ಇಂದು ಕೂಡ ಕೆಆರ್ಎಸ್ ನೀರು ತಮಿಳುನಾಡಿಗೆ ರಿಲೀಸ್
ಮಳೆಯಿಲ್ಲದೆ106 ಅಡಿಗೆ ಕುಸಿದ ಡ್ಯಾಂ ನೀರಿನ ಮಟ್ಟ
ರೈತರ ಹೋರಾಟಕ್ಕೆ ಕ್ಯಾರೆ ಎನ್ನದ ಕರ್ನಾಟಕ ಸರ್ಕಾರ
KRS ಡ್ಯಾಂನಿಂದ ತಮಿಳುನಾಡಿಗೆ ನೀರು ರಿಲೀಸ್ ಹಿನ್ನೆಲೆ, ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಮಳೆಯಿಲ್ಲದ ಹಿನ್ನಲೆ 106 ಅಡಿಗೆ ಕುಸಿದಿದೆ.
ಪ್ರತಿ ದಿನ ತಮಿಳುನಾಡಿಗೆ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇದರಿಂದಾಗಿ ಕಾವೇರಿ ತಾಯಿ ಒಡಲು ಬರಿದಾಗುತ್ತಿದೆ. ರಾಜ್ಯ ಸರ್ಕಾರವಂತೂ ಮಂಡ್ಯ ರೈತರ ಹೋರಾಟಕ್ಕೆ ಕ್ಯಾರೆ ಎನ್ನದ ಸಮ್ಮನಾಗಿದೆ. ಇಂದು ಡ್ಯಾಂನಿಂದ ತಮಿಳುನಾಡಿಗೆ 15.373 ಕ್ಯೂಸೆಕ್ ನೀರು ಬಿಡಲಾಗಿದೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಿದೆ. ಮತ್ತೊಂದೆಡೆ ಮಳೆ ಇಲ್ಲದೆ ಜನರು ಬೀಜ ಬಿತ್ತಲು ಹಿಂದೇಟು ಹಾಕಿದ್ದಾರೆ. ನೀರು ಇಲ್ಲದೆ ಕೃಷಿ ಮಾಡಲು ಕಷ್ಟಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಇರುವ ನೀರನ್ನು ಬೇರೆ ರಾಜ್ಯಕ್ಕೆ ಹರಿಯಬಿಟ್ಟು, ಇಲ್ಲಿನ ರೈತರಿಗೆ ನೀರಿಲ್ಲದಂತೆ ಮಾಡುತ್ತಿರೋ ರಾಜ್ಯ ಸರ್ಕಾರದ ನಡೆಗೆ ಜನಸಾಮಾನ್ಯರು ಕೆಂಡಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ