಕ್ಯೂಸೆಕ್ ನೀರು ಹರಿದರೆ ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಕುಸಿಯಲಿದೆ. ಉಳಿದ 7 ದಿನ ತಮಿಳುನಾಡಿಗೆ ನೀರು ಹೋದರೆ KRS ನಲ್ಲಿ 17 ಟಿಎಂಸಿ ನೀರು ಉಳಿಯಲಿದೆ. ಆ ಪೈಕಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿ ಉಳಿಯಲಿದೆ. ಅಲ್ಲಿಗೆ ಬಳಕೆಗೆ ಸಿಗೋದು ಕೇವಲ 12 ಟಿಎಂಸಿ ನೀರು ಎನ್ನಲಾಗುತ್ತಿದೆ.
ಡ್ಯಾಂನಲ್ಲಿ ಉಳಿಯುವ 12 ಟಿಎಂಸಿ ನೀರು ಕುಡಿಯಲು ಸಾಕಾಗುವುದಿಲ್ಲ. ಮತ್ತೊಂದೆಡೆ ಸರಿಯಾದ ಪ್ರಮಾಣದಲ್ಲಿ ಮಳೆ ಬಾರದೇ ಹೋದರೆ ಕಾವೇರಿ ನೀರು ಕುಡಿಯೋ ಜನರಿಗೆ ಸಮಸ್ಯೆ ಎದುರಾಗುವುದರಲ್ಲಿ ಅನುಮಾನವಿಲ್ಲ.
ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು ಜನರಿಗೆ ಕುಡಿಯಲು ಕಾವೇರಿ ನೀರೆ ಆಸರೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೆಲವೇ ದಿನಗಳಲ್ಲಿ ಕುಡಿಯುವ ನೀರು ಹಾಹಾಕಾರ ಶುರುವಾಗಲಿದೆ.
ಕೆಆರ್‌ಎಸ್ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ
ಗರಿಷ್ಟ ಮಟ್ಟ : 124.80 ಅಡಿಗಳು
ಇಂದಿನ ಮಟ್ಟ : 98.60 ಅಡಿಗಳು
ಗರಿಷ್ಠ ಸಂಗ್ರಹ : 49.452 ಟಿಎಂಸಿ
ಇಂದಿನ ಸಂಗ್ರಹ : 21.734 ಟಿಎಂಸಿ
ಒಳಹರಿವು : 2,432 ಕ್ಯೂಸೆಕ್
ಹೊರಹರಿವು : 6,294 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ